Categories
ಕ್ರಿಕೆಟ್

ಪಡುಬಿದ್ರಿ P.H.Y.P.Lನ ಯುನೈಟೆಡ್ ಕಪ್-2019

ಪಡುಬಿದ್ರಿ : ಮೀರಾ ಕ್ರಿಕೆಟರ್ಸ್ ಪಡುಬಿದ್ರಿ ಇವರ ಆಶ್ರಯದಲ್ಲಿ ಪಡುಬಿದ್ರಿ ಬೋರ್ಡ್ ಶಾಲಾ ಅಂಗಣದಲ್ಲಿ P.H.Y.P.L ನ ಯುನೈಟೆಡ್ ಕಪ್-2019 ಕಳೆದ ರವಿವಾರ ನಡೆಯಿತು.

ಕರಾವಳಿ ಪರಿಸರದಲ್ಲಿ ಪ್ರಪ್ರಥಮ ಬಾರಿಗೆ ಮೂರು ಗ್ರಾಮಗಳಾದ ಪಡುಬಿದ್ರಿ,ಹೆಜಪಾಡಿ ಎರ್ಮಾಳ್ ಗ್ರಾಮದ ಸುಮಾರು 200ಕ್ಕೂ ಮಿಕ್ಕಿ ಆಟಗಾರರನ್ನು ಒಗ್ಗೂಡಿಸಿ,12 ಫ್ರಾಂಚೈಸಿಗಳ ನಡುವೆ ಪ್ರತಿಷ್ಟಿತ ಪಂದ್ಯಾಕೂಟ ಏರ್ಪಟ್ಟಿತ್ತು.

ಲೀಗ್ ಹಂತದ ರೋಮಾಂಚಕಾರಿ ಕದನದ ಬಳಿಕ ಫೈನಲ್ ನಲ್ಲಿ  ಅಮ್ಮಾ ಫ್ರೆಂಡ್ಸ್ ತಂಡ ಮೊದಲು ಬ್ಯಾಟಿಂಗ್ ನಡೆಸಿ 4 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 33 ರನ್ ಗಳಿಸಿತ್ತು.

ಪ್ರತ್ಯುತ್ತರವಾಗಿ ಸಮರ್ಥ್ ಫ್ರೆಂಡ್ಸ್ ತಂಡ 4 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು ಕೇವಲ 16 ರನ್ ಗಳಿಸಿ‌ ಸೋಲಿಗೆ ಶರಣಾಯಿತು.

ಈ ಪಂದ್ಯಾಕೂಟದಲ್ಲಿ ರಾಜ್ಯದ ಪ್ರತಿಷ್ಟಿತ ತಂಡವಾದ ಪಡುಬಿದ್ರಿ ಫ್ರೆಂಡ್ಸ್ ನ ಮಾಜಿ ಆಟಗಾರರು ಭಾಗವಹಿಸಿದ್ದರು.ಪ್ರಮುಖ ಆಟಗಾರರಾಗಿದ್ದ ಸವ್ಯಸಾಚಿ ಸುಭಾಷ್ ಕಾಮತ್ ಹಾಗೂ ಉಮೇಶ್ ಪಡುಬಿದ್ರಿ ಅಮ್ಮಾ ಫ್ರೆಂಡ್ಸ್ ತಂಡವನ್ನು ಪ್ರತಿನಿಧಿಸಿದ್ದರು.

ವಿಜಯಿ ತಂಡ 30,000 ಹಾಗೂ ಆಕರ್ಷಕ ಟ್ರೋಫಿ ಹಾಗೂ ರನ್ನರ್ಸ್ ತಂಡ 15,000 ಹಾಗೂ ಆಕರ್ಷಕ ಟ್ರೋಫಿ ಪಡೆದುಕೊಂಡಿತು‌.

ಪಂದ್ಯಾಕೂಟದ ಬೆಸ್ಟ್ ಬ್ಯಾಟ್ಸ್‌ಮನ್ ನಿತೇಶ್ ಎರ್ಮಾಳ್,ಬೆಸ್ಟ್ ಬೌಲರ್ ಸುಭಾಷ್ ಕಾಮತ್ ಪಡುಬಿದ್ರಿ,ಸರಣಿ ಶ್ರೇಷ್ಠ ಪ್ರಶಸ್ತಿ ತರುಣ್ ಅರವಿಂದ್ ಹಾಗೂ ಟೂರ್ನಿಯ ಅತ್ಯಂತ ಮೌಲ್ಯಯುತ ಆಟಗಾರ ಪ್ರಶಸ್ತಿ ವಿನೋದ್ ಪೂಜಾರಿ ಪಡೆದುಕೊಂಡರು.

ಸಮಾರೋಪ ಸಮಾರಂಭದಲ್ಲಿ ವಿಜೇತರನ್ನು ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.ಈ ಸಂದರ್ಭ ಪಡುಬಿದ್ರಿ ಫ್ರೆಂಡ್ಸ್ ನ ಅಧ್ಯಕ್ಷ ನವೀನ್ ಚಂದ್ರ‌.ಜೆ.ಶೆಟ್ಟಿ,ಪಡುಬಿದ್ರಿ ತಂಡದ ಕಪ್ತಾನ ಶರತ್ ಶೆಟ್ಟಿ ಪಡುಬಿದ್ರಿ, ಟಾರ್ಪಡೋಸ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಗೌತಮ್ ಶೆಟ್ಟಿ,ಲೋಹಿತಾಕ್ಷ ಪಡುಬಿದ್ರಿ, ಪಡುಬಿದ್ರಿ ಬಿ.ಜೆ.ಪಿ ಕಾರ್ಯಕರ್ತರಾದ ಶರತ್ ಶರ್ಮಾ,ಪತ್ರಕರ್ತ ಸುರೇಶ್ ಎರ್ಮಾಳ್, ರವಿ ಸಾಲ್ಯಾನ್ ಕಲ್ಲೆಟ್ಟೆ,ಅರವಿಂದ್ ಪಡುಬಿದ್ರಿ,ಸುಕೇಶ್ ಎರ್ಮಾಳ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕ್ರೀಡೆಯಲ್ಲಿ ಮೇರು ಸಾಧನೆಗೈದು ಇತ್ತೀಚೆಗಷ್ಟೇ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಟಾರ್ಪಡೋಸ್ ಅಧ್ಯಕ್ಷ ಶ್ರೀಯುತ ಗೌತಮ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.

ಸೌಜನ್ ಪಡುಬಿದ್ರಿ,ಅಪ್ಪು ಬದಿಯಡ್ಕ ಸಾರಥ್ಯದಲ್ಲಿ ಇನ್ನಿತರ ಸ್ನೇಹಿತರ ಸಹಕಾರದೊಂದಿಗೆ ಅತ್ಯಂತ ಯಶಸ್ವಿಯಾಗಿ ನಡೆಯಿತಲ್ಲದೆ,ಪ್ರಪ್ರಥಮ ಬಾರಿಗೆ ಗ್ರಾಮೀಣ ಮಟ್ಟದ ಈ ಪಂದ್ಯಾಕೂಟದಲ್ಲಿ ಆನ್ಲೈನ್ ಸ್ಕೋರಿಂಗ್ ಅಳವಡಿಸಿ,10,000 ಮಿಕ್ಕಿ ಕ್ರೀಡಾಭಿಮಾನಿಗಳು ಈ ಪಂದ್ಯಾಕೂಟದ ವಿದ್ಯಮಾನವನ್ನು ವೀಕ್ಷಿಸಿದ್ದರು.

ಆರ್.ಕೆ‌‌.ಆಚಾರ್ಯ ಕೋಟ

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

20 − 9 =