ವೀರಮಾರುತಿ ಫ್ರೆಂಡ್ಸ್ ತೆಂಕನಿಡಿಯೂರು ಇವರ ಆಶ್ರಯದಲ್ಲಿ ಮಲ್ಪೆ ವಲಯ ಮಟ್ಟದ ಆಟಗಾರರಿಗಾಗಿ ಪ್ರಪ್ರಥಮ ಬಾರಿಗೆ 90 ಗಜಗಳ ಹೊನಲು ಬೆಳಕಿನ ಹನುಮ ಟ್ರೋಫಿ-2023 ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ.
ಡಿಸೆಂಬರ್ 23 ಮತ್ತು 24 ರಂದು ತೆಂಕನಿಡಿಯೂರು ಹೈಸ್ಕೂಲ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯಾಟದಲ್ಲಿ,ಮಲ್ಪೆ ವಲಯ ಮಟ್ಟದ ಒಟ್ಟು 12 ತಂಡಗಳು ಭಾಗವಹಿಸಲಿದ್ದು,ಪ್ರತಿಯೊಂದು ತಂಡದಲ್ಲಿ ಉಡುಪಿ ಜಿಲ್ಲೆಯ ಓರ್ವ ಆಟಗಾರ ಒಂದೊಂದು ತಂಡದ ಐಕಾನ್ ಆಟಗಾರನ ರೂಪದಲ್ಲಿ ಪ್ರತಿನಿಧಿಸಲಿದ್ದಾರೆ.
ಪಂದ್ಯಾಟದ ಪ್ರಥಮ ಸ್ಥಾನಿ 1ಲಕ್ಷ ರೂ ನಗದು,ದ್ವಿತೀಯ ಸ್ಥಾನಿ 50 ಸಾವಿರ ರೂ ನಗದು ಸಹಿತ ಆಕರ್ಷಕ ಹನುಮ ಟ್ರೋಫಿ ಪಡೆಯಲಿದ್ದಾರೆ ಹಾಗೂ ವೈಯಕ್ತಿಕ ಶ್ರೇಷ್ಠ ಪ್ರದರ್ಶನ ನೀಡುವ ಆಟಗಾರರಿಗೆ ವಿಶೇಷ ಉಡುಗೊರೆ ನೀಡಿ ಗೌರವಿಸಲಾಗುವುದು ಎಂದು ವೀರಮಾರುತಿ ಫ್ರೆಂಡ್ಸ್ ನ ಅಧ್ಯಕ್ಷರು ಸ್ಪೋರ್ಟ್ಸ್ ಕನ್ನಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.