ಕರುನಾಡ ಸಿಂಹ ಸೇನೆ ಕರ್ನಾಟಕಇದರ ವತಿಯಿಂದ ನೀಡುವ ಕರುನಾಡ ಸಿರಿ ರಾಷ್ಟ್ರೀಯ ಪ್ರಶಸ್ತಿಗೆ,ಯೋಗ,ನೃತ್ಯದಲ್ಲಿ ಅನುಪಮ ಸಾಧನೆಗೈದ ಅವನಿ.ಎಂ.ಎಸ್ ಸುಳ್ಯ ಪಾತ್ರರಾಗಿದ್ದಾರೆ.ಮಾರ್ಚ್ 6 ರಂದುಬೆಂಗಳೂರಿನ ನಯನಾ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಖ್ಯಾತ ಸಾಹಿತಿ ದೊಡ್ಡರಂಗೇಗೌಡ,ಕರುನಾಡ ಸಿಂಹ ಸೇನೆ ಕರ್ನಾಟಕ ಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ಕಿಶೋರ್ ಗೌಡ,ನಿವೃತ್ತ ಯೋಧರು, ಮತ್ತಿತರ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸುಳ್ಯದ ಸೈಂಟ್ ಜೋಸೆಫ್ ಶಾಲೆಯಲ್ಲಿ 2 ನೇ ತರಗತಿಯಲ್ಲಿ ಓದುತ್ತಿರುವ ಅವನಿ.ಎಂ.ಎಸ್ ಇವರು ಸುಳ್ಯದ ಶಶಿಧರ ಎಂ.ಜೆ.ಮೋಂಟಡ್ಕ ಹಾಗೂ ರೇಷ್ಮಾ.ಕೆ.ಎಸ್ ದಂಪತಿಗಳ ಪುತ್ರಿ.
“ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ”
ಎಂಬಂತೆ ಯೋಗ,ನೃತ್ಯ,ಸಂಗೀತ,ನಟನೆ,ಚಿತ್ರ ಬಿಡಿಸಿವುದು ಹೀಗೆ ವಿವಿಧ ಕ್ಷೇತ್ರಗಳಲ್ಲಿ ಮೇಲುಗೈ ಸಾಧಿಸಿದ್ದಾಳೆ.
ಎಂಬಂತೆ ಯೋಗ,ನೃತ್ಯ,ಸಂಗೀತ,ನಟನೆ,ಚಿತ್ರ ಬಿಡಿಸಿವುದು ಹೀಗೆ ವಿವಿಧ ಕ್ಷೇತ್ರಗಳಲ್ಲಿ ಮೇಲುಗೈ ಸಾಧಿಸಿದ್ದಾಳೆ.
ಇವಳ ಸಾಧನೆಗೆ ಕೆ.ವಿ.ಜಿ.ಸುಳ್ಯ ಹಬ್ಬ ಪ್ರಶಸ್ತಿ,ಪ್ರಾಥಮಿಕ ಶಾಲಾ ಪ್ರತಿಭಾ ಕಾರಂಜಿ ಪ್ರಶಸ್ತಿ,ಗಾನಸಿರಿ ಪುಠಾಣಿ ಸಂಗೀತ ರತ್ನ ಪ್ರಶಸ್ತಿ,ಉತ್ತಮ ಕಲಾಕೃತಿ ಪ್ರಶಸ್ತಿ,ರಾಜ್ಯ ಮತ್ತು ಅಂತರಾಷ್ಟ್ರೀಯ ಮಟ್ಟದ ಯೋಗ ಪ್ರಶಸ್ತಿ,ಗೋಲ್ಡನ್ ಬುಕ್ ಆಫ್ ರೆಕಾರ್ಡ್-2021 ಪ್ರಶಸ್ತಿ,ಇತ್ತೀಚೆಗಷ್ಟೇ ಈಕೆಯ ಸಂಗೀತ ಹಾಗೂ ಅಭಿನಯದ ಮೂಲಕ ಮೂಡಿ ಬಂದ “ಸತ್ಯದ ನಿರೆಲ್” ಆಲ್ಬಮ್ ಬಿಡುಗಡೆಯ ವೇಳೆ “ಸ್ವರ ತರಂಗಿಣಿ” ಬಿರುದಿಗೆ ಪಾತ್ರಳಾಗಿದ್ದಾಳೆ.ಈಗಾಗಲೇ 1 ಆಲ್ಬಮ್ ಸಾಂಗ್ ನಲ್ಲಿ ಅಭಿನಯಿಸಿದ್ದಾರೆ, 1 ಆಲ್ಬಮ್ ಸಾಂಗ್ ನಲ್ಲಿ ಹಾಡಿ ಅಭಿನಯಿಸಿದ್ದಾರೆ, 1 ಕಿರುಚಿತ್ರದಲ್ಲಿ ನಟಿಸಿದ್ದಾಳೆ.
ಅವನಿ.ಎಂ.ಎಸ್ ಇವರು ಸುಗಮ ಸಂಗೀತವನ್ನು ರಂಗ ಮಯೂರಿ ಕಲಾ ಶಾಲೆಯಲ್ಲಿ 3 ವರುಷದಿಂದ ಅಭ್ಯಾಸ ಮಾಡುತ್ತಿದ್ದಾರೆ . ಇವರ ಸುಗಮ ಸಂಗೀತ ಗುರುಗಳು ಡಾ.ಕಿರಣ್ ಕುಮಾರ್ ಗಾನಸಿರಿ ಪುತ್ತೂರು,ಕುಮಾರಿ ಶ್ರೀ ಲಕ್ಷ್ಮೀ ಪುತ್ತೂರು, ಶಾಸ್ತ್ರೀಯ ಸಂಗೀತವನ್ನು ಮಹಾಬಲೇಶ್ವರ ಬಿರ್ಮಕಜೆ ಇವರಿಂದ ಅಭ್ಯಾಸ ಮಾಡುತ್ತಿದ್ದಾರೆ.,
ಯೋಗಾಭ್ಯಾಸವನ್ನು ಯೋಗೇನ ಚಿತ್ತಸ್ಯ ಸಂಸ್ಥೆಯ ಗುರುಗಳಾದ ಸಂತೋಷ್ ಮುಂಡಕಜೆ ಸುಳ್ಯ ಇವರಿಂದ ತರಬೇತಿ ಪಡೆಯುತ್ತಿದ್ದಾರೆ ,ನೃತ್ಯ ತರಬೇತಿಯನ್ನು ಡಿ.ಯುನೈಟೆಡ್ ಅಭಿ ಕುಲಾಲ್ ಇವರಿಂದ ಪಡೆಯುತ್ತಿದ್ದಾರೆ ಹಾಗೂ ಕಶ್ವಿ ಚೆಸ್ ಸ್ಕೂಲ್ ಕುಂದಾಪುರದಲ್ಲಿ ಚೆಸ್ ತರಬೇತಿ ಪಡೆಯುತ್ತಿದ್ದಾಳೆ. ಆಮಂತ್ರಣ ಮತ್ತು ಸಂಸ್ಕೃತಿ ಸಿರಿ ನಡೆಸಿದ ರಾಜ್ಯ ಮಟ್ಟದ ಸ್ಟಾರ್ ಸಿಂಗರ್ ನ ಸೆಮಿಫೈನಲಿಸ್ಟ್ ಕೂಡ ಆಗಿದ್ದಾರೆ.