ಬೋಳಾರ್ ಗುಡ್ಡೆ ಬಳಗ,ಉದ್ಯಾವರ ಇವರ ವತಿಯಿಂದ ಅರ್ಹ ಬಡ ಕುಟುಂಬಗಳಿಗೆ ಆರ್ಥಿಕ ಸಹಾಯ ಮತ್ತು ಸಾಧಕರಿಗೆ ಸನ್ಮಾನದ ಸದುದ್ದೇಶದಿಂದ,ಮಾರ್ಚ್ 26 ಮತ್ತು 27 ರಂದು,ಉದ್ಯಾವರ ಗ್ರಾಮ ಪಂಚಾಯತ್ ಮೈದಾನದಲ್ಲಿ ಗ್ರಾಮೀಣ ಮಟ್ಟದ ಲೀಗ್ ಕ್ರಿಕೆಟ್ ಪಂದ್ಯಾಕೂಟ “ಚಾಂಪಿಯನ್ಸ್ ಪ್ರೀಮಿಯರ್ ಲೀಗ್-2022 ಆಯೋಜಿಸಲಾಗಿದೆ.
8 ತಂಡಗಳು-120 ಆಟಗಾರರನ್ನು ಬಿಡ್ಡಿಂಗ್ ಮಾದರಿಯಲ್ಲಿ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.ಪ್ರಥಮ ಪ್ರಶಸ್ತಿ 54,333 ರೂ,ದ್ವಿತೀಯ ಪ್ರಶಸ್ತಿ 32,111 ರೂ ನಗದಿನೊಂದಿಗೆ ಆಕರ್ಷಕ ಟ್ರೋಫಿಗಳು ಒಳಗೊಂಡಿದ್ದು,ಪಂದ್ಯಾವಳಿಯ ಬೆಸ್ಟ್ ಬ್ಯಾಟ್ಸ್‌ಮನ್ ಕ್ರಿಕೆಟ್ ಬ್ಯಾಟ್,ಬೆಸ್ಟ್ ಬೌಲರ್ ಸ್ಪೋರ್ಟ್ಸ್ ಶೂಸ್ ಮತ್ತು ಸರಣಿಶ್ರೇಷ್ಟ ಆಟಗಾರನಿಗೆ ಎಲ್.ಇ.ಡಿ ಟಿವಿ ಬಹುಮಾನ ರೂಪದಲ್ಲಿ ನೀಡಲಾಗುತ್ತಿದೆ.
ಪಂದ್ಯಾವಳಿಯ ನೇರ ಪ್ರಸಾರ ಯೂಟ್ಯೂಬ್ ಚಾನೆಲ್ ನಲ್ಲಿ ಬಿತ್ತರಗೊಳ್ಳಲಿದೆ.ಹೆಚ್ಚಿನ ಮಾಹಿತಿಗಾಗಿ ಅಪ್ಪು-9743897628,ಸಂತು-, 8861275815,ಸಬಿಲ್-7019180572,ಪ್ ರಸಾದ್-9972259628 ಈ ನಂಬರ್ ಗಳನ್ನು ಸಂಪರ್ಕಿಸಬಹುದು.