ದೊಡ್ಡಣಗುಡ್ಡೆ ಫ್ರೆಂಡ್ಸ್ ಕ್ರಿಕೆಟರ್ಸ್ ಇವರ ಆಶ್ರಯದಲ್ಲಿ ಜನವರಿ 17 ರಂದು D.F.C ಟ್ರೋಫಿ-2021 ಪಂದ್ಯಾವಳಿ ಆಯೋಜಿಸಲಾಗಿದೆ.
ಉಡುಪಿ ಜಿಲ್ಲಾ ಮಟ್ಟದ ಹಿರಿಯ ಕಿರಿಯ ಕ್ರಿಕೆಟಿಗರನ್ನೊಳಗೊಂಡ 6 ತಂಡಗಳು ಭಾಗವಹಿಸಲಿದ್ದು,
ಒಂದೊಂದು ತಂಡದಲ್ಲಿ 2 ಐಕಾನ್ ಪ್ಲೇಯರ್ಸ್ ಅವಕಾಶ ಕಲ್ಪಿಸಲಾಗಿದೆ.
ಭಾಗವಹಿಸುವ 6 ತಂಡಗಳ ವಿವರ ಈ ಕೆಳಗಿನಂತಿದೆ.
1)ವೆಂಕಟರಮಣ ಕ್ರಿಕೆಟರ್ಸ್ ಕರಂಬಳ್ಳಿ.
2)ಟೀಮ್ ಏಸ್.
3)ಶೈನಿ ದೊಡ್ಡಣಗುಡ್ಡೆ
4)ಮಾರ್ಕ್ ಇಲೆವೆನ್
5)ವಿಷ್ಣುಮೂರ್ತಿ ಕ್ರಿಕೆಟರ್ಸ್ ಪೆರಂಪಳ್ಳಿ
6)ಪೆರಂಪಳ್ಳಿ ಫ್ರೆಂಡ್ಸ್
ಪ್ರಥಮ ಪ್ರಶಸ್ತಿ ವಿಜೇತ ತಂಡ
20 ಸಾವಿರ,ದ್ವಿತೀಯ ಸ್ಥಾನಿ 15 ಸಾವಿರ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದು,
ಟೆನ್ನಿಸ್ ಬಾಲ್ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಥಮ ಸ್ಥಾನಿ ತಂಡದ ಮಾಲೀಕರಿಗೆ ಸೈಕಲ್ ಹಾಗೂ ದ್ವಿತೀಯ ಸ್ಥಾನಿ ತಂಡದ ಮಾಲೀಕರಿಗೆ ಮೊಬೈಲ್ ಉಡುಗೊರೆ ನೀಡಲಾಗುತ್ತಿದೆ.
ವೈಯಕ್ತಿಕ ಶ್ರೇಷ್ಠ ನಿರ್ವಹಣೆ ನೀಡಿದ ಆಟಗಾರರಿಗೆ ಆಕರ್ಷಕ ಪ್ರಶಸ್ತಿಗಳು ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರನಿಗೆ 50 ಕೆ.ಜಿ ಅಕ್ಕಿ ನೀಡಲಾಗುತ್ತಿದೆ.
ಈ ಟೂರ್ನಮೆಂಟ್ ನ ವಿಜೇತ ತಂಡ ಮುಂದಿನ ವಾರ ನಡೆಯಲಿರುವ ಬಹು ನಿರೀಕ್ಷಿತ “ಸೈಮಂಡ್ಸ್ ಚಾಂಪಿಯನ್ಸ್ ಲೀಗ್-2021″ನಲ್ಲಿ ಭಾಗವಹಿಸಲು ಅರ್ಹತೆ ಪಡೆಯಲಿದೆ…