Categories
ಸ್ಪೋರ್ಟ್ಸ್

ಕರ್ನಾಟಕದ ಮಹಾನ್ ಕ್ರೀಡಾ ಹಬ್ಬ-ಟೊರ್ಪೆಡೋಸ್ ಸ್ಪೋರ್ಟ್ಸ್ ಕಾರ್ನಿವಲ್ -ಟೇಬಲ್ ಟೆನ್ನಿಸ್ ಪಂದ್ಯಾಟ-ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದ ಆಟಗಾರರ ಸಮಾಗಮ

ಕೋವಿಡ್ ನಿಂದ ಮಂಕಾಗಿದ್ದ ಕ್ರೀಡಾ ಲೋಕಕ್ಕೆ ಮರು ಚೈತನ್ಯ ನೀಡುವ ನಿಟ್ಟಿನಲ್ಲಿ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ದಿಟ್ಟ ಹೆಜ್ಜೆಯನ್ನಿಟ್ಟಿದೆ.ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರು ಹಾಗೂ ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾದ  ಗೌತಮ್ ಶೆಟ್ಟಿ ಇವರ ಸಾರಥ್ಯದಲ್ಲಿ,
ಪ್ರಸಿದ್ಧ ಉದ್ಯಮಿಗಳಾದ ಅಲ್ಮುಝೈನ್ ಕಂಪೆನಿ ಮಾಲೀಕರಾದ ಜಕ್ರಿಯಾ ಬಜ್ಪೆ,ಸವ್ಯಸಾಚಿ ಗ್ರೂಪ್  ವಿಜಯ್ ಹೆಗ್ಡೆ,ಝಾರಾ ಕನ್ವೆನ್ಷನ್ ಸೆಂಟರ್ ನ ಜಹೀರ್ ಝಕ್ರಿಯಾ,ಕುಳಾಯಿ ಫೌಂಡೇಶನ್ ಸಂಸ್ಥಾಪಕಿ ಪ್ರತಿಭಾ ಕುಳಾಯಿ ಇವರೆಲ್ಲರ ಪ್ರಾಯೋಜಕತ್ವದಲ್ಲಿ, ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್(ರಿ)ವತಿಯಿಂದ
06-11-2021&07-11-2021ರಂದು ಟೇಬಲ್ ಟೆನ್ನಿಸ್ ಪಂದ್ಯಾಟ ಮಂಗಳೂರು ಹಳೆಯಂಗಡಿ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ  ನಡೆಯಲಿದೆ.ಈ ಪಂದ್ಯಾಟದಲ್ಲಿ ಅಂತರಾಷ್ಟ್ರೀಯ,ದೇಶೀಯ ಹಾಗೂ ರಾಜ್ಯಮಟ್ಟದ ಹೆಸರುವಾಸಿ ಆಟಗಾರರು ಭಾಗವಹಿಸಲಿದ್ದಾರೆ.
ದೇಶ ವಿದೇಶಗಳ ಪ್ರಸಿದ್ಧ,ಉದ್ಯಮಿಗಳ ಹಾಗೂ ಕ್ರೀಡಾ ಪ್ರೋತ್ಸಾಹಕರ 12 ಫ್ರಾಂಚೈಸಿಗಳು ಪ್ರತಿಷ್ಠಿತ ಟೊರ್ಪೆಡೋಸ್ ಸ್ಪೋರ್ಟ್ಸ್ ಕಾರ್ನಿವಲ್-ಟೇಬಲ್ ಟೆನ್ನಿಸ್ ಚಾಂಪಿಯನ್ಶಿಪ್ ಪಟ್ಟಕ್ಕಾಗಿ ಕಾದಾಡಲಿದ್ದಾರೆ.
ಭಾಗವಹಿಸುವ ತಂಡಗಳು ಹಾಗೂ ತಂಡಗಳ ಮಾಲೀಕರ ವಿವರ
1)ವಿಜಯ್ ಹೆಗ್ಡೆ-ಸವ್ಯಸಾಚಿ ಫಾಸ್ಟ್ ಫೀಟ್
2)ಪ್ರತಿಭಾ ಕುಳಾಯಿ-ಕುಳಾಯಿ ಸೂಪರ್ ಸ್ಪಿನ್ನರ್ಸ್
3)ಜಯರಾಮ್ ಶೆಟ್ಟಿ-ಆ್ಯಾಂಟಿ ಸ್ಟೋಕ್ಸ್
4)ಡಾ.ಅರವಿಂದ್ ಭಟ್-ಸುರತ್ಕಲ್ ಹಾಟ್ ಶಾಟ್
5)ರಾಜೀವ್-ಕುಡ್ಲ ಚಾಲೆಂಜರ್ಸ್
6)ಶ್ರೀರಾಮ್ ಕೌಡೂರು-ಉಡುಪಿ ಪ್ಯಾಡ್ಲರ್ಸ್
7)ಸುಂದರ್ ಶೆಟ್ಟಿ-ಸೂಪರ್ ಸ್ಮ್ಯಾಶರ್ಸ್
8)ರಮೇಶ್ ಶೆಟ್ಟಿ-ಮ್ಯಾಚ್ ಪಾಯಿಂಟ್
9)ಝಕ್ರಿಯಾ ಬಜ್ಪೆ-ಝಾರ ಚಾಲೆಂಜರ್ಸ್
10)ಗಣೇಶ್ ಕಿಣಿ-ಬಾಲ್ ವ್ಹಾಕರ್ಸ್
11)ಝಾರ ಝಕ್ರಿಯ-ಝಾರ ರೈಡರ್ಸ್
12)ಅಜಿತ್ ಕೋಟ-ಕೋಟ ಯುನೈಟೆಡ್ ಅ್ಯಟಾಕರ್ಸ್
ಕಳೆದ ವಾರ ಗೌತಮ್ ಶೆಟ್ಟಿ ಇವರ ಮಾಲೀಕತ್ವದ ಕೊರವಡಿ ಬೇ ನೆಸ್ಟ್ ಬೀಚ್ ಹೌಸ್ ನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ಮತ್ತು ಜೆರ್ಸಿ ಲಾಂಚಿಂಗ್ ಕಾರ್ಯಕ್ರಮ ನಡೆಯಿತು.
ಟೇಬಲ್ ಟೆನ್ನಿಸ್  ಪಂದ್ಯಾಟದಲ್ಲಿ  ಭಾಗವಹಿಸುವ ಅಂತರಾಷ್ಟ್ರೀಯ ಹಾಗೂ ರಾಷ್ಟ್ರೀಯ ಮಟ್ಟದ ಪ್ರಮುಖ ಆಟಗಾರರ ಪರಿಚಯ
ಕೌಶಿನಿ ನಾಥ್: ಇಪ್ಪತ್ತೆರೆಡರ ಹರೆಯದ ಕೌಶಿನಿ ನಾಥ್ ರವರ ಆಟದ ಶೈಲಿ ದಾಳಿಯಾಗಿದ್ದು ಭಾರತದ ಯುವತಿಯರ ತಂಡದ ಹನ್ನೊಂದನೇ ರಾಂಕ್ ಆಟಗಾರ್ತಿಯಾಗಿ ಮಿಂಚುತ್ತಿರುವ ಇವರು 2021 ನೇ ಅಂತರಾಷ್ಟ್ರೀಯ ಟೇಬಲ್ ಟೆನ್ನಿಸ್ ಕಝಕಸ್ಥಾನ್ ನ ಮುಕ್ತ ಪಂದ್ಯಾಟದ ಲ್ಲಿ ಬೆಳ್ಳಿ ಪದಕ ವಿಜೇತೆ.ಇವರು ಪ್ರತಿಭಾ ಕುಳಾಯಿ ಮಾಲೀಕತ್ವದ ಕುಲಾಯಿ ಸೂಪರ್ ಸ್ಪಿನ್ನರ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
 *ಮನೀಶ್ ಯಾದವ್*
ಮೂಲತಃ ಉತ್ತರ ಪ್ರದೇಶದವರು ಆಗಿರುವ ಮನೀಶ್ ಯಾದವ್ ಗೋವಾದ ಯುವಕರ ಟಾಪ್ 4ನೇ ಸ್ಥಾನದ ಆಟಗಾರನಾಗಿರುವ ಇವರು ಎರಡು ಬಾರಿ ರಾಷ್ಟ್ರಮಟ್ಟದಲ್ಲಿ ಆಡಿರುತ್ತಾರೆ.ಜಾಹಿರ್ ಝಕರೀಯ ಮಾಲಕತ್ವದ ಝರಾ ರೈಡರ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
 *ಸೌಮ್ಯಜಿತ್ ಬೋಸ್* :-
ಮೂಲತಃ ಪಶ್ಚಿಮ ಬಂಗಾಳದವರಾಗಿರುವ ಇವರು ಕೇರಳ ಯುವಕರ ಎರಡನೇ ರ್ಯಾಂಕ್ ನ ಆಟಗಾರರು .ಮೂರು ಬಾರಿ ರಾಷ್ಟ್ರಮಟ್ಟದಲ್ಲಿ ಕೇರಳವನ್ನು ಪ್ರತಿನಿಧಿಸುತ್ತಾರೆ ಪ್ರಸ್ತುತ ಬೆಂಗಳೂರಿನಲ್ಲಿ ಅಭ್ಯಸಿಸುತ್ತಿರುವ ಸೌಮ್ಯಜಿತ್ ಝಕರೀಯ  ಬಜ್ಪೆ ಮಾಲಕತ್ವದ  ಅಲುಝೈನ್  ಚಾಲೆಂಜರ್ಸ್ ತಂಡವನ್ನು  ಪ್ರತಿನಿಧಿಸಲಿದ್ದಾರೆ.
*ಖುಶಿ ವಿ*:-
 ಖುಶಿ ಈಗಾಗಲೇ ರಾಷ್ಟ್ರಮಟ್ಟದಲ್ಲಿ ಎರಡು ಪದಕಗಳನ್ನು ತನ್ನದಾಗಿಸಿಕೊಂಡು ಭಾರತದ ಟಾಪ್ 10 ನೇ  ಸ್ಥಾನದ ಆಟಗಾರ್ತಿ. ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಪದಕಗಳನ್ನು ಗೆದ್ದಿರುತ್ತಾರೆ . ಇದೇ ತಂಡದ ವಿಕ್ರಮಾದಿತ್ಯ ಟಾಪ್ ರ್ಯಾಂಕ್ ವುಳ್ಳ ಆಟಗಾರನಾಗಿದ್ದು ಕರ್ನಾಟಕದ ಆಟಗಾರನಾಗಿ ಎರಡು ಬಾರಿ ರಾಷ್ಟ್ರಮಟ್ಟದಲ್ಲಿ ಆಡಿರುತ್ತಾರೆ. ಇವರು ಗಣೇಶ್ ಕಿಣಿ ಮಾಲಕತ್ವದ ಬಾಲ್ ವಾಕರ್ಸ್  ತಂಡವನ್ನು ಪ್ರತಿನಿಧಿಸಲಿದ್ದಾರೆ.
 *ಅಕ್ಷಯ್ ಮಹಂತ*:- ರಾಷ್ಟ್ರೀಯ ಬೆಳ್ಳಿಪದಕ ವಿಜೇತರಾಗಿರುವ ಅಕ್ಷಯ್ ಮಹಂತ  ಟಾಪ್ ರ್ಯಾಂಕ್ನ ಕರ್ನಾಟಕದ ಆಟಗಾರ. ಮೈಸೂರು ಟೇಬಲ್ ಟೆನ್ನಿಸ್ ಆಟಗಾರರ ಪೈಕಿ ಅತ್ಯುನ್ನತ ಆಟಗಾರೂ ಹೌದು ‌.ಶ್ರೀರಾಮ ಕೌಡೂರು ಮಾಲಕತ್ವದ ಉಡುಪಿ ಪಡ್ಲರ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.
 *ಆಲಿ ಮೊಹಮ್ಮದ್* :-ತೆಲಂಗಾಣ ಟಾಪ್ ರ್ಯಾಂಕ್ ನ ಆಟಗಾರರಾಗಿರುವ ಆಲಿ ಮೊಹಮ್ಮದ್ ಭಾರತದ ಟಾಪ್ 10 ನೇ ಆಟಗಾರರು ಹೌದು .ಅಂತರಾಷ್ಟ್ರೀಯ ಆಟಗಾರನಾಗಿರುವ ಇವರು ಗೋವಾದ ಆಟಗಾರನಾಗಿ ಎರಡು ಬಾರಿ ರಾಷ್ಟ್ರ ಮಟ್ಟವನ್ನು ಪ್ರತಿನಿಧಿಸಿರುತ್ತಾರೆ. ಇದೇ ತಂಡದ ಆಟಗಾರರಾಗಿರುವ ಧೀರಜ್ ರೈ ಗೋವಾದ ಯುವಕರ ಟಾಪ್ ಸ್ಥಾನದಲ್ಲಿ ಗುರುತಿಸಿಕೊಳ್ಳುವ ಆಟಗಾರನಾಗಿದ್ದು ಕ್ರೀಡಾ ಕೋಟಾದಲ್ಲಿ ಆದಾಯ ತೆರಿಗೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಜಯರಾಮ ಶೆಟ್ಟಿ ಮಾಲಕತ್ವದ ಆಂಟಿ ಸ್ಟೋಕ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
 *ಕಲೈವನನ್ ಎಮ್* :-
ರಾಷ್ಟ್ರೀಯ ಮಟ್ಟದ ಆಟಗಾರನಾಗಿರುವ ಇವರು ಕರ್ನಾಟಕದ ಟಾಪ್ ನಾಲ್ಕನೇ ಆಟಗಾರ .ವಿಜಯ್ ಹೆಗ್ಡೆ ಮಾಲಕತ್ವದ ಸವ್ಯಸಚಿ ಫಾಸ್ಟ್ ಫೀಟ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
 *ಮೊಹಮ್ಮದ್ ಅಲಿ*:-
 ಭಾರತದ ಟಾಪ್ ನಾಲ್ಕನೇ ಆಟಗಾರರಾಗಿರುವ ಇವರು ಅಂತರಾಷ್ಟ್ರೀಯ ಮಟ್ಟದಲ್ಲಿ ಆಡಿರುತ್ತಾರೆ. ರಮೇಶ್ ಶೆಟ್ಟಿ ಮಾಲಕತ್ವದ ಮ್ಯಾಚ್ ಪಾಯಿಂಟ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
 *ರಕ್ಷಿತ್ .ಆರ್  ಬರಿಗ್ದಾದ್*:-
ಕರ್ನಾಟಕದ ಯುವಕರ ತಂಡದ ರಾಜ್ಯ ಚಾಂಪಿಯನ್ ಆಗಿರುವ ಇವರು ಅಂತರಾಷ್ಟ್ರೀಯ ಟೂರ್ನಮೆಂಟ್ ಗಳಲ್ಲಿ ಆಡಿ ಕಂಚಿನ ಪದಕವನ್ನು ಗೆದ್ದಿರುತ್ತಾರೆ. ಸುಂದರ್ ಶೆಟ್ಟಿ ಮಾಲಕತ್ವದ ಸೂಪರ್ ಸ್ಮ್ಯಾ ಶರ್ಸ್  ತಂಡವನ್ನು ಪ್ರತಿನಿಧಿಸಲಿದ್ದಾರೆ.
 *ಶ್ರೇಯಲ್ ತೇಲಂಗ್* :-ಭಾರತದ ಟಾಪ್ 10 ನೇ ಆಟಗಾರನಾಗಿದ್ದು ಡಾ.ಅರವಿಂದ್ ಭಟ್ ಮಾಲಕತ್ವದ ಹಾಟ್ ಶಾಟ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
 *ರಾಜು ಕುಂಡು* :-ಭಾರತದ ಟಾಪ್ 10 ನೇ ಆಟಗಾರನಾಗಿರುವ ಇವರು ಪ್ರಸ್ತುತ ಕರ್ನಾಟಕದ ಟಾಪ್ ಹತ್ತನೇ ಆಟಗಾರರೂ ಹೌದು .ಅಜಿತ್ ಕೋಟ ಮಾಲಕತ್ವದ ಯುನಿಟೆಡ್ ಅಟೆಕರ್ಸ್  ತಂಡವನ್ನು ಪ್ರತಿನಿಧಿಸಲಿದ್ದಾರೆ.
 *ಸೆನ್ಹೋರ ಸೋಸ್ಟರ್ ಡಿ ಸೋಜಾ*:- ಅಂತರಾಷ್ಟ್ರೀಯ ಆಟಗಾರ್ತಿಯಾಗಿರುವ ಸೆನ್ಹೋರಾ ಸೋಸ್ಟರ್ ಡಿ ಸೋಜಾರವರು ಮುಂಬೈನವರು. ಬ್ಯಾಂಕ್ ಆಫ್ ಬರೋಡದಲ್ಲಿ ಉದ್ಯೋಗಿಯಾಗಿದ್ದು ಆರನೇ ಸ್ಟ್ರೈಕ್ ನಲ್ಲಿ  ಗುರುತಿಸಿಕೊಳ್ಳುತ್ತಾರೆ . ಇದೇ ಸ್ಥಾನದಲ್ಲಿ ಗುರುತಿಸಿಕೊಳ್ಳುವ ಇನ್ನೋರ್ವ  ಆಟಗಾರ್ತಿ ಮರಿಯಾ ಮೊದಲು ಭಾರತದ ಟಾಪ್ ಅಂತರಾಷ್ಟ್ರೀಯ ಆಟಗಾರ್ತಿಯಾಗಿದ್ದು ಪ್ರಸ್ತುತ ಕೆನರಾ ಬ್ಯಾಂಕ್ ನಲ್ಲಿ ಉದ್ಯೋಗಿಯೂ ಹೌದು.ರಾಜೀವ್ ಮಾಲಕತ್ವದ ಕುಡ್ಲ ಚಾಲೆಂಜರ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಸ್ಪರ್ಧೆಯ ನಿಯಮಗಳು:-
◆ಲೀಗ್ ಕಮ್ ನಾಕೌಟ್.
◆ಪಂದ್ಯಾಟಕ್ಕೆ ಜೆರ್ಸಿಯನ್ನು  ನೀಡಲಾಗುತ್ತದೆ.
◆ಆಹಾರ ಮತ್ತು ವಸತಿ ವ್ಯವಸ್ಥೆಯಿದೆ.
◆ಆಟಗಾರ ಗಳಿಸಿದ ಪ್ರತಿಯೊಂದು ಪಾಯಿಂಟ್ ಗಳಿಗೆ  ನಗದು ಬಹುಮಾನವಿರುತ್ತದೆ.
◆ಪ್ರತಿ ಪಂದ್ಯಾಟದ ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು.
ಪ್ರಥಮ ಬಹುಮಾನ:-2 ಲಕ್ಷ ನಗದು
ದ್ವಿತೀಯ ಬಹುಮಾನ:-1 ಲಕ್ಷ ನಗದು
*M9 ಸ್ಪೋರ್ಟ್ಸ್ ಪಂದ್ಯಾಟದ ನೇರ ಪ್ರಸಾರವನ್ನು ಬಿತ್ತರಿಸಲಿದೆ.*
ಮಾಹಿತಿಗಾಗಿ  ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ:
9481675900
9845121498
torpedoestabletennis@gmail.com

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

sixteen − twelve =