ವಿಜಯನಗರ ಕ್ರಿಕೆಟರ್ಸ್ ತಂಡದ ವತಿಯಿಂದ ಜನವರಿ 8 ರಿಂದ 10 ರ ತನಕ ಕೋಲಾರ(ತಾ&ಜಿ)ವಿಜಯನಗರ ಪೂಜಾ ಕಲ್ಯಾಣ ಮಂಟಪದ ಪಕ್ಕ ಮಾಲೂರು ರಸ್ತೆ ಸಮೀಪದ ಮೈದಾನದಲ್ಲಿ “ವಿಜಯನಗರ ಪ್ರೀಮಿಯರ್ ಲೀಗ್-2021” ಕ್ರಿಕೆಟ್ ಪಂದ್ಯಾಕೂಟ ಆಯೋಜಿಸಲಾಗಿದೆ.
ಕೋಲಾರ ಜಿಲ್ಲೆಯ ಆಟಗಾರರಿಗೆ ಮಾತ್ರ ಆಡಲು ಅವಕಾಶವಿದ್ದು,ಈ ಟೂರ್ನಿಯನ್ನು ಬಿಡ್ಡಿಂಗ್(ಆಕ್ಷನ್)ಮೂಲಕ ನಡೆಸಲಾಗುತ್ತಿದೆ.ಮೂರು ಜನ ರಿಟೈನ್ ಮತ್ತು ಉಳಿದ ಆಟಗಾರರನ್ನು ಆಕ್ಷನ್ ಮೂಲಕ ತೆಗೆದುಕೊಳ್ಳಲಾಗಿದೆ.
ಪಂದ್ಯಾವಳಿಯ ಪ್ರಥಮ ಪ್ರಶಸ್ತಿ ವಿಜೇತ ತಂಡ 50 ಸಾವಿರ ನಗದು,ದ್ವಿತೀಯ ಸ್ಥಾನಿ 25 ಸಾವಿರ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.
M.Sports ನೇರ ಪ್ರಸಾರವನ್ನು ಬಿತ್ತರಿಸಲಿದೆ…