ದುಬೈ-ಇಲ್ಲಿನ ಮಲಿಕ್ ರೆಸ್ಟೋರೆಂಟ್ ದುಬೈ ನಲ್ಲಿ ನವೆಂಬರ್ 18 ಶುಕ್ರವಾರದಂದು,ಯುನೈಟೆಡ್ ಕಾಪು ಟ್ರೋಫಿ-2022 ಮಿರುಗುವ ಟ್ರೋಫಿ ಅನಾವರಣ ಕಾರ್ಯಕ್ರಮ ಜರುಗಿತು.
ನವೆಂಬರ್ 27 ರಂದು ದುಬೈ ನ ಅಲ್ ಧಾಯಿದ್ ಕ್ರಿಕೆಟ್ ವಿಲೇಜ್ ನಲ್ಲಿ ಹೊನಲು ಬೆಳಕಿನಲ್ಲಿ ಯುನೈಟೆಡ್ ಕಾಪು ಟ್ರೋಫಿ-2022 ಅದ್ಧೂರಿ ಕ್ರಿಕೆಟ್ ಪಂದ್ಯಾಟ ನಡೆಯಲಿದೆ.ಒಟ್ಟು 8 ಪ್ರತಿಷ್ಠಿತ ತಂಡಗಳು ಭಾಗವಹಿಸಲಿದ್ದು ತಂಡಗಳನ್ನು 2 ಪೂಲ್ ಗಳನ್ನಾಗಿ ವಿಭಾಗಿಸಲಾಗಿದೆ.A ಪೂಲ್ ನಲ್ಲಿ ಕಟೀಲ್ ಫ್ರೆಂಡ್ಸ್, ಫ್ರೆಂಡ್ಸ್ ಕಟೀಲ್,ಉಡುಪಿ ಫ್ರೆಂಡ್ಸ್,ದಾನುಬೆ ಫ್ರೆಂಡ್ಸ್ ಹಾಗೂ B ಪೂಲ್ ನಲ್ಲಿ ಕುಡ್ಲ ಫ್ರೆಂಡ್ಸ್,ಬ್ಲೂ ಫೋರ್ಸ್,ಟೀಮ್ ಎಲಿಗೆಂಟ್ ಮತ್ತು ನವೀನ್ ಇಲೆವೆನ್ ತಂಡಗಳ ನಡುವೆ ರೋಚಕ ಹಣಾಹಣಿ ನಡೆಯಲಿದೆ.
ಟ್ರೋಫಿ ಅನಾವರಣ ಕಾರ್ಯಕ್ರಮದಲ್ಲಿ ಟೂರ್ನಮೆಂಟ್ ನ ಪ್ರಮುಖ ರೂವಾರಿಗಳು,ಕಾಪು ಪರಿಸರದ ಪ್ರಸಿದ್ಧ ಆಟಗಾರರಾದ
ಫೈಸಲ್ ಕಾಪು,ಶಾಫಿ,ಶಕೀರ್,ಆಶಿಕ್ ಮತ್ತು ಆದಿಲ್ ಉಪಸ್ಥಿತರಿದ್ದರು….