ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಉಡುಪಿ ಜಿಲ್ಲೆ ಇವರ ವತಿಯಿಂದ ಕಾರ್ಕಳದಲ್ಲಿ ಮೊದಲ ತಾಲೂಕು ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ನಡೆಯಲಿದೆ.
ಡಿಸೆಂಬರ್ 4 ಮತ್ತು 5 ರಂದು ಕಾರ್ಕಳದ ಸ್ವರಾಜ್ ಮೈದಾನದಲ್ಲಿ ನಡೆಯುವ ಈ ಪಂದ್ಯಾವಳಿಯಲ್ಲಿ
ಆರ್.ಕೆ ಕುಂಟಾಡಿ,ಗ್ರೌಂಡ್ ಫ್ರೆಂಡ್ಸ್ ಬೆಳ್ಮಣ್,ಶಿವ ಭಕ್ತ ಕಾರ್ಕಳ,ನಿಟ್ಟೆ,ಆರ್.ಕೆ.ಕಾರ್ಕಳ, ಎಸ್.ಬಿ.ಸಿ ಬಜಗೋಳಿ,ಇಲೆವೆನ್ ಬೆಳ್ಮಣ್ ಈ 7 ತಂಡಗಳು ಭಾಗವಹಿಸಲಿದೆ.
ಈ ಕ್ರಿಕೆಟ್ ಪಂದ್ಯಾಕೂಟದಲ್ಲಿ ಕಾರ್ಕಳ ಪರಿಸರದ ಹಿರಿಯ ಆಟಗಾರರು,ಅಸೋಸಿಯೇಷನ್ ನ ಸರ್ವ ಸದಸ್ಯರು ಭಾಗವಹಿಸಿ ಸಹಕರಿಸುವಂತೆ ಅಧ್ಯಕ್ಷರಾದ ಟೊರ್ಪೆಡೋಸ್ ಗೌತಮ್ ಶೆಟ್ಟಿ ತಿಳಿಸಿದ್ದಾರೆ.
M9 ಸ್ಪೋರ್ಟ್ಸ್ ನಲ್ಲಿ ನೇರ ಪ್ರಸಾರ ಬಿತ್ತರಗೊಳ್ಳಲಿದ್ದು, ಹೆಚ್ಚಿನ ಮಾಹಿತಿಗಾಗಿ ಸತೀಶ್-9880587355
ಇವರನ್ನು ಸಂಪರ್ಕಿಸಬಹುದು.