17.1 C
London
Monday, September 9, 2024
Homeಸ್ಪೋರ್ಟ್ಸ್ಟೊರ್ಪೆಡೋಸ್ ಗೌತಮ್ ಶೆಟ್ಟಿ ಸಾರಥ್ಯದಲ್ಲಿ-ಕ್ರೀಡಾ ಕ್ಷೇತ್ರದಲ್ಲೇ ಕ್ರಾಂತಿಕಾರಿ ಬೆಳವಣಿಗೆ- ಟೊರ್ಪೆಡೋಸ್ ಸ್ಪೋರ್ಟ್ಸ್ ಕಾರ್ನಿವಲ್-ನಗದು ಬಹುಮಾನಗಳ‌ ಸುರಿಮಳೆ

ಟೊರ್ಪೆಡೋಸ್ ಗೌತಮ್ ಶೆಟ್ಟಿ ಸಾರಥ್ಯದಲ್ಲಿ-ಕ್ರೀಡಾ ಕ್ಷೇತ್ರದಲ್ಲೇ ಕ್ರಾಂತಿಕಾರಿ ಬೆಳವಣಿಗೆ- ಟೊರ್ಪೆಡೋಸ್ ಸ್ಪೋರ್ಟ್ಸ್ ಕಾರ್ನಿವಲ್-ನಗದು ಬಹುಮಾನಗಳ‌ ಸುರಿಮಳೆ

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img
80 ರ ದಶಕದಲ್ಲಿ ಸಮಾನ ಮನಸ್ಕ ಹಿರಿಯ ಕ್ರೀಡಾಪಟುಗಳ ಒಗ್ಗೂಡುವಿಕೆಯಿಂದ ಕುಂದಾಪುರದಲ್ಲಿ‌ ಮೊದಲಾಗಿ ಟೆನ್ನಿಸ್ಬಾಲ್ ಕ್ರಿಕೆಟ್ ತಂಡವಾಗಿ ಸ್ಥಾಪನೆಯಾದ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಕುಂದಾಪುರ.
ಕರಾವಳಿ ಭಾಗದಲ್ಲಿ ಮೊತ್ತಮೊದಲ ಬಾರಿಗೆ ರಾಜ್ಯಮಟ್ಟದ ಪ್ರಶಸ್ತಿ ಜಯಿಸಿದ ತಂಡ ಟೊರ್ಪೆಡೋಸ್. ಬ್ಲೂ ಸ್ಟಾರ್  ಶಿರ್ವ ತಂಡ ಆಯೋಜಿಸಿದ್ದ ಮೊತ್ತಮೊದಲ ರಾಜ್ಯಮಟ್ಟದ ಪಂದ್ಯಾವಳಿಯ ಫೈನಲ್ ನಲ್ಲಿ ಆ ದಿನಗಳಲ್ಲಿ ಎದುರಾಳಿಗಳ ಪಾಲಿನ ಸಿಂಹಸ್ವಪ್ನ ಪ್ಯಾರಡೈಸ್ ಬನ್ನಂಜೆ ತಂಡದೆದುರು ಹಿರಿಯ ಆಟಗಾರ ರಮೇಶ್ ಶೇರಿಗಾರ್ ಇವರ ಎಸೆತದಲ್ಲಿ ನಾರಾಯಣ ಶೆಟ್ಟಿ ಸಿಕ್ಸರ್ ಸಿಡಿಸಿ ಮೊದಲ ರಾಜ್ಯ ಮಟ್ಟದ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತ್ತು.ಹಿರಿಯ ಆಟಗಾರರು ನೇಪಥ್ಯಕ್ಕೆ ಸರಿದ ಬಳಿ ನಾಯಕನ ಜವಾಬ್ದಾರಿಯನ್ನು ಹೊತ್ತ ಗೌತಮ್ ಶೆಟ್ಟಿ ಸಾರಥ್ಯದಲ್ಲಿ ಕರ್ನಾಟಕದ ಹಲವಾರು ಜಿಲ್ಲೆಯಾದ್ಯಂತ ಟೊರ್ಪೆಡೋಸ್ ತಂಡವನ್ನು ಕೊಂಡೊಯ್ದ ಹಲವಾರು ಪ್ರಶಸ್ತಿಗಳನ್ನು ಜಯಿಸಿದ್ದರು.
ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಹಳೆಯಂಗಡಿ
ಕಾಲ ಕ್ರಮೇಣ ಉದ್ಯೋಗ ನಿಮಿತ್ತ ಮಂಗಳೂರಿನಲ್ಲಿ ನೆಲೆನಿಂತ ಗೌತಮ್ ಶೆಟ್ಟಿ,ಹಳೆಯಂಗಡಿಯಲ್ಲಿ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್(ರಿ)ಸಂಸ್ಥೆಯನ್ನು ಸ್ಥಾಪಿಸಿ,ಹಲವಾರು ಕ್ರೀಡಾಕೂಟಗಳನ್ನು‌ ಸಂಘಟಿಸಿ,ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುತ್ತಾರೆ.ಈ ಎಲ್ಲಾ ಸಾಧನೆಗಳಿಗಾಗಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ,ಸಮಾಜರತ್ನ ಗೌರವ,ಬಂಟರತ್ನ ಪ್ರಶಸ್ತಿ ಹೀಗೆ ನೂರಾರು ಗೌರವ ಸನ್ಮಾನಗಳು ಗೌತಮ್ ಶೆಟ್ಟಿಯನ್ನು ಅರಸಿಕೊಂಡು ಬಂದಿರುತ್ತದೆ.ಕ್ರೀಡಾಕ್ಷೇತ್ರದಲ್ಲಿ ಹೊಸತನವನ್ನು ತರುವ ನಿಟ್ಟಿನಲ್ಲಿ ಹಲವಾರು ವಿನೂತನ ಪ್ರಯೋಗಗಳ ಬಗ್ಗೆ ಚಿಂತನೆ ನಡೆಸುವ ಗೌತಮ್ ಶೆಟ್ಟಿ ಈ ಬಾರಿ ದಾಖಲೆಯ ಟೊರ್ಪೆಡೋಸ್ ಸ್ಪೋರ್ಟ್ಸ್ ಕಾರ್ನಿವಲ್-2021 ಕ್ರೀಡಾ ಹಬ್ಬವನ್ನು ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಅದ್ಧೂರಿಯಾಗಿ ಸಂಘಟಿಸುವತ್ತ ದಿಟ್ಟ ಹೆಜ್ಜೆಯಿಟ್ಟಿದ್ದಾರೆ.
ಟೊರ್ಪೆಡೋಸ್ ಸ್ಪೋರ್ಟ್ಸ್ ಕಾರ್ನಿವಲ್-2021 ಕ್ರೀಡಾಕೂಟದಲ್ಲಿ ಟೆನ್ನಿಸ್ಬಾಲ್ ಕ್ರಿಕೆಟ್, ಲೆದರ್ ಬಾಲ್ ಕ್ರಿಕೆಟ್, ಬಾಕ್ಸ್ ಕ್ರಿಕೆಟ್, ಟೇಬಲ್ ಟೆನ್ನಿಸ್, ಬ್ಯಾಡ್ಮಿಂಟನ್, ಚೆಸ್,ಫುಟ್ಬಾಲ್ ಈ ಎಲ್ಲಾ ಪಂದ್ಯಾಟಗಳು ನಡೆಯಲಿದೆ.
ಟೆನ್ನಿಸ್ಬಾಲ್ ಕ್ರಿಕೆಟ್ ನಲ್ಲಿ ಕ್ರಾಂತಿಕಾರಿ ಬೆಳವಣಿಗೆ ನಾಂದಿ ಹಾಡಲಿರುವ ವಿನೂತನ ಪ್ರಯೋಗ.
ನೊಂದಣಿ ನಿಯಮಗಳು
ಈ ಟೂರ್ನಮೆಂಟ್ ನಲ್ಲಿ ಪ್ರತಿಯೊಬ್ಬ ಆಟಗಾರನಿಗೆ ಹೆಚ್ಚಿನ ಮಹತ್ವನೀಡಲಾಗುತ್ತಿದ್ದು.
ಪ್ರತಿಯೊಬ್ಬ ಆಟಗಾರನೇ 1000 ರೂ ಪಾವತಿಸಿ ಇಲ್ಲಿ ನೊಂದಣಿ ಮಾಡಿಕೊಳ್ಳಬೇಕಿದೆ.ಅರ್ಜಿಯಲ್ಲಿ
ಹೆಸರು,ವಯಸ್ಸು,ಸ್ಥಳ,ಆತ ಪ್ರತಿನಿಧಿಸಿರುವ ತಂಡ ಹಾಗೂ ಈ ವರೆಗೆ ಆಡಿರುವ ಟೂರ್ನಮೆಂಟ್ ಗಳ ವಿವರ,ಒಂದು ವೇಳೆ ಆತ ಬ್ಯಾಟ್ಸ್‌ಮನ್‌ ಆದಲ್ಲಿ ಬಲಗೈ ಅಥವಾ ಎಡಗೈ,ಯಾವ ಕ್ರಮಾಂಕದ ಆಟಗಾರ,ಒಂದು ವೇಳೆ ಬೌಲರ್ ಆದಲ್ಲಿ ವೇಗ ಅಥವಾ ಸ್ಪಿನ್,ಎಡಗೈ ಅಥವಾ ಬಲಗೈ, ಆಫ್ ಸ್ಪಿನ್ ಅಥವಾ ಲೆಗ್ ಸ್ಪಿನ್ ಈ ಎಲ್ಲಾ ವಿವರಗಳನ್ನು ಅರ್ಜಿಯಲ್ಲಿ ನಮೂದಿಸಬೇಕಿದೆ.ಅರ್ಜಿಯಲ್ಲಿ ನಮೂದಿಸಿರುವ ಆಟಗಾರರನ್ನು ಸಂಘಟಕರ ವಿಭಾಗಗಳನ್ನಾಗಿ ಮಾಡಲಾಗುತ್ತಿದೆ.ಈ ಅರ್ಜಿಯಲ್ಲಿ ಟಾಪ್ ಲಿಸ್ಟ್ ನಲ್ಲಿ ಬರುವ ಆಟಗಾರನನ್ನು ತಂಡದ ನಾಯಕನನ್ನಾಗಿ ಮಾಡಲಾಗುತ್ತದೆ.
ಸಂಘಟಕರು ರಚಿಸಿದ ತಂಡವನ್ನು ಕೊಂಡುಕೊಳ್ಳಲು 90 ರ ದಶಕದ ಹಿರಿಯ ತಂಡಗಳಿಗೆ ಮೊದಲ ಆದ್ಯತೆ ಕಲ್ಪಿಸಲಾಗುತ್ತದೆ.
ಒಂದು ತಂಡದಲ್ಲಿ 15 ಆಟಗಾರರು ಭಾಗವಹಿಸಬೇಕಾಗಿದೆ.
ಪಂದ್ಯಾಟದ ನಿಯಮ
ಎಲ್ಲಾ ಪಂದ್ಯಗಳು 10 ಓವರ್ ಗಳಲ್ಲಿ ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ನಡೆಯಲಿದ್ದು 15 ಆಟಗಾರರಲ್ಲಿ 10 ಜನ ಬೌಲಿಂಗ್ ಮಾಡಬೇಕಾಗಿದೆ.
2 ಓವರ್ ಆರಂಭಿಕ‌ ಆಟಗಾರರು ಆಡಬೇಕಾಗಿದ್ದು,ಮಧ್ಯೆ ಔಟ್ ಆದರೂ ಕೂಡ 2 ಓವರ್ ಪೂರ್ಣಗೊಳಿಸಬೇಕಿದೆ.
ಹೀಗೆ 8 ಓವರ್ ಗಳಲ್ಲಿ  ನಡೆಯಲಿದ್ದು,9 ನೇ ಓವರ್ ನಲ್ಲಿ ಒಬ್ಬ ಆಟಗಾರ ಪೆವಿಲಿಯನ್ ಮರಳಿ 11 ನೇ ಆಟಗಾರ ಬ್ಯಾಟಿಂಗ್ ಮಾಡಬೇಕಿದೆ.ಉದಾಹರಣೆಗೆ 10 ಓವರ್ ಗಳಲ್ಲಿ 10 ಬಾರಿ ಔಟ್ ಆಗಿ 100 ರನ್ ಗಳಿಸಿದ್ದರೆ 100ರನ್×10ಔಟ್=10 ರನ್ ಗಳ ಗುರಿ ನೀಡಲಾಗುತ್ತದೆ.ಚೇಸಿಂಗ್ ಮಾಡುವ ತಂಡಕ್ಕೂ ಇದೇ ನಿಯಮಗಳನ್ನು ಪಾಲಿಸಬೇಕಾಗುತ್ತದೆ‌.
ಇಲ್ಲಿ 11 ಜನರೂ ತಮ್ಮ ನಿರ್ವಹಣೆ ನೀಡಲೇಬೇಕಾದ ಅನಿವಾರ್ಯತೆಯ ಕಾರಣ ಪ್ರತಿಯೊಬ್ಬ ಆಟಗಾರರಿಗೂ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಅವಕಾಶವಿದ್ದು,ಪ್ರತಿಯೊಂದು ರನ್,ಪಡೆಯುವ ಪ್ರತಿ ವಿಕೆಟ್ ಗಳಿಗೆ ನಗದು ಬಹುಮಾನ ಗಳಿಸುವ ಸುವರ್ಣಾವಕಾಶ ಆಟಗಾರರ ಪಾಲಿಗೊದಗಿದೆ.
ಸತತ 2 ತಿಂಗಳುಗಳ ಕಾಲ ದೀರ್ಘ ಅಧ್ಯಯನ ನಡೆಸಿ,ಈ ವಿಶೇಷ ಪ್ಲ್ಯಾನ್ ಖುದ್ದು ಗೌತಮ್ ಶೆಟ್ಟಿಯವರು ಸಿದ್ಧಪಡಿಸಿದ್ದಾರೆ‌.
ಯಾವ ತಂಡದ ಮಾಲೀಕರಿಗೂ ತಂಡ ಕಟ್ಟುವ ಬಗ್ಗೆ ತಲೆನೋವಿನ ವಿಚಾರ ಇಲ್ಲ,ಪ್ರತಿಯೊಬ್ಬ ಆಟಗಾರ ಎರ್ರಾಬಿರ್ರಿ ಹೊಡೆತಗಳಿಗೆ ಮನ ಮಾಡದೇ ಸಿಂಗಲ್ಸ್,ಡಬಲ್ಸ್ ರನ್ ಗಳ ಅಗತ್ಯತೆಯನ್ನು ಅರಿಯಬಲ್ಲ, ಪಂದ್ಯ ಕೂಡ ಕೊನೆಯ ಹಂತದವರೆಗೂ ರೋಚಕವಾಗಿ ಪಂದ್ಯ ಮೂಡಿಬರಲಿದೆ ಎಂಬ ಅಭಿಪ್ರಾಯವನ್ನು ಗೌತಮ್ ಶೆಟ್ಟಿ ಸ್ಪೋರ್ಟ್ಸ್ ಕನ್ನಡ ದೊಂದಿಗೆ ಹಂಚಿಕೊಂಡಿದ್ದಾರೆ.
ಟೊರ್ಪೆಡೋಸ್ ಟ್ರೋಫಿ-2021 ವಿಜೇತ ತಂಡ 5 ಲಕ್ಷ ನಗದು,ದ್ವಿತೀಯ ಸ್ಥಾನಿ 3 ಲಕ್ಷ ನಗದು ಬಹುಮಾನಗಳನ್ನು ಜಯಿಸಲಿದೆ.
ಸಂಪರ್ಕ ಹಾಗೂ ಮಾಹಿತಿ
ಗೌತಮ್ ಶೆಟ್ಟಿ-9845121498,ಕಿಶೋರ್-9886019595 ಸಂಪರ್ಕಿಸಬಹುದು ಹಾಗೂ torpedoescrickettennisball@gmail.com ವೆಬ್ಸೈಟ್ ನಲ್ಲಿ ಹೆಚ್ಚಿನ ಮಾಹಿತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಲೆದರ್ ಬಾಲ್ ಕ್ರಿಕೆಟ್
ಲೆದರ್ ಬಾಲ್ ಕ್ರಿಕೆಟ್  ಪಂದ್ಯಾವಳಿ ಮಂಗಳೂರಿನಲ್ಲಿ ನಡೆಯಲಿದ್ದು ಪ್ರಶಸ್ತಿ ವಿಜೇತ ತಂಡ 5 ಲಕ್ಷ ನಗದು,ದ್ವಿತೀಯ ಸ್ಥಾನಿ 3 ಲಕ್ಷ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.
ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೂ ಕೂಡ ವೈಯಕ್ತಿಕ ನೋಂದಣಿಗೆ ಆದ್ಯತೆ ನೀಡಲಾಗಿದ್ದು,ಆಟಗಾರ ಪ್ರತಿ ರನ್ ಹಾಗೂ ಪಡೆಯುವ ಪ್ರತಿ ವಿಕೆಟ್ ಗೂ ನಗದು ಬಹುಮಾನವನ್ನು ಪಡೆಯಲಿದ್ದಾರೆ.
ಸಂಪರ್ಕ ಹಾಗೂ ಮಾಹಿತಿ
ಗೌತಮ್ ಶೆಟ್ಟಿ-9845121498,ಕಿಶೋರ್-9886019595,torpedoescricket@gmail.com
ಬ್ಯಾಡ್ಮಿಂಟನ್
ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ಬ್ಯಾಡ್ಮಿಂಟನ್ ಪಂದ್ಯಾಟ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಹಳೆಯಂಗಡಿಯಲ್ಲಿ ನಡೆಯಲಿದ್ದು,ಟೀಮ್ ಚಾಂಪಿಯನ್ಶಿಪ್ ಇದಾಗಿದ್ದು,ಆಟಗಾರ ಪಡೆಯುವ ಪ್ರತಿಯೊಂದು ಅಂಕಕ್ಕೂ ನಗದು ಬಹುಮಾನ ಪಡೆಯಲಿದ್ದಾರೆ.
ಪ್ರಥಮ ಬಹುಮಾನ 2 ಲಕ್ಷ,ದ್ವಿತೀಯ ಬಹುಮಾನ 1 ಲಕ್ಷ ನಗದು ನೀಡಲಾಗುತ್ತಿದೆ.
ಸಂಪರ್ಕ ಹಾಗೂ ಮಾಹಿತಿ
ಗೌತಮ್ ಶೆಟ್ಟಿ-9845121498,torpedoesshuttlebad@gmail.com
ಟೇಬಲ್ ಟೆನ್ನಿಸ್
ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಹಳೆಯಂಗಡಿಯಲ್ಲಿ ನಡೆಯಲಿರುವ ಟೇಬಲ್ ಟೆನ್ನಿಸ್ ಪಂದ್ಯಾಟ ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ಸಾಗಲಿದೆ.ಆಟಗಾರ ಪ್ರತಿಯೊಂದು ಅಂಕಕ್ಕೂ ನಗದು ಬಹುಮಾನ ಪಡೆಯಲಿದ್ದಾರೆ.ಪ್ರಥಮ ಪ್ರಶಸ್ತಿ ವಿಜೇತರು 2 ಲಕ್ಷ ನಗದು,ದ್ವಿತೀಯ ಸ್ಥಾನಿ 1 ಲಕ್ಷ ನಗದು ಬಹುಮಾನ ಪಡೆಯಲಿದ್ದಾರೆ.
ಸಂಪರ್ಕ ಹಾಗೂ ಮಾಹಿತಿ
ಗೌತಮ್ ಶೆಟ್ಟಿ-9845121498,
ಅಶ್ವಿನ್ ಕುಮಾರ್-9110846932
torpedoes table tennis I gmail.com
ಟೊರ್ಪೆಡೋಸ್ ಫುಟ್ಬಾಲ್ ಟೂರ್ನಮೆಂಟ್
ಫುಟ್ಬಾಲ್ ಟೂರ್ನಮೆಂಟ್ ಕೋಟೇಶ್ವರದ ಯುವ ಮೆರಿಡಿಯನ್ ನ ಹುಲ್ಲುಹಾಸಿನ ಅಂಗಣದಲ್ಲಿ ನಡೆಯಲಿದ್ದು,ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ಸಾಗಲಿದೆ‌.ಆಟಗಾರ ಹೊಡೆಯುವ ಪ್ರತಿಯೊಂದು ಗೋಲ್ ನಗದು ಬಹುಮಾನ‌ ಪಡೆಯಲಿದ್ದಾರೆ.
ಪ್ರಥಮ ಪ್ರಶಸ್ತಿ 2 ಲಕ್ಷ ನಗದು,ದ್ವಿತೀಯ 1 ಲಕ್ಷ ನಗದು ಬಹುಮಾನ ಪಡೆಯಲಿದ್ದಾರೆ.
ಸಂಪರ್ಕ,ಮಾಹಿತಿ
 ಗೌತಮ್ ಶೆಟ್ಟಿ-9845121498,
ಕಾರ್ತಿಕ್-9591596816
ಚೆಸ್
 ಚೆಸ್ ಪಂದ್ಯಾವಳಿ ಬೀಚ್ ರೆಸಾರ್ಟ್ ಕೊರವಡಿಯಲ್ಲಿ ನಡೆಯಲಿದೆ.
2 ಲಕ್ಷ ನಗದು ಬಹುಮಾನ ವಿಜೇತರಿಗೆ ಘೋಷಿಸಲಾಗಿದೆ.
ಸಂಪರ್ಕ ಮಾಹಿತಿ
ಗೌತಮ್ ಶೆಟ್ಟಿ-9845121498,ಬಾಬು ಪೂಜಾರಿ-9448547958,6364336158
ಟೊರ್ಪೆಡೋಸ್ ಲೆಜೆಂಡ್ಸ್ ಕಪ್ ಕ್ರಿಕೆಟ್
ಕರ್ನಾಟಕ ರಾಜ್ಯದ ಹಿರಿಯ ಆಟಗಾರರಿಗಾಗಿ 40 ರ ವಯೋಮಿತಿಯ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ.
ವೈಯಕ್ತಿಕ ನೋಂದಣಿ ಪ್ರಕ್ರಿಯೆ ಮೂಲಕ ತಂಡಗಳನ್ನು ರಚಿಸಲಾಗುತ್ತದೆ.
ವಿಜೇತ ತಂಡ 2 ಲಕ್ಷ ನಗದು,ದ್ವಿತೀಯ ಸ್ಥಾನಿ-1ಲಕ್ಷ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.
ಸಂಪರ್ಕ ಮಾಹಿತಿ
ಗೌತಮ್ ಶೆಟ್ಟಿ-9845121498
ಕೋಟ ರಾಮಕೃಷ್ಣ ಆಚಾರ್-6363022576
ಬಾಕ್ಸ್ ಕ್ರಿಕೆಟ್
ಕೋಟೇಶ್ವರದ ಯುವ ಮೆರಿಡಿಯನ್ ಅಂಕಣದಲ್ಲಿ ಬಾಕ್ಸ್ ಕ್ರಿಕೆಟ್ ಪಂದ್ಯಾಟ ನಡೆಯಲಿದ್ದು,ಆಕರ್ಷಕ ನಗದು ಬಹುಮಾನಗಳನ್ನು ಆಟಗಾರರು ಪಡೆಯಲಿದ್ದಾರೆ‌.ಇಲ್ಲಿಯೂ ಕೂಡ ವೈಯಕ್ತಿಕ ನೋಂದಣಿ ಅತ್ಯಗತ್ಯ.
ಸಂಪರ್ಕ ಮಾಹಿತಿ
ಗೌತಮ್ ಶೆಟ್ಟಿ-9845121498
ಕಿಶೋರ್-9886019595.
ಯಾವುದೇ ಕ್ರೀಡೆಯಾಗಲಿ, ತಂಡದಲ್ಲಿ ಪ್ರತಿಯೊಬ್ಬ ಆಟಗಾರರ ವೈಯಕ್ತಿಕ ಜವಾಬ್ದಾರಿಯ ಮಹತ್ವದ ಅರಿವನ್ನು ಟೊರ್ಪೆಡೋಸ್ ಕಾರ್ನಿವಲ್ ಮೂಡಿಸಲಿದ್ದು,ಆಟಗಾರರಿಗೆ ನಗದು ಬಹುಮಾನಗಳ ಹೊಳೆಯನ್ನೇ ಹರಿಸಲಾಗುತ್ತಿದೆ.
ಹತ್ತು ದಿನಗಳ ಕಾಲ ನಡೆಯುವ ಹೊನಲು ಬೆಳಕಿನ ಈ ಕ್ರೀಡಾಕೂಟದ ನೇರ ಪ್ರಸಾರವನ್ನು ಪ್ರಸ್ತುತ ದಿನಗಳ ಪ್ರಸಿದ್ಧ M9 ಸ್ಪೋರ್ಟ್ಸ್ ಯೂ ಟ್ಯೂಬ್ ಚಾನೆಲ್ ಬಿತ್ತರಿಸಲಿದೆ.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

3 + eleven =