ಕುಂದಾಪುರ- ಅಶೋಕ್ ಆಚಾರ್ ಮಾರ್ಗೋಳಿ ಇವರ ಸಾರಥ್ಯದಲ್ಲಿ,ಕರ್ನಾಟಕ ವಿಶ್ವಕರ್ಮ ಸಮಾಜದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಅತೀ ಗರಿಷ್ಠ ಮೊತ್ತದ ಬಹುಮಾನದ,ಹೊನಲು ಬೆಳಕಿನ ರಾಜ್ಯ ಮಟ್ಟದ 60 ಗಜಗಳ ಕ್ರಿಕೆಟ್ ಪಂದ್ಯಾಟ ವಿಶ್ವಕರ್ಮ ಟ್ರೋಫಿ-2023 ಆಯೋಜಿಸಲಾಗಿದೆ.
ಜನವರಿ 14 ಮತ್ತು 15 ರಂದು ಕ್ರಿಕೆಟ್ ಕಾಶಿ ಕುಂದಾಪುರದ ಗಾಂಧಿ ಮೈದಾನದಲ್ಲಿ,ಲೀಗ್ ಮಾದರಿಯಲ್ಲಿ ಈ ಪಂದ್ಯಾಟ ಹೊನಲು ಬೆಳಕಿನಲ್ಲಿ ಸಾಗಲಿದ್ದು,ಹೊಸನಗರ,ಉಡುಪಿ,ಮಂಗಳೂರು ,ಕುಂದಾಪುರ ಮತ್ತು ಕಾರ್ಕಳ ಪರಿಸರದ ವಿಶ್ವಕರ್ಮ ಸಮಾಜದ ಒಟ್ಟು 20 ತಂಡಗಳು ಭಾಗವಹಿಸಲಿದೆ.
ಪ್ರಥಮ ಸ್ಥಾನಿ 1,03,333 ರೂ ಮತ್ತು ದ್ವಿತೀಯ ಸ್ಥಾನಿ 55,555 ರೂ ಸಹಿತ ಆಕರ್ಷಕ ಪಾರಿತೋಷಕಗಳನ್ನು ಪಡೆಯಲಿದ್ದಾರೆ,ವೈಯಕ್ತಿಕ ಶ್ರೇಷ್ಠ ನಿರ್ವಹಣೆ ಪ್ರದರ್ಶಿಸಿದ ಆಟಗಾರರಿಗೆ ವಿಶೇಷ ಬಹುಮಾನಗಳನ್ನು ನೀಡಲಾಗುತ್ತಿದೆ ಹಾಗೂ ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾದ ಆಟಗಾರ ಆಕರ್ಷಕ ಸೈಕಲ್ ಉಡುಗೊರೆ ರೂಪದಲ್ಲಿ ಪಡೆಯಲಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ವಿಶ್ವಕರ್ಮ ಸಮಾಜದ ಗಣ್ಯಾತಿಗಣ್ಯರು ಆಗಮಿಸಲಿದ್ದು,ವೇದಿಕೆಯಲ್ಲಿ ವಿಶ್ವಕರ್ಮ ಸಮಾಜದ ಸಾಧಕರಿಗೆ ಗೌರವ ಹಾಗೂ ಅಶಕ್ತರಿಗೆ ಧನಸಹಾಯ ವಿತರಿಸಲಾಗುತ್ತಿದೆ.
ಪಂದ್ಯಾಟದ ನೇರ ಪ್ರಸಾರ See4 ಯೂ ಟ್ಯೂಬ್ ಚಾನೆಲ್ ನಲ್ಲಿ ಬಿತ್ತರಗೊಳ್ಳಲಿದೆ.