ಮೊಬೈಲ್ ರೀಟೈಲರ್ಸ್ ಮಲ್ಪೆ ಇವರ ಆಶ್ರಯದಲ್ಲಿ ಫೆಬ್ರವರಿ 20 ರವಿವಾರದಂದು ಮಲ್ಪೆಯ ಗಾಂಧಿ ಶತಾಬ್ದಿ ಮೈದಾನದಲ್ಲಿ ನಡೆದ ಮೊಬೈಲ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯ ಫೈನಲ್ ನಲ್ಲಿ ಉಡುಪಿ ರಾಯಲ್ಸ್ ತಂಡ,ಯುನೈಟೆಡ್ ಉಡುಪಿ ತಂಡವನ್ನು ಸೋಲಿಸಿ ಪ್ರಥಮ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಉಡುಪಿ ರಾಯಲ್ಸ್ ಪ್ರಥಮ 22,222 ರೂ ನಗದು,
ದ್ವಿತೀಯ ಯುನೈಟೆಡ್ ಉಡುಪಿ 11,111 ರೂ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದುಕೊಂಡರು.
ಫೈನಲ್ ನ ಪಂದ್ಯಶ್ರೇಷ್ಟ ಪ್ರಶಸ್ತಿ ಅರ್ಜುನ್,ಬೆಸ್ಟ್ ಬ್ಯಾಟ್ಸ್‌ಮನ್ ರಾಕೇಶ್ ಕೋಟ್ಯಾನ್,ಬೆಸ್ಟ್ ಬೌಲರ್ ಅರ್ಜುನ್,ಬೆಸ್ಟ್ ಕೀಪರ್ ಪ್ರಶಾಂತ್ ಹಾಗೂ ಟೂರ್ನಿಯುದ್ದಕ್ಕೂ ಶ್ರೇಷ್ಠ ಪ್ರದರ್ಶನ ನೀಡಿದ ಗಣೇಶ್ ಸುವರ್ಣ ಸರಣಿಶ್ರೇಷ್ಟ ಗೌರವಕ್ಕೆ ಭಾಜನರಾದರು.
ಸನ್ನಿಧಿ ಎಂಟರ್ಪ್ರೈಸಸ್ ನ ಗುರುನಾಥ್ ಕಾಮತ್ ಟೂರ್ನಮೆಂಟ್ ನ ಪ್ರತಿಯೊಂದು ಸಿಕ್ಸರ್ ಗೂ ಸಿಸ್ಕಾ ಕಂಪೆನಿಯ ಪವರ್ ಬ್ಯಾಂಕ್ ಉಡುಗೊರೆಯಾಗಿ ನೀಡಿದರೆ,ಪ್ರತಿಯೊಂದು ಪಂದ್ಯದ ಪಂದ್ಯಶ್ರೇಷ್ಟ ಪ್ರಶಸ್ತಿ ರೂಪದಲ್ಲಿ ಅಕ್ಕಿಯನ್ನು ನೀಡಲಾಯಿತು.
ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಉಡುಪಿಯ ಚಂದನ್ ಟ್ರೇಡರ್ಸ್ ನ ಶ್ರೀಕಾಂತ್.ಕೆ.ಭಟ್,ಉಡುಪಿ ಕ್ಲೋಮೋಶ್ ನ ಶ್ರೀ ದೇವಿದಾಸ್ ನಾಯ್ಕ್,ಕುಂದಾಪುರ ಶೈನ್ ಮೊಬೈಲ್ಸ್ ನ ಅನಿಲ್ ಖಾರ್ವಿ,ಕುಂದಾಪುರ ಎಕ್ಸ್ ಮೊಬೈಲ್ ನ ಮುಸ್ತಾಫಾ,ಪ್ಲೇ ಝೋನ್ ಉಡುಪಿಯ ರಾಜೇಶ್ ಮಾಬಿಯನ್,ಮಲ್ಪೆ ಗಣೇಶ್ ಮೊಬೈಲ್ ನ ಪ್ರಶಾಂತ್ ಕಿಣಿ,ಮಲ್ಪೆ ಸಾನಿಯಾ ಮೊಬೈಲ್ ನ ಸಲೀಮ್ ಮತ್ತು ಕಾರ್ಕಳದ ಬಾಲಾಜಿ ಮೊಬೈಲ್ಸ್ ನ ಪ್ರಶಾಂತ್ ಶೆಣೈ ಕಾರ್ಕಳ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ AIMRA ಅಧ್ಯಕ್ಷರು ಉಡುಪಿ ಬಲ್ಲಾಳ್ ಸೆಂಟರ್ ಪ್ರೈಸಸ್ ನ ಸಂದೇಶ್ ಬಲ್ಲಾಳ್,AIMRA ಕಾರ್ಯದರ್ಶಿ ಸುಹಾಸ್ ಕಿಣಿ,DKUMRA ಅಧ್ಯಕ್ಷರು ಅಬ್ದುಲ್ ಸಲೀಂ, ಮಂಗಳೂರು AIMRA ಅಧ್ಯಕ್ಷರು ಗುರುದಾಸ್ ಕಾಮತ್,AIMRA ಉಡುಪಿ ಕಾರ್ಯದರ್ಶಿ ವಿವೇಕ್ ಸುವರ್ಣ,ಸಿಸ್ಕಾ ಕಂಪೆನಿಯ ಮೆಹಮೂದ್,ನಿಧಿ ಮೊಬೈಲ್ಸ್ ನ ಸಂದೀಪ್,ಮಲ್ಪೆ ಕರಾವಳಿ ಮೊಬೈಲ್ಸ್ ನ ಚೇತನ್ ಕುಮಾರ್ ದೇವಾಡಿಗ,ಮಲ್ಪೆ ಶ್ರೀ ಗಣೇಶ್ ಮೊಬೈಲ್ ನ ಸಂದೀಪ್ ಕುಮಾರ್,ವಿವೋ ಟೀಮ್ ಮುಖ್ಯಸ್ಥ ಸಚಿನ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
M9 ಸ್ಪೋರ್ಟ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರ ಬಿತ್ತರಿಸಲಾಯಿತು,ರಾಜಶೇಖರ್ ಉಡುಪಿ ಮತ್ತು ಫಜಲ್ ಹೊನ್ನಾಳ ವೀಕ್ಷಕ ವಿವರಣೆಕಾರರಾಗಿ ಭಾಗವಹಿಸಿದರು.