Categories
Uncategorized

ಜನಪ್ರಿಯತೆಯ ಉತ್ತುಂಗ ಶಿಖರದಲ್ಲೇಕೆ ಕ್ರಿಕೆಟ್!

ಕ್ರಿಕೆಟ್ ಕ್ರಿಕೆಟ್ ಕ್ರಿಕೆಟ್ ಯಾಕೆ ಈ ಆಟ ಇಷ್ಟೊಂದು ಜನರ ಸೆಳೆಯುತ್ತೆ? ಏನಿದೆ ಈ ಆಟದಲ್ಲಿ? ಎಲ್ಲೋ ಗಲ್ಲಿ ಕ್ರಿಕೆಟ್ ಟೂರ್ನಿಯ ರಾತ್ರಿ 4ಗಂಟೆಗೆ ಸುಮಾರು 500-1000 ಜನರು ವೀಕ್ಷಿಸುತ್ತಾರೆ ಎಂದಾದರೆ ಅದರ ಸೆಳೆತ ಯಾವ ಮಟ್ಟದಲ್ಲಿ ಇದೆ ಎಂಬುದು ಅಂದಾಜು ಮಾಡಬಹುದು.
ನಾವು ಚಿಕ್ಕಂದಿನಿಂದ ಈವರೆಗೆ ಎಷ್ಟೋ ಆಟ ಆಡಿ ನೋಡಿ ಬಿಟ್ಟರೂ ಈ‌ ಗೇಂ ಯಾಕೆ ನಮ್ಮನ್ನು ಸುಲಭವಾಗಿ ಬಿಟ್ಟು ಹೋಗೊಲ್ಲ?. ಅಮೆರಿಕಾನ್ಸ್ ಗೆ ಇದು “ಮೂರ್ಖರ ಆಟ” ಆದರೆ ಇಲ್ಲಿ ಕ್ರಿಕೆಟ್ ಪ್ರಿಯರಿಗೆ ಅದು ಜೀವನದ ಒಂದು ಅಂಗ. ಯಾವಾಗ ಕಪಿಲ್ ದೇವ್ ವೆಸ್ಟ್ಇಂಡೀಸ್ ಮಣಿಸಿ ವರ್ಲ್ಡ್ ಕಪ್ ಎತ್ತಿಹಿಡಿದನೋ ಆಮೇಲೆ ಸ್ವಲ್ಪಜಾಸ್ತಿಯೇ ಎನ್ನುವಂತೆ ಇದರ ಕ್ರೇಜ್ ದೇಶದ ಮೂಲೆ ಮೂಲೆಗೆ ವಯೋವ್ಯತ್ಯಾಸ ಇಲ್ಲದೆ ಹರಡಿದೆ. ಕೆಲವೊಂದು ಬಾರಿ ತನ್ನ ದೇಶದ ಹೀನಾಯ ಸೋಲಿಗೆ ಪ್ರತೀಕಾರ ಎಂಬಂತೆ “ಇನ್ನು ಮುಂದೆ ಕ್ರಿಕೆಟ್ ನೊಡೊಲ್ಲ” ಎಂದು ಭೀಷ್ಮ ಶಪಥ ಮಾಡಿದ ಮಂದಿಯೂ ಮುಂದಿನ ಮ್ಯಾಚ್ Start ಆದಾಗ ಎಲ್ಲಾ ಮರೆತು  “ಏಯ್ Score ಎಷ್ಟಾಯಿತಾ”? ಎಂದು ಕೇಳಿದಾಗ ಏನೋ ಒಂದು ರೀತಿಯ ನಗು ಬರುತ್ತೆ. ಅದು ಅವರ ತಪ್ಪಲ್ಲ ಬಿಡಿ ಆ ಗೇಮ್ ನ ಆಕರ್ಷಣೆ.
India Pakistan ಮ್ಯಾಚ್ ಆದರೆ ಮುಗಿದೇ ಹೋಯಿತು ಬಿಡಿ ಮ್ಯಾಚ್ start ಆದರೆ ಹೆದ್ದಾರಿಗಳಲ್ಲಿ ಕರ್ಫ್ಯೂ ಅನುಭವ. Failure ಆದ ಆಟಗಾರ ಆವತ್ತು ನಮ್ಮ ಪಾಲಿಗೆ ವಿಲನ್. ನಮ್ಮ ತರಗತಿಯ ಹೆಚ್ಚಿನ ಗೆಳೆಯರಿಗೆ ಹೊಟ್ಟೆನೋವು, ಜ್ವರ ತಲೆನೋವು ತರಿಸ್ತಾ ಇದ್ದ ಈ ಕ್ರಿಕೆಟ್ ಕೆಲಸಕ್ಕೆ ಹೋದವರು ಏನೋ ಒಂದು ನೆವ ಹೇಳಿ TV  ಮುಂದೆ 6hours ಹಾಜರ್.
ಆಧುನಿಕ ಕಾಲದ ಬದಲಾವಣೆಗೆ ಕ್ರಿಕೆಟ್ ಕೂಡಾ ಹೊರತಾಗಿಲ್ಲ DRS REVIEW ಇತ್ಯಾದಿಗಳ ಅಳವಡಿಕೆ ದೊಡ್ಡ ಮಟ್ಟದ ವಿರೋದವಿದ್ದರೂ ಸ್ವೀಕರಿಸದೆ ಉಪಾಯವಿಲ್ಲ. ಇತ್ತೀಚಿನ ದಿನಗಳ 20-20 IPL ಟೂರ್ನಿ ಕ್ರಿಕೆಟ್ ನ ನೈಜ ರೋಚಕತೆ ಅಪಹರಿಸುತ್ತಿದೆ. ಮ್ಯಾಚ್ ಫಿಕ್ಸಿಂಗ್, ಸ್ಪಾಟ್ ಫಿಕ್ಸಿಂಗ್ ಮುಂತಾದ ಕಳ್ಳಾಟಗಳಿಗೆ ವೇದಿಕೆಯಾಗುತ್ತಿರುವ ಈ ಟೂರ್ನಿ ಬ್ಯಾನ್ ಆದರೆ ಉತ್ತಮ. ಆಯಾ ದೇಶದ ಆಟಗಾರರು ಆಯಾ ದೇಶಕ್ಕೆ ಆಡಿದರೆ ನೋಡಲು ಚಂದ,ವೀಕ್ಷಿಸಲು ಮಜಾ.
ಕೇವಲ ಕ್ರಿಕೆಟ್ನಿಂದ ಮನೆ ಮಾತಾಗಿರೋ ಸ್ಟಾರ್ ಅರವಿಂದ ಡಿ ಸಿಲ್ವ, ಆ್ಯಂಡಿ ಫ್ಲವರ್, ಕ್ರಿಸ್ ಕೇರ್ನ್ಸ್, ಸೈಯದ್ ಕೀರ್ಮಾನಿ,..ಬಿಡಿ ಬರೀತಾ ಹೋದರೆ ಪುಟ ಸಾಕಾಗೊಲ್ಲ.
ಏನೇ ಇರಲಿ ಕೇವಲ ಧಾರಾವಾಹಿ Episodeಗಳಿಗೆ ಮಾತ್ರ Importance ಕೊಡ್ತಾ ಇದ್ದ TV CHANNELಗಳು ಇತ್ತೀಚೆಗೆ Sports first balance next ಎನ್ನುವ ಮಟ್ಟಿಗೆ ತಲುಪಿದೆ ಎಂಬುದು ಸಲ್ಪ ಸಮಾಧಾನ.
ಕೊನೆಯದಾಗಿ ಹಳೆಯ ಮಾದರಿಯ ಟೆಸ್ಟ್ ಕ್ರಿಕೆಟ್ ಇನ್ನಷ್ಟು ಪ್ರಚಾರಕ್ಕೆ ಬರಲಿ, ಲೋಕಲ್ ಕ್ರಿಕೆಟ್ ನಲ್ಲೂ minimum 10overs ಪಂದ್ಯಾಟ ನಡೆಯಲಿ. ಕ್ರಿಕೆಟ್ ಕೇವಲ ಮನೋರಂಜನಾ ಕ್ರೀಡಾ ಕ್ಷೇತ್ರದಲ್ಲಿ ಇರಲಿ ವ್ಯವಹಾರ ವಿಷಯ ಆಗದೆ ಇರಲಿ ಎಂಬುದಷ್ಟೆ ಆಶಯ.
LIVECRICKET LOVECRICKT 😍
ಅಶೋಕ್ ಹೆಗ್ಡೆ ಹೆಬ್ರಿ

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

7 + six =