ಬೀಡಿನಗುಡ್ಡೆ ಫ್ರೆಂಡ್ಸ್ (ಬಿ.ಜಿ ಫ್ರೆಂಡ್ಸ್) ತಂಡದ ವತಿಯಿಂದ ನವೆಂಬರ್ 22 ರಂದು ಬೀಡಿನಗುಡ್ಡೆ ಅಂಗಣದಲ್ಲಿ ಅಭ್ಯಾಸ ನಡೆಸುವ ಆಟಗಾರರಿಗೆ ಸೀಮಿತವಾಗಿ “ಬೀಡಿನಗುಡ್ಡೆ ಪ್ರೀಮಿಯರ್ ಲೀಗ್ B.P.L-2020” ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದ್ದಾರೆ.
90 ರ ದಶಕದ ಹಿರಿಯ ಆಟಗಾರರು ಹಾಗೂ ಪ್ರಸ್ತುತ ರಾಜ್ಯ ಮಟ್ಟದಲ್ಲಿ ಮಿಂಚುತ್ತಿರುವ ಯುವ ಕ್ರಿಕೆಟಿಗರ ಸಮ್ಮಿಶ್ರಣದ 4 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು ರೋಚಕ ಹಣಾಹಣಿ ಬೀಡಿನಗುಡ್ಡೆಯ ಅಂಗಣದಲ್ಲಿ ಸಾಗಿ ಬರಲಿದೆ.
ತಂಡಗಳ ವಿವರ-1)ರಾಜಾ ಅಲೆವೂರು ನೇತೃತ್ವದ ಬಿ.ಜಿ.ಅಲೆವೂರು ಫೈಟರ್ಸ್.
2)ಆಸಿಫ್ ಮೈತ್ರಿ ನೇತೃತ್ವದ ಮೈತ್ರಿ ಚಾಲೆಂಜರ್ಸ್
3)ಹರೀಶ್ ಭಟ್ ನೇತೃತ್ವದ ಬಿ.ಜಿ.ಸೂಪರ್ ಕಿಂಗ್ಸ್
4)ಮೊಹಮ್ಮದ್ ಇಕ್ಬಾಲ್ ನೇತೃತ್ವದ
ಬಿ.ಜಿ.ಚಾಂಪಿಯನ್ಸ್.
ಪ್ರಥಮ ಪ್ರಶಸ್ತಿ ವಿಜೇತ ತಂಡ 55,555 ನಗದು,ದ್ವಿತೀಯ ಸ್ಥಾನಿ 33,333ನಗದು ಸಹಿತ ಆಕರ್ಷಕ ಪಾರಿತೋಷಕಗಳನ್ನು ಪಡೆಯಲಿದ್ದು,ವೈಯಕ್ತಿಕ ಶ್ರೇಷ್ಟ ನಿರ್ವಹಣೆ ನೀಡಿದ ಆಟಗಾರರು ವಿಶೇಷ ಬಹುಮಾನಗಳನ್ನು ಪಡೆಯಲಿದ್ದಾರೆ.
ಪಂದ್ಯಾವಳಿಯ ನೇರ ಪ್ರಸಾರ
M9 ಸ್ಪೋರ್ಟ್ಸ್ ಯೂಟ್ಯೂಬ್ ಚಾನೆಲ್ ಬಿತ್ತರಿಸಿದರೆ,ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ಕಾರ್ಯ ನಿರ್ವಹಿಸಲಿದೆ…