ಆಟಗಾರನೊಬ್ಬ ತಾನು ಎದುರಿಸಿದ ಮೊದಲ ಹತ್ತು ಎಸೆತಗಳಲ್ಲಿ ಹತ್ತು ಸಿಕ್ಸರ್ ಗಳನ್ನು ಅಪೂರ್ವ ದಾಖಲೆ ಬರೆದಂತಾಗಿದೆ.
ಆಟಗಾರ ಕೃಷ್ಣ(ಕಿಟ್ಟಿ)ಹೆಬ್ರಿ.
ಹೌದು 10.04.2022 ರಂದು ಹೆಬ್ರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಅಂಡರ್ ಆರ್ಮ್ ಕ್ರಿಕೆಟ್
ಪಂದ್ಯಾವಳಿಯೊಂದರಲ್ಲಿ “ಹೆಬ್ರಿ ಬ್ರದರ್ಸ್” ತಂಡವನ್ನು ಪ್ರತಿನಿಧಿಸಿ, ಸತತ ಹತ್ತು ಸಿಕ್ಸರ್ ಸಿಡಿಸಿ ಹೆಚ್ಚು ಕಡಿಮೆ ಅಳಿಸಲಾಗದ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ. ತನ್ನ ಕ್ರಿಕೆಟ್ ಆರಂಭದ ದಿನಗಳಿಂದಲೂ ಬಿಗ್ ಹಿಟ್ಟರ್ ಎನಿಸಿಕೊಂಡಿದ್ದ ಕೃಷ್ಣ ರವಿವಾರ ತನ್ನ ಕ್ರಿಕೆಟ್ ಜೀವನದ ಶ್ರೇಷ್ಠ ಇನ್ನಿಂಗ್ಸ್ ಪ್ರದರ್ಶಿಸಿ ಹೆಬ್ರಿ ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾದರು. ಬಾರಿಸಿದ ಹತ್ತು ಸಿಕ್ಸರ್ ಗಳ ಪೈಕಿ ಒಂಬತ್ತು ಸಿಕ್ಸರ್ ಗಳು ಬೌಂಡರಿ ಲೈನ್ ಗಿಂತ ಸಾಕಷ್ಟು ದೂರ ಕ್ರಮಿಸಿದ ಭರ್ಜರಿ ಸಿಕ್ಸರ್ ಗಳಾಗಿದ್ದವು.
ಹೆಬ್ರಿ ಬ್ರದರ್ಸ್ ಆಶ್ರಯದಲ್ಲಿ ನಡೆದ “ಧನುಷ್ ಟ್ರೋಫಿ” ಕ್ರಿಕೆಟ್ ಟೂರ್ನಿಯಲ್ಲಿ ಒಟ್ಟಿಗೆ ಹೆಬ್ರಿ ಕಾರ್ಕಳ ತಾಲೂಕಿನ 23 ತಂಡಗಳು ಭಾಗವಹಿಸಿದ್ದವು.