Categories
ಸ್ಪೋರ್ಟ್ಸ್

ದಾಖಲೆಯ ಟೊರ್ಪೆಡೋಸ್ ಸ್ಪೋರ್ಟ್ಸ್ ಕಾರ್ನಿವಲ್ ಕ್ರೀಡಾಕೂಟದಲ್ಲಿ ಗಣ್ಯಾತಿಗಣ್ಯರು

ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರು ಹಾಗೂ ಉಡುಪಿ ಜಿಲ್ಲೆ ಟೆನ್ನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾದ ಗೌತಮ್ ಶೆಟ್ಟಿ ಇವರ ಸಾರಥ್ಯದಲ್ಲಿ ನಡೆಯಲಿರುವ ದಾಖಲೆಯ ಟೊರ್ಪೆಡೋಸ್ ಸ್ಪೋರ್ಟ್ಸ್ ಕಾರ್ನಿವಲ್ ಕ್ರೀಡಾಕೂಟ(ಟೇಬಲಗ ಟೆನ್ನಿಸ್)ದಲ್ಲಿ ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ.
ದಿನಾಂಕ ನವೆಂಬರ್ 6 ರ ಬೆಳಿಗ್ಗೆ 10‌.30 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು ಉಳ್ಳಾಲದ ಶಾಸಕರಾದ ಯು.ಟಿ‌.ಖಾದರ್,ಮಾಜಿ ಶಾಸಕರಾದ ರಮಾನಾಥ ರೈ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಐವನ್ ಡಿಸೋಜಾ, ಮಂಗಳೂರು ಉತ್ತರದ ಸಹಾಯಕ ಪೊಲೀಸ್ ಆಯುಕ್ತರಾದ ಮಹೇಶ್ ಕುಮಾರ್, ಝರಾ ಕನ್ವೆನ್ಷನ್ ಹಾಲ್ ನ ಮುಖ್ಯಸ್ಥರಾದ ಜಾಹೀರ್ ಝಕ್ರೀಯಾ, ಚಾರ್ಟೆಡ್ ಅಕೌಂಟೆಂಟ್ ಆಗಿರುವ ಎಸ್ ಎಸ್ ನಾಯಕ್, ರಾಷ್ಟ್ರಮಟ್ಟದ ಟೇಬಲ್ ಟೆನ್ನಿಸ್ ಆಟಗಾರರಾಗಿರುವ ಕೃನಾಲ್ ತೆಲಂಗ್, ಪದುಪಣಂಬೂರ್ ಪಂಚಾಯತ್ ನ ಸದಸ್ಯರಾಗಿರುವ ಮೋಹನ್ ದಾಸ್ ಆಗಮಿಸಲಿದ್ದಾರೆ.
        ದಿನಾಂಕ 07-11-2021 ರಂದು ಸಂಜೆ 4:00 ಗಂಟೆಗೆ  ಸರಿಯಾಗಿ ಟೋರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ , ಹಳೆಯಂಗಡಿಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು ಮುಖ್ಯ ಅತಿಥಿಗಳಾಗಿ ಮೂಡಬಿದ್ರೆಯ ಶಾಸಕರಾಗಿರುವ ಉಮಾನಾಥ್ ಕೋಟ್ಯಾನ್, ಮಾಜಿ ಸಚಿವರಾಗಿರುವ ಅಭಯಚಂದ್ರ ಜೈನ್, ಮಂಗಳೂರು ಉತ್ತರದ ಮಾಜಿ ಶಾಸಕರಾಗಿರುವ ಮೊಹಿದಿನ್ ಬಾವ, ಪದುಪಣಂಬೂರ್ ಪಂಚಾಯತ್ ನ ಅಧ್ಯಕ್ಷೆಯಾಗಿರುವ ಮಂಜುಳಾ, ಜಿಲ್ಲಾ ಪಂಚಾಯತ್ ನ ಮಾಜಿ ಉಪಾಧ್ಯಕ್ಷರಾಗಿರುವ ಕಸ್ತೂರಿ ಪಂಜ, ಜಿಲ್ಲಾ ಪಂಚಾಯತ್ ನ ಸದಸ್ಯರಾಗಿರುವ ವಿನೋದ್ ಬೋಳೂರು, ಯುವ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷರಾದ ಮಿಥುನ್ ರೈ, ಉದ್ಯಮಿಯಾಗಿರುವ ನಾಗಭೂಷಣ್ ರೆಡ್ಡಿ ಆಗಮಿಸಲಿದ್ದಾರೆ.
ಸರ್ವರಿಗೂ ಆದರದ ಸ್ವಾಗತ ಬಯಸುವ
ಗೌತಮ್ ಶೆಟ್ಟಿ
ಅಧ್ಯಕ್ಷರು ಟೋರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ (ರಿ)

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

6 + eleven =