ಪ್ರತಿಬಾರಿಯೂ ಎಂಬಂತೆ ಈ ಬಾರಿಯೂ ಕೂಡ ವೈದಿಕರಿಗಾಗಿ ‘ವಿ ಪಿ ಎಲ್’ ಕ್ರಿಕೆಟ್ ಪಂದ್ಯಾವಳಿಯನ್ನು ಜನವರಿ 20 ರಿಂದ ಜನವರಿ 21, 2024 ರವರೆಗೆ ಆಯೋಜಿಸಲಾಗಿದೆ.
ವೈದಿಕ ಕ್ರೀಡೋತ್ಸವದ 5ನೇ ವರ್ಷದ ಪ್ರಯುಕ್ತ ನಡೆಯುವ ಬಹು ನಿರೀಕ್ಷಿತ “ವೈದಿಕ್ ಪ್ರೀಮಿಯರ್ ಲೀಗ್ ಸೀಸನ್ 5” ಶ್ರೀ ಮಹಾಮಾಯಾ ದೇವಸ್ಥಾನ ಬರಿಮಾರು ಮೈದಾನದಲ್ಲಿ ಹೊನಲು ಬೆಳಕಿನಲ್ಲಿ ನಡೆಯಲಿದೆ. ಪಂಡಿತ್ ಕಾಶಿನಾಥ ಆಚಾರ್ಯ ಮಂಗಳೂರು, ಗೋಪಾಲಕೃಷ್ಣ ಭಟ್ ಮಂಗಳೂರು, ಸುಧೇಶ್ ಭಟ್ ಮೂಡುಬಿದಿರೆ, ಹರೀಶ್ ಭಟ್ ಮುಂಬಯಿ ಮತ್ತು ರಮೇಶ್ ಭಟ್ ಉಡುಪಿ ಇವರುಗಳ ಸಹಯೋಗದಲ್ಲಿ ವೈದಿಕ ಕ್ರೀಡೋತ್ಸವದ ಸಮಿತಿಯ ವತಿಯಿಂದ ಈ ವೈಭವೋಪೇತ ಪಂದ್ಯಾಕೂಟ ನಡೆಯಲಿದೆ. ದೇಶದ ಬೇರೆ ಬೇರೆ ಭಾಗಗಳಿಂದ ಜಿ ಎಸ್ ಬಿ ಸಮಾಜದ ವೈದಿಕರು ಈ ಪಂದ್ಯಾವಳಿಯಲ್ಲಿ ಆಟಗಾರರಾಗಿ ಹಾಗೂ ಪ್ರೇಕ್ಷಕರಾಗಿ ಭಾಗವಹಿಸಲಿದ್ದು ಟೂರ್ನಿಯು ಯಶಸ್ವಿಯಾಗಿ ಮೂಡಿಬರಲಿದೆ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ.
ಪಂದ್ಯಾವಳಿಯಲ್ಲಿ 6 ತಂಡಗಳನ್ನು ರಚಿಸಲಾಗಿದೆ. ಟೂರ್ನಮೆಂಟ್ ನಲ್ಲಿ ಭಾಗವಹಿಸಲು 57 ಕ್ಕೂ ಹೆಚ್ಚಿನ ಆಟಗಾರರು ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಜನವರಿ 7 ಏಕಾದಶಿಯಂದು ಪ್ರಸನ್ನ ಗಣಪತಿ ದೇವಸ್ಥಾನ, ಕೊಂಚಾಡಿಯಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ಹಮ್ಮಿಕೊಳ್ಳಲಾಗಿದೆ. ಆರು ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಲಿದ್ದು ಬಹಿರಂಗ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಒಟ್ಟು 6 ತಂಡಗಳಿಗೆ ನೋಂದಣಿ ಮಾಡಿದ ಆಟಗಾರರನ್ನು ಬಿಡ್ಡಿಂಗ್ ಮೂಲಕ ಆಯ್ಕೆ ಮಾಡಲಾಗುವುದು. ಕೊಂಕಣಿ ಭಾಷೆಯ ಜನಪ್ರಿಯ ವೀಕ್ಷಕ ವಿವರಣೆಗಾರರಾದಂತಹ ಗೋಪಾಲಕೃಷ್ಣ ಭಟ್ ಮಂಗಳೂರು ಇವರ ನಿರೂಪಣೆಯಲ್ಲಿ ಆಕ್ಷನ್ ಪ್ರಕ್ರಿಯೆ ಕಾರ್ಯಕ್ರಮ ನಡೆಯಲಿದೆ.
ಟೂರ್ನಿಗೆ ಆಗಮಿಸುವ ತಂಡಗಳಿಗೆ ಸಮವಸ್ತ್ರ, ಊಟ ಹಾಗೂ ವಸತಿ ಸೌಲಭ್ಯ ಕಲ್ಪಿಸುವುದಾಗಿ ವ್ಯವಸ್ಥಾಪಕರು ಪ್ರಕಟಣೆ ಮೂಲಕ ತಿಳಿಸಿದ್ದು, ಪಂದ್ಯಗಳು ಮೊದಲ ಹಂತದಲ್ಲಿ ಲೀಗ್ ಮಾದರಿಯಲ್ಲಿ ನಂತರದ ಹಂತದಲ್ಲಿ ನಾಕ್‌ಔಟ್ ಮಾದರಿಯಲ್ಲಿ ನಡೆಯಲಿವೆ. ಪಂದ್ಯಗಳು ಬರಿಮಾರುವಿನ ಶ್ರೀ ಮಹಾಮಾಯಾ ದೇವಸ್ಥಾನ ದೇಗುಲದ ಆವರಣದಲ್ಲಿ ನಡೆಯಲಿದ್ದು, ಹೊನಲು ಬೆಳಕಿನ ಪಂದ್ಯಾವಳಿಗೆ ಆಯೋಜಕರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಟೂರ್ನಿಯ ಉದ್ಘಾಟನೆ ಹಾಗೂ ಬಹುಮಾನ ವಿತರಣಾ ಸಮಾರಂಭಕ್ಕೆ ಅನೇಕ ವೈದಿಕರು, ಸಮಾಜದ ಗಣ್ಯರು, ಪ್ರೋತ್ಸಾಹಕರು ಮತ್ತು ಸೇವಾದಾರರು ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.
“ಎಲ್ಲಾ ವೈದಿಕರನ್ನು ಜೊತೆಗೂಡಿಸಿ ಐಕ್ಯಮತ್ಯದಿಂದ ಆಟದ ನೆಪದಲ್ಲಿ ಒಟ್ಟಾಗಿ ಸೇರಿಸಿ ಎರಡು ದಿನ ಕಳೆಯಬೇಕೆಂಬ ಸದುದ್ದೇಶದಿಂದ ಜಿ ಎಸ್ ಬಿ ಸಮಾಜದ ವೈದಿಕರಿಗೋಸ್ಕರ ವಿ ಪಿ ಎಲ್ ಪಂದ್ಯಾವಳಿ ಏರ್ಪಡಿಸಲಾಗಿದ್ದು ಈ ಪಂದ್ಯಾವಳಿಗೆ ಬೇಕಾದ ಪೂರ್ವ ತಯಾರಿಗಳು ಭರದಿಂದ ನಡೆಯುತ್ತಿವೆ. ಕ್ರೀಡೋತ್ಸವ ಎಂದರೆ ಕೇವಲ ಕ್ರೀಡೆ ಅಲ್ಲ, ಇದರಲ್ಲಿ ಉತ್ಸವವೂ ಒಳಗೊಂಡಿದೆ.ಈ ಬಾರಿ ಕ್ರೀಡೋತ್ಸವ ಎಂದಾಗ ಇದರಲ್ಲಿ ಉತ್ಸವದ ಧಾರ್ಮಿಕ ಭಾಗವಾಗಿರುವ ಶತ ಚಂಡಿಕಾ ಯಾಗವೂ ಒಳಗೊಂಡಿದೆ” ಎಂದು ವೈದಿಕ ಕ್ರೀಡೋತ್ಸವ ಸಮಿತಿಯ ಪ್ರಮುಖರಾದ ಶ್ರೀ ಪಂಡಿತ್ ಕಾಶಿನಾಥ್ ಆಚಾರ್ಯ ಇವರು ತಿಳಿಸಿರುತ್ತಾರೆ.
2 ದಿನಗಳ ವಿ ಪಿ ಎಲ್ ಕಪ್ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಿರುವುದು ವೈದಿಕರಿಗೆ ಸಂತಸದ ವಿಷಯವಾಗಿದೆ. ಏಕತೆ, ಭ್ರಾತೃತ್ವ, ಸಹೋದರತೆ ಮತ್ತು ಒಗ್ಗಟ್ಟಿನ ಮನೋಭಾವದಿಂದ ಭಾಗವಹಿಸಲು ಇಂತಹ ವಿಶೇಷ ಕ್ರೀಡಾಕೂಟ ವೈದಿಕರಿಗೆ ಸ್ಪೂರ್ತಿದಾಯಕವಾಗಿದೆ. ಸೋಲು ಗೆಲುವೆನ್ನದೆ ಸ್ನೇಹಮಯದಿಂದ ಭಾಗವಹಿಸಿ ವಿ ಪಿ ಎಲ್ ಕ್ರಿಕೆಟ್ ಪಂದ್ಯಾವಳಿ ನಡೆದು ವೈದಿಕರು ಸಂಭ್ರಮಿಸಲಿ.
ಉತ್ಕೃಷ್ಟ ಅಭಿನಂದನೆಗಳೊಂದಿಗೆ,
ಸುರೇಶ್ ಭಟ್ ಮೂಲ್ಕಿ
ವೀಕ್ಷಕ ವಿವರಣೆಗಾರರು ಮತ್ತು ಸ್ಪೋರ್ಟ್ಸ್ ಕನ್ನಡ ಪ್ರತಿನಿಧಿ
{ ಸ್ಪೋರ್ಟ್ಸ್ ಕನ್ನಡ ಕ್ರೀಡಾ ಈವೆಂಟ್ ಬ್ರಾಡ್‌ಕಾಸ್ಟಿಂಗ್ ಚಾನೆಲ್ ಆಗಿದ್ದು ಲೈವ್ ಕ್ರಿಕೆಟ್ ಟೂರ್ನಮೆಂಟ್ ಮತ್ತು ಇನ್ನಿತರ ಈವೆಂಟ್‌ಗಳನ್ನು ಪ್ರಸಾರ ಮಾಡುತ್ತದೆ: -ನೇರ ಪ್ರಸಾರ ಮತ್ತು ಲೈವ್ ಸ್ಟ್ರೀಮಿಂಗ್ ಗಾಗಿ ನಮ್ಮನ್ನು ಸಂಪರ್ಕಿಸಿ @ 6363022576 ಅಥವಾ 9632178537 }