ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್ ಗೇಮ್ಸ್ ನ ವನಿತೆಯರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾದ ಮಹಿಳೆಯರು ಟೂರ್ನಿ ಉದ್ದಕ್ಕೂ ಅತ್ಯುತ್ತಮ ಆಟದ ಪ್ರದರ್ಶನ ನೀಡಿ ಫೈನಲ್ ಹಂತದ ಪಂದ್ಯದಲ್ಲಿ ಸ್ವಲ್ಪದರಲ್ಲೇ ಚಿನ್ನದ ಪದಕದಿಂದ ವಂಚಿತರಾಗಿದ್ದಾರೆ.
ರೋಚಕ ಫೈನಲ್‌ನಲ್ಲಿ ಆಸ್ಟ್ರೇಲಿಯಾ 9 ರನ್‌ಗಳಿಂದ ಭಾರತವನ್ನು ಸೋಲಿಸಿ ಚೊಚ್ಚಲ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದೆ. ಇದೇ ಮೊದಲ ಬಾರಿಗೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ವನಿತೆಯರ ಕ್ರಿಕೆಟ್ ಅನ್ನು ಸೇರಿಸಲಾಗಿತ್ತು.
ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ 161ರನ್ ಗಳ ಗೌರವ ಮೊತ್ತವನ್ನು ಕಲೆಹಾಕಿತು. ಗೆಲ್ಲಲು 162 ರನ್‌ಗಳ ಗುರಿಯನ್ನು ಪಡೆದ ಭಾರತ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿದ್ದರೂ ನಾಯಕಿ ಹರ್ಮನ್‌ಪ್ರೀತ್ ಕೌರ್, ಜೆಮಿಮಾ ರಾಡಿಗ್ರಾಸ್ ಹೋರಾಟದಿಂದ ಗೆಲುವಿನ ಸಮೀಪಕ್ಕೆ ತಲುಪಿತ್ತು.
ಆದರೆ ಕೊನೆಯಲ್ಲಿ ವಿಕೆಟ್ ಕಳೆದುಕೊಳ್ಳುವುದರೊಂದಿಗೆ ಅಂತಿಮವಾಗಿ 19.3 ಓವರ್‌ಗಳಲ್ಲಿ 152 ರನ್‌ಗಳಿಗೆ ಆಲೌಟ್ ಅಗಿ ಇಂಗ್ಲೆಂಡ್ ತಂಡಕ್ಕೆ ಶರಣಾಗುವುದರೊಂದಿಗೆ ಭಾರತೀಯ ವನಿತೆಯರ ಚಿನ್ನದ ಪದಕದ ಕನಸು ಕಮರಿ ಹೊಯಿತು…
ಇಂಗ್ಲೆಂಡ್ ಮೊತ್ತವನ್ನು ಬೆನ್ನತ್ತಲು ಅಂಕಣಕ್ಕೆ ಇಳಿದ ಭಾರತ ಕೇವಲ 22 ರನ್‌ಗಳಿಸುವಷ್ಟರಲ್ಲೇ ಆರಂಭಿಕ ಆಟಗಾರ್ತಿಯರಾದ ಸ್ಮೃತಿ ಮಂದನಾ ಮತ್ತು ಶಫಾಲಿ ವರ್ಮಾ ಅವರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಜೊತೆಯಾದ ಜೆಮಿಮಾ ಮತ್ತು ನಾಯಕಿ ಕೌರ್ ರಕ್ಷಣಾತ್ಮಕವಾಗಿ ಆಡುವುದರ ಜೋತೆಗೆ ರನ್ ಕಲೆ ಹಾಕುತ್ತ ಗೆಲುವಿನ ಆಡಿಪಾಯ ಹಾಕಿ ಇನ್ನಿಂಗ್ಸ್ ಕಟ್ಟತೊಡಗಿದರು. ಇವರಿಬ್ಬರು ಮೂರನೇ ವಿಕೆಟ್ ಜೊತೆಯಾಟಕ್ಕೆ 71 ಎಸೆತಗಳಲ್ಲಿ 96 ರನ್ ಹರಿದು ಬಂತು ಇನ್ನೇನು ಗೆಲುವಿನ ಆಸೆ ಚಿಗುರಿತ್ತು ಆ ಸಮಯದಲ್ಲೇ ಉತ್ತಮವಾಗಿ ಆಡುತ್ತಿದ್ದ ಜೇಮಿಯಾ ಮತ್ತು ಕೌರ್ ಇವರಿಬ್ಬರು ಔಟಾಗಿ ಪೆವಿಲಿಯನ್ ಗೆ ತೆರಳಿದ ಬೆನ್ನಿಗೆ ಟೀಂ ಇಂಡಿಯಾದ ಪತನ ಕೂಡ ಆರಂಭವಾಯಿತು.
14.3 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 118 ರನ್‌ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಭಾರತ ನಂತರ ಕೇವಲ 34 ರನ್ ಗಳಿಸುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡು ಸೋಲಿಗೆ ಶರಣಾಗಿತ್ತು.
ಮಧ್ಯಮ ಕ್ರಮಾಂಕದ ಆಟಗಾರರು ಮತ್ತು ಬೌಲರ್‌ಗಳಿಂದ ಬ್ಯಾಟಿಂಗ್ ಪ್ರದರ್ಶನ ಬಾರದ ಕಾರಣ ಪಂದ್ಯವನ್ನು ಭಾರತ ಕೈಚೆಲ್ಲಿತು.
ಹರ್ಮನ್ ಪ್ರೀತ್ ಕೌರ್ ನಾಯಕತ್ವದ ಜವಬ್ದಾರಿಯುತ 65 ರನ್(43 ಎಸೆತ, 7 ಬೌಂಡರಿ, 2 ಸಿಕ್ಸರ್) ಕಲೆಹಾಕಿದರೆ. ಜೆಮಿಮಾ 33 ರನ್(33 ಎಸೆತ, 3 ಬೌಂಡರಿ) ದೀಪ್ತಿ ಶರ್ಮಾ 13 ರನ್ ಗಳಿಸಿ ಔಟಾದರು.
ಟಾಸ್ ಸೋತು ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯಾ ಪರವಾಗಿ ಬೆಥ್ ಮೂನಿ 61 ರನ್(41 ಎಸೆತ, 8 ಬೌಂಡರಿ) ಮೆಗ್ ಲ್ಯಾನಿಂಗ್ 36 ರನ್(26 ಎಸೆತ, 5 ಬೌಂಡರಿ, 1 ಸಿಕ್ಸರ್), ಗಾರ್ಡ್‌ನರ್ 25 ರನ್(15 ಎಸೆತ, 2 ಬೌಂಡರಿ, 1 ಸಿಕ್ಸರ್) ಹೊಡೆದ ಪರಿಣಾಮ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಆಸ್ಟ್ರೇಲಿಯಾ 161 ರನ್ ಗಳ ಉತ್ತಮ ಮೊತ್ತವನ್ನು ಕಲೆಹಾಕಿತು.
ಮೊದಲ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಚಿನ್ನದ ಪದಕದ ಸಮೀಪಕ್ಕೆ ಹೋಗಿ ಪಂದ್ಯವನ್ನು ಕೈಚಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿ ಪಡುವಂತಾಯಿತು…
ಅದೇನೇ ಇರಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಅಡಿದ ಮೊದಲ ಕೂಟದಲ್ಲೆ ಬೆಳ್ಳಿ ಗೆದ್ದು ಬಿಗಿದೆ ಇದು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸ ತಂದಿದೆ