ಮಂಗಳೂರಿನಲ್ಲಿ ಯುನೈಟೆಡ್ ಕ್ರಿಕೆಟ್ ಲೀಗ್ ಎಂಬ ಅಂಡರ್ ಕ್ರಿಕೆಟ್ ಟೂರ್ನಮೆಂಟ್ ಶೀಘ್ರದಲ್ಲೇ ಬರಲಿದೆ. ಇದು ಎರಡು ದಿನಗಳ ಕಾಲ ನಡೆಯುವ ಹೊನಲು ಬೆಳಕಿನ ಪಂದ್ಯಾಕೂಟವಾಗಿದ್ದು ಏಪ್ರಿಲ್ 13 ಮತ್ತು 14ರಂದು ಊರ್ವ ಮೈದಾನದಲ್ಲಿ ನಡೆಯಲಿದೆ.
ಇದು ಯುನೈಟೆಡ್ ಕ್ರಿಕೆಟ್ ಲೀಗ್ ನ ಐದನೆಯ ಆವೃತ್ತಿಯಾಗಿದ್ದು ಹತ್ತು ತಂಡಗಳ ನಡುವಿನ ಸ್ಪರ್ಧೆಯಾಗಿರುತ್ತದೆ.
ಒರಿಜಿನ್ ಅಡ್ವರ್ಟೈಸಿಂಗ್ ಏಜನ್ಸಿ ಮತ್ತು ಚಾರ್ವಿ ಕಮ್ಯುನಿಕೇಷನ್ ಪ್ರೈವೇಟ್. ಲಿಮಿಟೆಡ್ ಈ ಬೃಹತ್ ಟೂರ್ನಿಯನ್ನು ಪ್ರಸ್ತುತಪಡಿಸುತ್ತಿದೆ ಎಂಬ ಈ ಎಲ್ಲಾ ಮಾಹಿತಿಗಳನ್ನು ಆಯೋಜಕರಲ್ಲಿ ಓರ್ವರಾದ ಕೊಂಚಾಡಿ ನರಸಿಂಹ ಶೆಣೈ
ಇವರು ಸ್ಪೋರ್ಟ್ಸ್ ಕನ್ನಡಕ್ಕೆ ತಿಳಿಸಿದ್ದಾರೆ. ಹೆಚ್ಚಿನ ವಿವರಗಳನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.
ಬರಹ: ಸುರೇಶ್ ಭಟ್ ಮುಲ್ಕಿ
{ ಸ್ಪೋರ್ಟ್ಸ್ ಕನ್ನಡ ಕ್ರೀಡಾ ಈವೆಂಟ್ ಬ್ರಾಡ್‌ಕಾಸ್ಟಿಂಗ್ ಚಾನೆಲ್ ಆಗಿದ್ದು ಲೈವ್ ಕ್ರಿಕೆಟ್ ಟೂರ್ನಮೆಂಟ್ ಮತ್ತು ಇನ್ನಿತರ ಈವೆಂಟ್‌ಗಳನ್ನು ಪ್ರಸಾರ ಮಾಡುತ್ತದೆ. ನೇರ ಪ್ರಸಾರ ಮತ್ತು ಲೈವ್ ಸ್ಟ್ರೀಮಿಂಗ್ ಗಾಗಿ ನಮ್ಮನ್ನು ಸಂಪರ್ಕಿಸಿ @ 6363022576 ಅಥವಾ 9632178537 }