ಬಹುನಿರೀಕ್ಷಿತ ವೊಳಲಂಕೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ ಮೆಗಾ ಈವೆಂಟ್ ಅನ್ನು ಡಿಸೆಂಬರ್ ನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.
ಮೂಲ್ಕಿಯಲ್ಲಿ ಸಾಗುವ ಈ ಟೂರ್ನಿಯಲ್ಲಿ ಜಿ ಎಸ್ ಬಿ ಗಳ 16 ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ವೊಳಲಂಕೆ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ಮೂಲ್ಕಿ ಇವರ ಆಶ್ರಯದಲ್ಲಿ ನಡೆಯುವ ಈ ಟೂರ್ನಿ ಸಾಕಷ್ಟು ಕುತೂಹಲ ಮೂಡಿಸಿದ್ದು ಜಿ ಎಸ್ ಬಿ ಗಳ ಬಲಿಷ್ಠ ತಂಡಗಳ ನಡುವಿನ ಈ ಕಾದಾಟವನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಖಂಡಿತವಾಗಿಯೂ ಇದು ವರ್ಷದ ಅತಿದೊಡ್ಡ ಕ್ರಿಕೆಟ್ ಟೂರ್ನಮೆಂಟ್ ಆಗಿದ್ದು ಇದು ಐತಿಹಾಸಿಕ ಕ್ಷಣವಾಗಿದೆ. ಇನ್ನು ಈ ಟೂರ್ನಿ ಡೇ ಅಂಡ್ ನೈಟ್ ರೂಪದಲ್ಲಿ ನಡೆಯಲಿದ್ದು ಕುತೂಹಲ ಹೆಚ್ಚಿಸಿದೆ.
ವೊಳಲಂಕೆ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ಆಯೋಜನೆ ಮಾಡುವ ಈ ಲೀಗ್ ಡಿಸೆಂಬರ್ 8 ರಿಂದ ಆರಂಭವಾಗಲಿದ್ದು ಕುತೂಹಲ ಮೂಡಿಸಿದೆ. ಡಿಸೆಂಬರ್ 8 ರಿಂದ 10 ರವರೆಗೆ ಇದು ಮುಲ್ಕಿ ವಿಜಯ ಕಾಲೇಜು ಮೈದಾನದಲ್ಲಿ ಆಯೋಜನೆಯಾಗಲಿದೆ.
ಪ್ರತೀ ತಂಡಕ್ಕೂ ಆಟಗಾರರನ್ನು ಹರಾಜು ಮೂಲಕ ಆಯ್ಕೆ ಮಾಡಲಾಗುವುದು ಭಾಗವಹಿಸಲು ಇಚ್ಛಿಸುವ ತಂಡಗಳು ಮತ್ತು ಆಟಗಾರರು ಆಯೋಜನೆ ಮಾಡುವ ಮಂಡಳಿಯನ್ನು ಕೂಡಲೇ ಸಂಪರ್ಕಿಸಿ.
ಸುರೇಶ ಭಟ್ ಮೂಲ್ಕಿ
ಕ್ರಿಕೆಟ್ ವ್ಯಾಖ್ಯಾನಕಾರ