Categories
ಸ್ಪೋರ್ಟ್ಸ್

ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್(ರಿ) ಪ್ರಸ್ತುತ ಪಡಿಸುವ ಟೊರ್ಪೆಡೋಸ್ ಮುಕ್ತ ಅಂತರ್ಜಾಲ ಚೆಸ್ ಪಂದ್ಯಾಟ-2021

ಯುನೈಟೆಡ್ ಕರ್ನಾಟಕ ಚೆಸ್ ಅಸೋಸಿಯೇಷನ್(ರಿ) ಮತ್ತು ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್ (ರಿ)ಉಡುಪಿ ಇದರ ಸಹಯೋಗದೊಂದಿಗೆ
ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ (ರಿ)ಕುಂದಾಪುರ2021 ನೇ ಮುಕ್ತ ಅಂತರ್ಜಾಲ ಚೆಸ್ ಪಂದ್ಯಾಟ ಆಯೋಜಿಸಿದ್ದು ದಿನಾಂಕ 03-10-2021ರಂದು www.tornelo.com ಎಂಬ ಪ್ಲಾಟ್ಫಾರ್ಮ್ ಮುಖೇನ  ಸ್ಪರ್ಧೆ ನಡೆಯಲಿದೆ.
ಕಾರ್ಯಕ್ರಮದ ಕೋಡ್:-UKCA/G010/2021
 ಈ ಸ್ಪರ್ಧೆಗೆ ಪ್ರವೇಶ ಶುಲ್ಕ ಕೇವಲ ರೂ .350/-
ಪ್ರವೇಶ ಶುಲ್ಕವನ್ನು www.chessfee.com ಮೂಲಕ ಪಾವತಿಸಬಹುದಾಗಿದೆ.
ಒಟ್ಟು ಬಹುಮಾನ ನಿಧಿ 50000/- ಆಗಿದ್ದು ಮುಕ್ತ ವಿಭಾಗದಲ್ಲಿ ಒಟ್ಟು 20 ಉನ್ನತ ಬಹುಮಾನಗಳು ,ವಯೋಮಿತಿ ವಿಭಾಗದಲ್ಲಿ 7 ಬಹುಮಾನ ಹಾಗೂ ಅತ್ಯುತ್ತಮ ಮಹಿಳಾ ಆಟಗಾರ್ತಿ ವಿಭಾಗದಲ್ಲಿ 5 ಬಹುಮಾನಗಳು ಸೇರಿ ಒಟ್ಟು 61 ಪ್ರಶಸ್ತಿಗಳಿವೆ.ಅತ್ಯುತ್ತಮ ಅನುಭವಿ ಆಟಗಾರನಿಗೆ ನಗದು ಬಹುಮಾನವಿದೆ.
ಹೆಸರು ನೋಂದಾವಣಿಗೆ ಕೊನೆಯ ದಿನಾಂಕ 01-10-2021.
ಉದ್ಘಾಟನಾ ಸಮಯ :-ಪೂರ್ವಾಹ್ನ ಗಂಟೆ 8:30.
ಆಟಗಾರರ ಸಭೆಯ ಸಮಯ:-ಪೂರ್ವಾಹ್ನ 8:45
ಮೊದಲನೇ ಸುತ್ತು:9:30AM
ಎರಡನೇ ಸುತ್ತು:10:30AM
ಮೂರನೇ ಸುತ್ತು:11:30AM
ನಾಲ್ಕನೇ ಸುತ್ತು:12:30AM
ಐದನೇ ಸುತ್ತು:2:00PM
ಆರನೇ ಸುತ್ತು:3:00PM
ಏಳನೇ ಸುತ್ತು:4:00PM
ಎಂಟನೇ ಸುತ್ತು:5:00PM
ಒಂಭತ್ತನೇ ಸುತ್ತು:6:00PM
ಸ್ಪರ್ಧೆಯ ನಿಯಮಗಳು:-
◆ವಿಂಡೋ ಆಪರೇಟಿಂಗ್ ವ್ಯವಸ್ಥೆ ಹೊಂದಿರುವ ಲ್ಯಾಪ್ಟಾಪ್ ಮತ್ತು ಡೆಸ್ಕ್ ಟಾಪನ್ನು ಅನುಮತಿಸಲಾಗಿದೆ. ಕೆಲಸ ಮಾಡುವ  ಕ್ಯಾಮೆರಾ ಸ್ಪೀಕರ್ ಕಡ್ಡಾಯ.
◆ಈ ಚೆಸ್ ಪಂದ್ಯಾಟದಲ್ಲಿ ಮುಕ್ತ ಹಾಗೂ ವಯೋಮಿತಿ ಆಧಾರದಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
◆ಸ್ವಿಸ್ ವ್ಯವಸ್ಥೆಯನ್ನು ಅನುಸರಿಸಲಾಗುವುದು.
◆ಸಮಯದ ನಿಯಂತ್ರಣ:-10ನಿಮಿಷ+05 ಸೆಕೆಂಡ್
◆ಒಟ್ಟು ಸುತ್ತುಗಳು =9
◆ಸ್ಪರ್ಧೆಯ ಯಾವುದೇ ನಿಯಮವನ್ನು ಉಲ್ಲಂಘಿಸಿದಲ್ಲಿ ಆಟಗಾರನನ್ನು ಚೆಸ್ ಪಂದ್ಯಾಟದಿಂದ ಹೊರಗಿಡಲಾಗುವುದು.
◆ಆಟಗಾರರು ತಮ್ಮ ಬಹುಮಾನಗಳನ್ನು ಪಡೆಯಲು ವಯಸ್ಸಿನ ದಾಖಲೆಯಿರುವ  ಪ್ರಮಾಣಪತ್ರ ಕಡ್ಡಾಯ.
◆ಸಂಘಟಕರು ಹಾಗೂ ತೀರ್ಪುಗಾರರ ತೀರ್ಮಾನವೇ ಅಂತಿಮ ಹಾಗೂ ಸಂಬಂಧಪಟ್ಟ ಎಲ್ಲ ಆಟಗಾರರ ಮೇಲೆ ಬದ್ಧವಾಗಿರುತ್ತದೆ.
◆ ಆಟಗಾರರು ಝೂಮ್ ಗೆ  ಲಾಗಿನ್ ಆಗುವಾಗ  ತಮ್ಮ tornel ಮೇಲ್ ಐ ಡಿ ಮುಖೇನವೇ ಲಾಗಿನ್ ಆಗಬೇಕು.
◆Tornelo ಲಿಂಕ್ ನ್ನು  02-10-21 ರಂದು ರಿಜಿಸ್ಟರ್ ಮಾಡಿದ Tornelo ಮೇಲ್ ಐ ಡಿ ಗೆ ಕಳುಹಿಸಲಾಗುವುದು.ಆಟಗಾರರು 02-10-21ರ ಸಂಜೆ 5 ಗಂಟೆಯ ಒಳಗಾಗಿ ಲಾಗಿನ್ ಆಗಿರಬೇಕು.
◆ಬುಚೋಲ್ಜ್ ಟೈ ಬ್ರೇಕ್ ವ್ಯವಸ್ಥೆಯನ್ನು ಅನ್ವಯಿಸಲಾಗುವುದು.ಟೈ ಆದ ಸಂದರ್ಭದಲ್ಲಿ ಬಹುಮಾನವನ್ನು  ಹಂಚಿ ಕೊಡಲಾಗುವುದಿಲ್ಲ.
ಎಲ್ಲರಿಗೂ ಸ್ವಾಗತ ಬಯಸುವ 
ಗೌತಮ್ ಶೆಟ್ಟಿ
ಅಧ್ಯಕ್ಷರು,ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್
ಅರವಿಂದ್ ಶಾಸ್ತ್ರಿ
ಕಾರ್ಯದರ್ಶಿ,ಯುಕೆಸಿಎ
ಡಾ.ರಾಜಗೋಪಾಲ್ ಶೆಣೈ
ಅಧ್ಯಕ್ಷರು,ಯುಡಿಸಿಎ ಉಡುಪಿ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
9448547958
9845121498
8088625123

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

20 − 2 =