ಉಡುಪಿ ಪರಿಸರದ ಪ್ರತಿಭಾವಂತ ಕ್ರೀಡಾಪಟು ಹಾಗೂ ಕ್ರೀಡಾ ಪ್ರೋತ್ಸಾಹಕರಾಗಿದ್ದ ದಿ.ಮಾಧವ ಆಚಾರ್ಯರವರ ಸ್ಮರಣಾರ್ಥ ಮಾರ್ಚ್ 7 ರಂದು,ಗುಂಡಿಬೈಲು ಶಾಲಾ ಮೈದಾನದಲ್ಲಿ ಗುಂಡಿಬೈಲ್ ಪ್ರೀಮಿಯರ್ ಲೀಗ್(G.P.L) ಗುರುಶ್ರೀ ಟ್ರೋಫಿ-2021 ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ.
ಒಟ್ಟು 6 ತಂಡಗಳು ಭಾಗವಹಿಸಲಿದ್ದು,ರಾಜ್ಯ,
ರಾಷ್ಟ್ರಮಟ್ಟದಲ್ಲಿ ಮಿಂಚಿದ ಉಡುಪಿ ಜಿಲ್ಲೆಯ 18 ಮಂದಿ ಪ್ರಸಿದ್ಧಆಟಗಾರರು,ಒಂದೊಂದು ತಂಡದಲ್ಲಿ ಐಕಾನ್ ಆಟಗಾರರ ರೂಪದಲ್ಲಿ ಮೂವರು ಆಟಗಾರರು ಭಾಗವಹಿಸಲಿದ್ದಾರೆ.
ಪಂದ್ಯಾಕೂಟದ ಪ್ರಥಮ ಪ್ರಶಸ್ತಿ ವಿಜೇತ ತಂಡ 50 ಸಾವಿರ ನಗದು,ದ್ವಿತೀಯ ಸ್ಥಾನಿ 30 ಸಾವಿರ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಹಾಗೂ ವೈಯಕ್ತಿಕ ಶ್ರೇಷ್ಟ ನಿರ್ವಹಣೆ ನೀಡಿದ ಆಟಗಾರರಿಗೆ ವಿಶೇಷ ಬಹುಮಾನಗಳನ್ನು ನೀಡಿ ಗೌರವಿಸಲಾಗುತ್ತಿದೆ…