ಕುಂದಾಪುರ-ಇಲ್ಲಿನ ಗಾಂಧಿಮೈದಾನದಲ್ಲಿ ನಡೆಯುತ್ತಿರುವ ಉಡುಪಿ ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾಟ ನವೆಂಬರ್ 19 ಶನಿವಾರ ಬೆಳಿಗ್ಗೆ ಉದ್ಘಾಟನೆಗೊಂಡಿತು.
ತಾಲೂಕು ಮಟ್ಟದಲ್ಲಿ ಜಯಗಳಿಸಿದ ಎರಡು ತಂಡಗಳ ಸಹಿತ ಒಟ್ಟು 14 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದು ಸುಮಾರು 200 ಕ್ಕೂ ಹೆಚ್ಚಿನ ಆಟಗಾರರು ಭಾಗವಹಿಸಿದರು.ಲೀಗ್ ಹಂತದ ರೋಚಕ ಹೋರಾಟದ ಬಳಿಕ ಸೆಮಿಫೈನಲ್ ನಲ್ಲಿ ಚೇತನಾ ಉಡುಪಿ ಟೊರ್ಪೆಡೋಸ್ ಕುಂದಾಪುರ ತಂಡವನ್ನು ಹಾಗೂ ಕಲಾಕಿರಣ ಕೊರಂಗ್ರಪಾಡಿ ತಂಡ ಇಲೆವೆನ್ಸ್ ಬೆಳ್ಮಣ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶ ಪಡೆದರು.
ಫೈನಲ್ ಪಂದ್ಯ ರವಿವಾರ ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ಪ್ರಾರಂಭವಾಗಲಿದೆ ಎಂದು ಟಿ.ಸಿ.ಎ
ಅಧ್ಯಕ್ಷರಾದ ಗೌತಮ್ ಶೆಟ್ಟಿ ಕುಂದಾಪುರ ತಿಳಿಸಿದ್ದಾರೆ…