ದಾವಣಗೆರೆಯಲ್ಲಿ ರವಿವಾರ ಮುಕ್ತಾಯಗೊಂಡ ದಾವಣಗೆರೆಯ ಶ್ಯಾಮನೂರು ಶಿವಗಂಗಾ ಕಪ್ ನ ಫೈನಲ್ ಪಂದ್ಯದಲ್ಲಿ ಅದ್ಭುತ ಫಾರ್ಮ್ ನಲ್ಲಿರುವ ನ್ಯಾಶ್ ಬೆಂಗಳೂರಿನ ಆರಂಭಿಕ ಆಟಗಾರ ಅಕ್ಷಯ್ ಸಿ.ಕೆ, ರಿಯಲ್ ಫೈಟರ್ಸ್ ಮಲ್ಪೆ ತಂಡದ ನಾಯಕ ಪ್ರಕಾಶ್ ಮುನ್ನಾ ಅವರ ಅದ್ಭುತ ಸ್ಟಂಪಿಂಗ್ ಗೆ ಬಲಿಯಾಗಿದ್ದರು.
ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ರಿಯಲ್ ಫೈಟರ್ಸ್ 4 ಓವರ್ ಗಳಲ್ಲಿ 32 ರನ್ ಗಳ ಗುರಿಯನ್ನು ನ್ಯಾಶ್ ಗೆ ನೀಡಿತ್ತು. ರಿಯಲ್ ಫೈಟರ್ಸ್ ನ ಎಸೆತಗಾರರ ತೀಕ್ಷ್ಣ ದಾಳಿಗೆ ರನ್ ಗಳಿಸಲು ಪರದಾಡಿದ ನ್ಯಾಶ್ ತಂಡವನ್ನು ಅಕ್ಷಯ್ ಸಿ.ಕೆ ಆಧರಿಸುವ ಲಕ್ಷಣ ಕಂಡು ಬಂದಿತ್ತು.
ರಿಯಲ್ ಫೈಟರ್ಸ್ ನ ಪರ್ವೇಜ್ ಎಸೆದ 4 ನೇ ಓವರ್ ನ ಮೊದಲ ಎಸೆತವನ್ನು ಅಕ್ಷಯ್ ಅಂದಾಜಿಸಲು ವಿಫಲರಾದರು. ವೇಗವಾಗಿ ಮುನ್ನುಗ್ಗಿ ಬಂದ ಚೆಂಡನ್ನು ಹಿಡಿದು ಕ್ಷಿಪ್ರಗತಿಯಲ್ಲಿ ಸ್ಟಂಪ್ ಮಾಡುವಲ್ಲಿ ಪ್ರಕಾಶ್ ಮುನ್ನಾ ಯಶಸ್ವಿಯಾದರು. ಅಂತಿಮವಾಗಿ ರಿಯಲ್ ಫೈಟರ್ಸ್ ದಾವಣಗೆರೆಯ 12ನೇ ಬಾರಿಯ ಶ್ಯಾಮನೂರು ಡೈಮಂಡ್, ಶಿವಗಂಗಾ ಕಪ್ ನ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.
-ಆರ್.ಕೆ.ಆಚಾರ್ಯ ಕೋಟ