ರಾಜ್ಯಮಟ್ಟಕ್ಕೆ ಹಲವಾರು ಆಟಗಾರರನ್ನು ಕೊಡುಗೆಯಾಗಿ ನೀಡಿ,ಉಡುಪಿ ಭಾಗದ ಶಿಸ್ತಿನ ತಂಡವಾಗಿ ಗುರುತಿಸಿಕೊಂಡ ಸನ್ ರೈಸ್ ಕ್ರಿಕೆಟರ್ಸ್ ಹೊನ್ನಾಳ ಇವರ ಆಶ್ರಯದಲ್ಲಿ ಡಿಸೆಂಬರ್ 10 ಶುಕ್ರವಾರದಂದು ಜಿಲ್ಲಾಮಟ್ಟದ 40 ಗಜಗಳ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಕೂಟ S.C.H ಪ್ರೀಮಿಯರ್ ಲೀಗ್-2021 ಆಯೋಜಿಸಲಾಗಿದೆ.
ಹೊನ್ನಾಳದ ಮೈದಾನದಲ್ಲಿ 8 ಐಕಾನ್ ಆಟಗಾರರನ್ನು ಒಳಗೊಂಡ,8 ಫ್ರಾಂಚೈಸಿಗಳು ಪ್ರಶಸ್ತಿಗಾಗಿ ಸೆಣಸಾಡಲಿದ್ದು ಪ್ರಥಮ ಪ್ರಶಸ್ತಿ 20,002 ರೂ ಹಾಗೂ ರನ್ನರ್ ಅಪ್ ಪ್ರಶಸ್ತಿ ರೂಪದಲ್ಲಿ 15,001ರೂ ನಗದು ಸಹಿತ ಆಕರ್ಷಕ ಪಾರಿತೋಷಕಗಳನ್ನು ಪಡೆಯಲಿದ್ದಾರೆ.ವೈಯಕ್ತಿಕ ಶ್ರೇಷ್ಠ ನಿರ್ವಹಣೆಗೈದ ಆಟಗಾರರು ವಿಶೇಷ ಪ್ರಶಸ್ತಿ ಪಡೆಯಲಿದ್ದಾರೆ.
M9 ಸ್ಪೋರ್ಟ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಪಂದ್ಯಾಟದ ನೇರ ಪ್ರಸಾರ ಬಿತ್ತರಗೊಳ್ಳಲಿದೆ.