ಟೊರ್ಪೆಡೋಸ್ ಸ್ಪೋರ್ಟ್ಸ್ ಕಾರ್ನಿವಲ್ -2021 ಮುಂದೂಡಿಕೆ

ದೇಶದಲ್ಲಿ ಕೊರೋನಾ ಮಹಾಮಾರಿ ಮತ್ತೆ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಮತ್ತು ರಾಜ್ಯ ಸರಕಾರದ ಕೊವಿಡ್-19 ಮಾರ್ಗಸೂಚಿಗಳನ್ನು ಪಾಲಿಸುವ ಉದ್ದೇಶದಿಂದ ಟಾರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ (ರಿ) ಆಯೋಜಿಸಲು ಉದ್ದೇಶಿಸಿರುವ ಅತ್ಯಂತ ಪ್ರತಿಷ್ಠಿತ “ಟೊರ್ಪೆಡೋಸ್ ಸ್ಪೋರ್ಟ್ಸ್ ಕಾರ್ನಿವಲ್ -2021” ಮುಂದೂಡಲ್ಪಟ್ಟಿದೆ ಎಂದು ಕ್ಲಬ್ ನ ಪ್ರಕಟಣೆ ತಿಳಿಸಿದೆ.

ಮೇ 1 ರಿಂದ 10ರ ವರೆಗೆ ಮಂಗಳೂರು, ಸುರತ್ಕಲ್ ಮತ್ತು ಕುಂದಾಪುರದ ವಿವಿಧ ಸ್ಥಳಗಳಲ್ಲಿ “ಟೊರ್ಪೆಡೋಸ್ ಸ್ಪೋರ್ಟ್ಸ್ ಕಾರ್ನಿವಲ್-2021” ನಡೆಸಲು ತೀರ್ಮಾನಿಸಲಾಗಿತ್ತು. ಈಗಾಗಲೇ ದೇಶದ ವಿವಿಧ ಭಾಗಗಳಿಂದ ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು.  ಕ್ರೀಡಾ ಹಬ್ಬಕ್ಕೆ ಅಗತ್ಯ ಇರುವ ಎಲ್ಲಾ ಸೌಕರ್ಯಗಳನ್ನೂ ಸಜ್ಜುಗೊಳಿಸಲಾಗಿತ್ತು. ಆದರೆ ಕೊರೋನಾ ಮಹಾಮಾರಿ ಮತ್ತೆ ದೇಶಾದ್ಯಂತ ಉಲ್ಬಣಿಸಿದೆ. ಕ್ರೀಡಾಪಟುಗಳ ಆರೋಗ್ಯದ ಬಗ್ಗೆ ಕಾಳಜಿ ಮತ್ತು ಸರಕಾರದ ಕೊರೋನಾ ಮಾರ್ಗಸೂಚಿಗಳನ್ನು ಪಾಲಿಸಬೇಕಾಗಿರುವುದರಿಂದ ಕ್ರೀಡಾಹಬ್ಬವನ್ನು ಮುಂದೂಡಲಾಗಿದೆ. ಆದರೆ ಯಾರೂ ನಿರಾಸೆಗೊಳ್ಳುವ ಅಗತ್ಯವಿಲ್ಲ, ಏಕೆಂದರೆ ಅಕ್ಟೋಬರ್ 9ರಿಂದ 16ರ ವರೆಗೆ ಈ ಹಿಂದೆ ಸೂಚಿಸಿದ ಸ್ಥಳಗಳಲ್ಲೇ ಟಾರ್ಪೆಡೋಸ್ ಸ್ಪೋರ್ಟ್ಸ್ ಕಾರ್ನಿವಲ್-2021 ಎಂದಿನಂತೆ ನಡೆಯಲಿದೆ ಎಂದು ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ (ರಿ.) ಇದರ ಅಧ್ಯಕ್ಷ ಗೌತಮ್ ಶೆಟ್ಟಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದುವರೆಗೂ ಉತ್ತಮ ರೀತಿಯಲ್ಲಿ ಸಹಕರಿಸಿದ ಎಲ್ಲ ಕ್ರೀಡಾಅಭಿಮಾನಿಗಳು, ಕ್ರೀಡಾಪಟುಗಳಿಗೂ ಮತ್ತು ಪ್ರಾಯೋಜಕರಿಗೂ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ (ರಿ).ಆಭಾರಿಯಾಗಿರುತ್ತದೆ. ಮುಂದೆಯೂ ನಿಮ್ಮ ಪ್ರೋತ್ಸಾಹ ಇದೇ ರೀತಿ ಇರಲಿ. ಅಕ್ಟೋಬರ್ ನಲ್ಲಿ ಕ್ರೀಡಾ ಹಬ್ಬಕ್ಕೆ ಸಜ್ಜಾಗೋಣ, ಅಲ್ಲಿಯವರೆಗೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಕೋವಿಡ್ ನಿಯಮ ಪಾಲಿಸಿ ಕ್ರೀಡಾಸ್ಫೂರ್ತಿ ಕಾಯ್ದುಕೊಳ್ಳಿ ಎಂದು ಗೌತಮ್  ಶೆಟ್ಟಿ ತಿಳಿಸಿದ್ದಾರೆ.

ಕೋಟ ರಾಮಕೃಷ್ಣ ಆಚಾರ್ಯ

Written by ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published. Required fields are marked *

6 − 5 =

ಚೇತನ್ ಸಕಾರಿಯಾ ಯುವ ಕ್ರಿಕೆಟಿಗನ ಕುಟುಂಬದ ದುರಂತ ಕತೆ ಬಿಚ್ಚಿಟ್ಟ ಸೆಹ್ವಾಗ್

ಚಕ್ರವರ್ತಿ ಕುಂದಾಪುರ ಮಡಿಲಿಗೆ ದಿ‌.ಪ್ರತಾಪ್ಚಂದ್ರ ಹೆಗ್ಡೆ ಸ್ಮರಣಾರ್ಥ-ಲೆಜೆಂಡ್ಸ್ ಕಪ್-2021