ಟೆನಿಸ್ಬಾಲ್ ಕ್ರಿಕೆಟ್ ಶ್ರೇಯೋಭಿವೃದ್ಧಿಗಾಗಿ ಉಡುಪಿ ಜಿಲ್ಲೆಯ ಸಮಾನ ಮನಸ್ಕ ಹಿರಿಯ ಆಟಗಾರರು,ಕ್ರೀಡಾಪ್ರೋತ್ಸಾಹಕರ ಸಮಾಗಮದಲ್ಲಿ ಇತ್ತೀಚೆಗಷ್ಟೇ ಪ್ರವರ್ಧಮಾನಕ್ಕೆ ಬಂದ ಉಡುಪಿ ಜಿಲ್ಲೆ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಪ್ರಾಥಮಿಕ ಹಂತದ ಯೋಜನೆಯ ರೂಪದಲ್ಲಿ 7 ತಾಲೂಕುಗಳಲ್ಲಿ 7 ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟ ಆಯೋಜಿಸಿದೆ.
ಯೋಜನೆಯಂತೆ ಕಾರ್ಕಳದಲ್ಲಿ ಮೊದಲ ಕ್ರಿಕೆಟ್ ಟೂರ್ನಮೆಂಟ್ ಅತ್ಯಂತ ಶಿಸ್ತು ಹಾಗೂ ಕ್ರಮಬದ್ಧವಾಗಿ ಮುಕ್ತಾಯಗೊಂಡಿರುತ್ತದೆ.ಇದೀಗ ಏಕಕಾಲದಲ್ಲಿ ಬೈಂದೂರಿನಲ್ಲಿ ಹಾಗೂ ಉಡುಪಿಯಲ್ಲಿ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ.
ಉಡುಪಿ ತಾಲೂಕು ಪಂದ್ಯಾಟಗಳು 10 ಓವರ್-90 ಗಜಗಳ ಮಾದರಿಯಲ್ಲಿ ಡಿಸೆಂಬರ್ 25 ಮತ್ತು 26 ರಂದು ಮಲ್ಪೆ ಗಾಂಧಿ ಶತಾಬ್ಧಿ ಮೈದಾನ,ಮಿಶನ್ ಕಂಪೌಂಡ್ ಮೈದಾನ ಮತ್ತು ಬೀಡಿನಗುಡ್ಡೆ ಮೈದಾನದಲ್ಲಿ ನಡೆಯಲಿದೆ.
ಅಸೋಸಿಯೇಷನ್ ಪ್ರಾರಂಭದ ಹಂತದ ನೋಂದಣಿ ಪ್ರಕ್ರಿಯೆಯಲ್ಲಿ,ಉಡುಪಿಯಲ್ಲಿ ದ್ವಿತೀಯ ಅತೀ ಹೆಚ್ಚಿನ(200) ಆಟಗಾರರು ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡಿದ್ದು,80,90 ರ ದಶಕದಲ್ಲಿ ಉಡುಪಿ ಜಿಲ್ಲೆಯಲ್ಲಿ ಮೆರೆದಾಡಿದ ತಂಡಗಳಾದ
ಪ್ಯಾರಡೈಸ್ ಬನ್ನಂಜೆ,ಕಲಾಕಿರಣ್ ಬೈಲೂರು,ನೇತಾಜಿ ಸ್ಪೋರ್ಟ್ಸ್ ಕ್ಲಬ್,ಸನ್ನಿ ಉಡುಪಿ,ಕೆನರಾ ಕಿನ್ನಿಮುಲ್ಕಿ,ಮಿತ್ರಮಂಡಳಿ ಕಿನ್ನಿಮುಲ್ಕಿ,ಸ್ಪಾರ್ಕ್ ಉಡುಪಿ,ಗುರು ನೇಜಾರ್,ಮಾರುತಿ ಪಡುಕರೆ,ದೊಡ್ಡಣಗುಡ್ಡೆ ಫ್ರೆಂಡ್ಸ್,ಕೆಮ್ಮಣ್ಣು ಕ್ರಿಕೆಟರ್ಸ್,ಯಂಗ್ ಸ್ಟಾರ್ ಮಲ್ಪೆ,ಕ್ಲಾಸಿಕ್ ಕಲ್ಮಾಡಿ,ಸಿಟಿ ಸ್ಪೋರ್ಟ್ಸ್ ಉಡುಪಿ ತಂಡಗಳಲ್ಲಿ
ಈ 200 ಮಂದಿ ಆಟಗಾರರಿಗೆ ಅವಕಾಶ ಕಲ್ಪಿಸಲಾಗಿದೆ.
ರಾಜ್ಯಮಟ್ಟದಲ್ಲಿ ಮಿಂಚಿ ಪ್ರಸ್ತುತ ಅವಕಾಶ ಲಭಿಸದೇ ಇರುವ ಪ್ರತಿಭಾನ್ವಿತ ಆಟಗಾರರು T.C.A ಪಂದ್ಯಾಟದಲ್ಲಿ ಭಾಗವಹಿಸುತ್ತಿರುವುದು ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.
ಇಂದು ಸಂಜೆ ನಡೆದ ಜೆರ್ಸಿ ಅನಾವರಣ
ಕಾರ್ಯಕ್ರಮದಲ್ಲಿ ಹಿರಿಯ ಆಟಗಾರರಾದ ಶ್ರೀಧರ್ ಶೆಟ್ಟಿ ಪ್ಯಾರಡೈಸ್ ಬನ್ನಂಜೆ,ಯಾದವ್ ನಾಯಕ್ ಕೆಮ್ಮಣ್ಣು,
ಉದಯ್ ಕುಮಾರ್ ಕೆನರಾ,ಪ್ರವೀಣ್ ಕುಮಾರ್ ಬೈಲೂರು,ಡಾ.ವಿನೋದ್,ಸಚ್ಚೀಂದ್ರ ಶೆಟ್ಟಿ,ಪ್ರವೀಣ್ ಪಿತ್ರೋಡಿ,ತಂಡಗಳ ನಾಯಕರು,ಆಟಗಾರರು ಉಪಸ್ಥಿತರಿದ್ದರು.