ಟೆನಿಸ್ಬಾಲ್ ಕ್ರಿಕೆಟ್ 80,90 ರ ದಶಕದಲ್ಲೇ ವ್ಯವಸ್ಥಿತವಾದ ವೇದಿಕೆಯನ್ನು ಕಲ್ಪಿಸಿ, ಬೈಂದೂರು ಭಾಗದಲ್ಲಿ ಜಿಲ್ಲಾ ಹಾಗೂ ರಾಜ್ಯಮಟ್ಟದ ಪಂದ್ಯಾವಳಿಗಳನ್ನು ಯಶಸ್ವಿಯಾಗಿ ಸಂಘಟಿಸಿ,ಹಲವಾರು ಜಿಲ್ಲಾ ಮಟ್ಟದ ಪ್ರಶಸ್ತಿಗಳನ್ನು ಜಯಿಸಿದ ದೈತ್ಯ ಆಟಗಾರರ ಪಡೆ ವಿಕ್ರಮ್ ಬೈಂದೂರು ಹಾಗೂ ಆ ಪರಿಸರದ ಹಿರಿಯ ತಂಡಗಳು,ಹಿರಿಯ ಆಟಗಾರರೆಲ್ಲರ ಸಹಕಾರದೊಂದಿಗೆಬೈಂದೂರು ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟ T.C.A ಟ್ರೋಫಿ ಬೈಂದೂರು-2021 ಆಯೋಜಿಸಲಾಗಿದೆ.

ಡಿಸೆಂಬರ್ 25 ಮತ್ತು 26 ರಂದು ಬೈಂದೂರಿನ ಗಾಂಧಿಮೈದಾನದಲ್ಲಿ,ನಡೆಯಲಿರುವ 10 ಓವರ್-60 ಗಜಗಳ ಈ ಪಂದ್ಯಾವಳಿಯಲ್ಲಿ,TCA ಉಡುಪಿ
ನೋಂದಣಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಬೈಂದೂರು ತಾಲೂಕಿನ ಆಟಗಾರರ 6 ತಂಡಗಳನ್ನಾಗಿ ವಿಭಾಗಿಸಲಾಗಿದ್ದು,ತಂಡಗಳ ವಿವರ ಈ ಕೆಳಗಿನಂತಿದೆ.



*1)ಹೊಳೆಬಾಗಿಲು ಕ್ರಿಕೆಟರ್ಸ್*
*2)ಹಳ್ಳಿಮನೆ ಅಟ್ಯಾಕರ್ಸ್ ಕಂಬದಕೋಣೆ*
*3)ತ್ರಿವಿಕ್ರಮ್ ಬೈಂದೂರು*
*4)8 ಸ್ಟಾರ್ ಉಪ್ಪುಂದ*
*5)ಅನ್ವಿ ಕ್ವೀನ್*
*6)ನಾಡವಾಸ್ ಗ್ರೂಪ್ ಬೈಂದೂರು*


