2017ರಲ್ಲಿ ಏಕದಿನ ಮತ್ತು ಟಿ-ಟ್ವೆಂಟಿ ನಾಯಕತ್ವ ತ್ಯಜಿಸಿದ ಧೋನಿ, ಇನ್ನೂ ಕೆಲ ಕ್ರಿಕೆಟಿಗರ ಪಾಲಿಗೆ ನಾಯಕನಾಗೇ ಉಳಿದುಕೊಂಡಿದ್ದಾರೆ. ಮೂರು ವರ್ಷಗಳ ಹಿಂದೆ ಟೆಸ್ಟ್ ಕ್ರಿಕೆಟ್ಗೆ ಗುಡ್ಬೈ ಹೇಳಿದ ಧೋನಿ, ಟೀಮ್ ಇಂಡಿಯಾದ ಕ್ರಿಕೆಟಿಂಗ್ ಬ್ರೈನ್ ಅಂತಾನೇ ಗುರುತಿಸಿಕೊಂಡಿದ್ದಾರೆ. ಇದನ್ನ ಆಟಗಾರರಷ್ಟೇ ಅಲ್ಲ.. ಸ್ವತಃ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯೂ ಹೇಳಿಕೊಂಡಿದ್ದಾರೆ. ಮತ್ತೊಂದೆಡೆ ಐಪಿಎಲ್ ಫ್ರಾಂಸೈಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಧೋನಿ ನಾಯಕತ್ವದಲ್ಲಿ ಆಡಿರೋ ಸುರೇಶ್ ರೈನಾ, ತಮ್ಮ ನಾಯಕನನ್ನ ಮನಸಾರೆ ಕೊಂಡಾಡಿದ್ದಾರೆ. ‘ ಪೇಪರ್ ಮೇಲೆ ಧೋನಿ ನಾಯಕನಾಗಿ ಇಲ್ಲದಿರಬಹುದು. ಆದ್ರೆ ಗ್ರೌಂಡ್ನಲ್ಲಿ ಕೊಹ್ಲಿಗೆ ಧೋನಿಯೇ ನಾಯಕ . ಧೋನಿ ನಾಯಕತ್ವ ತ್ಯಜಿಸಿದ್ದಾರೆ ನಿಜ. ಆದ್ರೆ ವಿಕೆಟ್ ಹಿಂದೆ ನಿಂತು ಬೌಲರ್ಗಳ ಜೊತೆ ಮಾತನಾಡೋದು, ಫೀಲ್ಡ್ ಸೆಟ್ ಮಾಡೋದು ಎಲ್ಲವೂ ಧೋನಿಯೇ. ಹೀಗಾಗಿ ಧೋನಿ ನಾಯಕರಿಗೆಲ್ಲಾ ನಾಯಕ ’ ಅಂತ ಎಡಗೈ ಬ್ಯಾಟ್ಸ್ಮನ್ ಸುರೇಶ್ ರೈನಾ, ಮಾಜಿ ನಾಯಕ ಎಂ.ಎಸ್.ಧೋನಿಯ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಸದ್ಯ ರೈನಾ ನದರ್ಲೆಂಡ್ನಲ್ಲಿ ತಮ್ಮ ಕುಟುಂಬಸ್ಥರ ಜೊತೆ ಕಾಲ ಕಳೆಯುತ್ತಿದ್ದಾರೆ.