13.4 C
London
Wednesday, May 22, 2024
Homeಕ್ರಿಕೆಟ್ಕರ್ನಾಟಕಕ್ಕೆ ಮತ್ತೊಬ್ಬ ಮಿಥುನ್ ಆಗಬಲ್ಲನೇ ವೈಶಾಖ್..?

ಕರ್ನಾಟಕಕ್ಕೆ ಮತ್ತೊಬ್ಬ ಮಿಥುನ್ ಆಗಬಲ್ಲನೇ ವೈಶಾಖ್..?

Date:

Related stories

ನಿನ್ನ ಟೈಮ್ ಬಂದೇ ಬರುವುದು, ಹೀಗೇ ಆಡುತ್ತಿರು ಕರುಣ್..!

1996ರಲ್ಲಿ ಅರ್ಜುನ ರಣತುಂಗ ನಾಯಕತ್ವದ ಶ್ರೀಲಂಕಾ ತಂಡ ಏಕದಿನ ವಿಶ್ವಕಪ್ ಗೆದ್ದಾಗ...

ದುಡ್ಡಿನ ಮದದಲ್ಲಿ ಕೊಬ್ಬಿರುವ ಈ business tycoonಗಳಿಗೆ ದೇಶದ ಕ್ರಿಕೆಟ್ ಹೀರೊಗಳ ಮೇಲೆ ಗೌರವ ಇರಲು ಹೇಗೆ ಸಾಧ್ಯ..?

17 ವರ್ಷಗಳ ಐಪಿಎಲ್ ಚರಿತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ. ಆ...

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...
spot_imgspot_img
ಪೀಣ್ಯ ಎಕ್ಸ್’ಪ್ರೆಸ್ ಖ್ಯಾತಿಯ ಅಭಿಮನ್ಯು ಮಿಥುನ್ ಕರ್ನಾಟಕ ಕ್ರಿಕೆಟ್ ಕಂಡ ಸಾರ್ವಕಾಲಿಕ ಶ್ರೇಷ್ಠ ವೇಗದ ಬೌಲರ್’ಗಳಲ್ಲಿ ಒಬ್ಬರು. ಕಳೆದ 14 ವರ್ಷಗಳಲ್ಲಿ ತಮ್ಮ ಸ್ಪೀಡ್’ನಿಂದಲೇ ಎದುರಾಳಿ ಬ್ಯಾಟ್ಸ್’ಮನ್’ಗಳಲ್ಲಿ ಭಯ ಹುಟ್ಟಿಸಿದ ಕರ್ನಾಟಕದ ವೇಗದ ಬೌಲರ್ ಅಂತ ಯಾರಾದ್ರೂ ಇದ್ರೆ ಅದು ಅಭಿಮನ್ಯು ಮಿಥುನ್.
ಮಿಥುನ್ ಎಂಥಾ ಕ್ರಿಕೆಟರ್ ಅಂದ್ರೆ, ಆ ದಿನ ಅವರದ್ದಾಗಿದ್ರೆ ಮುಗೀತು ಎದುರಾಳಿ ತಂಡದ ಕಥೆ. ಬೌಲಿಂಗ್’ನಲ್ಲಂತೂ ಎರಡು ಮಾತೇ ಇಲ್ಲ, ಬಿರುಗಾಳಿ. ಬ್ಯಾಟಿಂಗ್’ನಲ್ಲೂ ಪಿಂಚ್ ಹಿಟ್ಟರ್ ಆಗಿ ಬಂದು ಕರ್ನಾಟಕಕ್ಕೆ ಹಲವಾರು ಮ್ಯಾಚ್’ಗಳನ್ನು ಗೆಲ್ಲಿಸಿದ್ದ out & out ಮ್ಯಾಚ್ ವಿನ್ನರ್.
ಈಗ ಕರ್ನಾಟಕ ಪರ ಆಡುತ್ತಿರುವ  ವೈಶಾಖ್ ವಿಜಯ್ ಕುಮಾರ್ ಎಂಬ ಹುಡುಗನಲ್ಲಿ ಸ್ವಲ್ಪ ಮಟ್ಟಿಗೆ ಮಿಥುನ್ ಅವರ ನೆರಳು ಕಾಣುತ್ತಿದೆ. ಮಿಥುನ್ ಅವರಂತೆ quick spellಗಳಲ್ಲಿ ವಿಕೆಟ್ ಎತ್ತುವ, ಕೆಳ ಕ್ರಮಾಂಕದಲ್ಲಿ ಉಪಯುಕ್ತ ರನ್ ಗಳಿಸುವ ಕೌಶಲ್ಯ ಈ ಹುಡುಗನಿಗಿದೆ.
ತ್ರಿಪುರ ವಿರುದ್ಧದ ರಣಜಿ ಪಂದ್ಯದಲ್ಲಿ 72 ರನ್ ಗಳಿಸಿ, 5 ವಿಕೆಟ್ ಕಬಳಿಸಿ “ಮ್ಯಾನ್ ಆಫ್ ದಿ ಮ್ಯಾಚ್” ಆಗಿದ್ದನ್ನು ನೋಡಿದಾಗ, ಕರ್ನಾಟಕಕ್ಕೆ ಈತ “ಮತ್ತೊಬ್ಬ ಮಿಥುನ್” ಆಗಬಲ್ಲನೇ ಎಂಬ ಯೋಚನೆ ಬಂತು.
ಆ ಯೋಚನೆಗೆ ಮತ್ತಷ್ಟು ಅರ್ಥ ತಂದುಕೊಟ್ಟದ್ದು ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ವೈಶಾಖ್ ಆಡಿದ ಆಟ. 229 ರನ್’ಗಳನ್ನು ಚೇಸ್ ಮಾಡುವ ಸಂದರ್ಭದಲ್ಲಿ 133 ರನ್ನಿಗೆ 7ನೇ ವಿಕೆಟ್ ಕಳೆದುಕೊಂಡಿದ್ದ ಕರ್ನಾಟಕ, ಅಲ್ಲಿಂದ ಎದ್ದು ಬಂದು ಮ್ಯಾಚ್ ಗೆದ್ದಿದೆ ಅಂದ್ರೆ ಅದರಲ್ಲಿ ವೈಶಾಖ್ ಪಾತ್ರ ದೊಡ್ಡದು. ಪಂದ್ಯ ಗೆಲ್ಲಿಸಿದ ಮನೀಶ್ ಪಾಂಡೆ ಜೊತೆ ವೈಶಾಖ್ 64 ರನ್ ಸೇರಿಸದೆ ಹೋಗಿದ್ದರೆ, ಅತೀವ ಒತ್ತಡದಲ್ಲಿ ಎದೆಗುಂದದೆ ನಿಂತು 38 ರನ್ ಗಳಿಸದೇ ಇದ್ದಿದ್ದರೆ ರೈಲ್ವೇಸ್ ವಿರುದ್ಧ ಕರ್ನಾಟಕ ಗೆಲ್ಲುತ್ತಲೇ ಇರಲಿಲ್ಲ. ಬೌಲಿಂಗ್’ನಲ್ಲೂ ಬೆಂಕಿಯಂಥಾ ಆಟವಾಡಿದ್ದ ವೈಶಾಖ್ ಸೆಕೆಂಡ್ ಇನ್ನಿಂಗ್ಸ್’ನಲ್ಲಿ 5 ವಿಕೆಟ್ ಸಹಿತ ಪಂದ್ಯದಲ್ಲಿ ಒಟ್ಟು ಏಳು ವಿಕೆಟ್ ಪಡೆದು ಮಿಂಚಿದ್ದ.
ಕರ್ನಾಟಕಕ್ಕೆ ವೈಶಾಖ್ ಮತ್ತೊಬ್ಬ ಮಿಥುನ್ ಆಗಬಲ್ಲನೇ..? ಇದಕ್ಕೆ ಕಾಲವೇ ಉತ್ತರ ಕೊಡಲಿದೆ. ಆದರೆ ಪೀಣ್ಯ ಎಕ್ಸ್’ಪ್ರೆಸ್ ಹಾದಿಯಲ್ಲಿ ಈ ಹುಡುಗ ಹೆಜ್ಜೆ ಗುರುತುಗಳನ್ನು ಮೂಡಿಸುತ್ತಿರುವುದಂತೂ ಸತ್ಯ. ಕುತೂಹಲದ ಸಂಗತಿ ಏನೆಂದರೆ ವೈಶಾಖ್’ಗೆ ಅಭಿಮನ್ಯು ಮಿಥುನ್ ಅವರೇ  ದ್ರೋಣಾಚಾರ್ಯ. ಬೌಲಿಂಗ್ ಶುರು ಮಾಡಿದಾಗ ಕೋಚ್ ಆಗಿದ್ದವರು ಯಾರೋ ನನಗೆ ತಿಳಿಯದು, ಆದರೆ ಈಗ ವೈಶಾಖ್ ಪಳಗುತ್ತಿರುವುದು ಮಿಥುನ್ ಗರಡಿಯಲ್ಲಿ. ತಮ್ಮ 31ನೇ ವಯಸ್ಸಲ್ಲೇ ದೇಶೀಯ ಕ್ರಿಕೆಟ್’ಗೆ ಗುಡ್ ಬೈ ಹೇಳಿ ಯುವಕರಿಗೆ ದಾರಿ ಮಾಡಿಕೊಟ್ಟಿದ್ದ ಮಿಥುನ್, ಈಗ ವೈಶಾಖ್’ನಂಥಾ ಯುವ ಬೌಲರ್’ಗಳಿಗೆ ತಮ್ಮ ಅನುಭವವನ್ನು ಧಾರೆ ಎರೆಯುತ್ತಿದ್ದಾರೆ.
ಕರ್ನಾಟಕ ಕ್ರಿಕೆಟ್’ನಲ್ಲಿ ದೊಡ್ಡ ಹೆಸರು ಮಾಡಿರುವ ಅಭಿಮನ್ಯು ಮಿಥುನ್ ಅವರಂಥಾ ದಿಗ್ಗಜರನ್ನು replace ಮಾಡಬಹುದೇ ವಿನಃ ಅವರ ಸ್ಥಾನ ತುಂಬಲು ಸಾಧ್ಯವಿಲ್ಲ ಮತ್ತು ಹಾಗೆ ನಿರೀಕ್ಷೆ ಮಾಡುವುದರಲ್ಲೂ ಅರ್ಥವಿಲ್ಲ. ಆದರೆ ಭರವಸೆ ಮೂಡಿಸಿರುವ ವೈಶಾಖ್, ಮಿಥುನ್ ಅವರ ಸ್ಥಾನವನ್ನೇನಾದರೂ ತುಂಬಿ ಬಿಟ್ಟರೆ, ಕರ್ನಾಟಕ ತಂಡಕ್ಕೆ ಅದುವೇ ಆನೆಬಲ.
#RanjiTrophy

Latest stories

LEAVE A REPLY

Please enter your comment!
Please enter your name here

eighteen + twenty =