ಉಡುಪಿ-ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ,ರಾಜ್ಯದ ಶಿಸ್ತುಬದ್ಧ ಸಂಸ್ಥೆ ವೆಂಕಟರಮಣ ಸ್ಪೋರ್ಟ್ಸ್&ಕಲ್ಚರಲ್ಸ್(ರಿ)ಇವರ ಆಶ್ರಯದಲ್ಲಿ,36ನೇ ವಾರ್ಷಿಕೋತ್ಸವದ ಅಂಗವಾಗಿ, ಫೆಬ್ರವರಿ 9,10ಮತ್ತು 11 ರಂದು ಕಟಪಾಡಿ ಪಳ್ಳಿಗುಡ್ಡೆ ಮೈದಾನದಲ್ಲಿ ರಾಷ್ಟ್ರೀಯ ಮಟ್ಟದ ಹಗಲಿನ ಕ್ರಿಕೆಟ್ ಪಂದ್ಯಾಟ ವೆಂಕಟರಮಣ ಟ್ರೋಫಿ-2024 ಆಯೋಜಿಸಲಾಗಿದೆ.
“ಶಿಸ್ತಿಗಾಗಿ ಕ್ರಿಕೆಟ್” ಶೀರ್ಷಿಕೆಯಡಿ ನಡೆಯುವ ಈ ಕ್ರಿಕೆಟ್ ಪಂದ್ಯಾಟದ ಸಮಾರಂಭದ ವೇದಿಕೆಯಲ್ಲಿ 2023 ರ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಟೆನಿಸ್ಬಾಲ್ ಕ್ರಿಕೆಟ್ ನ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದ ಮಾರುತಿ ಜನಸೇವಾ ಸಂಘ(ರಿ)(ಮಾರುತಿ ಯುವಕ ಮಂಡಲ(ರಿ)-ಮಾರುತಿ ಕ್ರಿಕೆಟರ್ಸ್) ಉಳ್ಳಾಲ ಇವರನ್ನು ವೆಂಕಟರಮಣ ಸ್ಪೋರ್ಟ್ಸ್&ಕಲ್ಚರಲ್ಸ್ ವತಿಯಿಂದ ಗೌರವಿಸಲಾಗುತ್ತಿದೆ ಈ ಸಂದರ್ಭ ಸಂಸ್ಥೆಯ ಅಧ್ಯಕ್ಷರಾದ ವರದರಾಜ್ ಬಂಗೇರ,ಗೌರವಾಧ್ಯಕ್ಷ ಸುಧೀರ್ ವಿ.ಅಮೀನ್ ಹಾಗೂ ಸಂಸ್ಥೆಯ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಸ್ಪೋರ್ಟ್ಸ್ ಕನ್ನಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.