14 C
London
Monday, September 9, 2024
Homeಭರವಸೆಯ ಬೆಳಕುಟೊರ್ಪೆಡೋಸ್ ಗೌತಮ್ ಶೆಟ್ಟಿ ಅಧ್ಯಕ್ಷತೆಯಲ್ಲಿ-ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಯಶಸ್ಸಿನ ಹಾದಿಯಲ್ಲಿ

ಟೊರ್ಪೆಡೋಸ್ ಗೌತಮ್ ಶೆಟ್ಟಿ ಅಧ್ಯಕ್ಷತೆಯಲ್ಲಿ-ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಯಶಸ್ಸಿನ ಹಾದಿಯಲ್ಲಿ

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img
ಉಡುಪಿ ಜಿಲ್ಲೆಯಲ್ಲಿ ನಡೆಯುವ ಟೆನ್ನಿಸ್ಬಾಲ್ ಕ್ರಿಕೆಟ್ ಪಂದ್ಯಾಟಗಳಲ್ಲಿ ಶಿಸ್ತು,ವೃತ್ತಿಪರತೆ,ಆಟಗಾರರಿಗೆ ಅಗತ್ಯವಿರುವ ಸೌಲಭ್ಯ ಹೀಗೆ ಹತ್ತು,ಹಲವಾರು  ಸದುದ್ದೇಶಗಳನ್ನಿಟ್ಟುಕೊಂಡು ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ TCA ಸ್ಥಾಪಿಸಲಾಗಿದೆ.
 
80,90 ರ ದಶಕದ ಹಿರಿಯ ಆಟಗಾರರ ಸಮಾಗಮದಲ್ಲಿ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ನ ಅಧ್ಯಕ್ಷರಾಗಿ ಆಯ್ಕೆಯಾದ ಗೌತಮ್ ಶೆಟ್ಟಿ ನೇತೃತ್ವದಲ್ಲಿ ಮೊದಲ‌ ಪ್ರಯತ್ನದ ರೂಪದಲ್ಲಿ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟ ನಡೆಯುತ್ತಿದೆ.ಗತಕಾಲದಲ್ಲಿ ವೈಭವ ಮೆರೆದ ಹಿರಿಯ ತಂಡಗಳ ಹೆಸರಿನಲ್ಲಿ,ಹಿರಿಯ ಆಟಗಾರರ ಉಪಸ್ಥಿತಿಯಲ್ಲಿ,10 ಓವರ್ ಗಳ ಕ್ರಿಕೆಟ್ ಪಂದ್ಯಾಟ 5 ತಾಲ್ಲೂಕುಗಳಲ್ಲಿ ಅತ್ಯಂತ ಯಶಸ್ವಿಯಾಗಿ ಮುಕ್ತಾಯ ಕಂಡಿದ್ದು ಯುವ ಆಟಗಾರರು ಕೂಡ ಅತ್ಯಂತ ಶಿಸ್ತಿನಿಂದ ಆಸಕ್ತಿಯಿಂದ ಭಾಗವಹಿಸಿ ಅಸೋಸಿಯೇಷನ್ ಯೋಜನೆಗೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ‌.ಗೌತಮ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಶಿಸ್ತುಬದ್ಧವಾದ ಕಾರ್ಯವೈಖರಿಯಿಂದ ಟೆನಿಸ್ಬಾಲ್ ಕ್ರಿಕೆಟ್ ವಲಯದಲ್ಲೇ ಸಂಚಲನ ಮೂಡಿಸಿದ್ದು ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಸ್ಥಾಪನೆಯ ದಿನಗಳು ದೂರವಿಲ್ಲ.
 
*ಗೌತಮ್ ಶೆಟ್ಟಿಯವರ ಸಾಧನೆಯ ಹಾದಿ*
80 ರ ದಶಕದಲ್ಲಿ ಕುಂದಾಪುರ ಪರಿಸರದ  ಸಮಾನ ಮನಸ್ಕ ಹಿರಿಯ ಕ್ರೀಡಾಪಟುಗಳ ಒಗ್ಗೂಡುವಿಕೆಯಿಂದ ಕುಂದಾಪುರದಲ್ಲಿ‌ ಮೊದಲಿಗೆ ಟೆನ್ನಿಸ್ಬಾಲ್ ಕ್ರಿಕೆಟ್ ತಂಡವಾಗಿ ಸ್ಥಾಪನೆಯಾದ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಕುಂದಾಪುರ.ಬ್ಲೂ ಸ್ಟಾರ್  ಶಿರ್ವ ತಂಡ ಆಯೋಜಿಸಿದ್ದ ಮೊತ್ತಮೊದಲ ರಾಜ್ಯಮಟ್ಟದ ಪಂದ್ಯಾವಳಿಯ ಫೈನಲ್ ನಲ್ಲಿ ಆ ದಿನಗಳಲ್ಲಿ ಎದುರಾಳಿಗಳ ಪಾಲಿನ ಸಿಂಹಸ್ವಪ್ನ ಪ್ಯಾರಡೈಸ್ ಬನ್ನಂಜೆ ತಂಡದೆದುರು,ಕೊನೆಯ ಎಸೆತದಲ್ಲಿ 6 ರನ್ ಗಳ‌ ಅಗತ್ಯತೆಯ ಸಂದರ್ಭ,ಹಿರಿಯ ಆಟಗಾರ ನಾರಾಯಣ ಶೆಟ್ಟಿ ಸಿಡಿಸುವ ಅಮೋಘ ಸಿಕ್ಸರ್ ಮೂಲಕ ಟೊರ್ಪೆಡೋಸ್  ಮೊದಲ ರಾಜ್ಯ ಮಟ್ಟದ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತ್ತು.
 
ಹಿರಿಯ ಆಟಗಾರರು ನೇಪಥ್ಯಕ್ಕೆ ಸರಿದ ಬಳಿ ನಾಯಕನ ಜವಾಬ್ದಾರಿಯನ್ನು ಹೊತ್ತ ಗೌತಮ್ ಶೆಟ್ಟಿ ಸಾರಥ್ಯದಲ್ಲಿ ಕರ್ನಾಟಕದ ಹಲವಾರು ಜಿಲ್ಲೆಯಾದ್ಯಂತ ಟೊರ್ಪೆಡೋಸ್ ತಂಡವನ್ನು ಕೊಂಡೊಯ್ದ ಹಲವಾರು ಪ್ರಶಸ್ತಿಗಳನ್ನು ಜಯಿಸಿದ್ದರು.ಕಾಲ ಕ್ರಮೇಣ ಉದ್ಯೋಗ ನಿಮಿತ್ತ ಮಂಗಳೂರಿನಲ್ಲಿ ನೆಲೆನಿಂತ ಗೌತಮ್ ಶೆಟ್ಟಿ,
ಹಳೆಯಂಗಡಿಯಲ್ಲಿ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್(ರಿ)ಸಂಸ್ಥೆಯನ್ನು ಸ್ಥಾಪಿಸಿ,ಹಲವಾರು ಕ್ರೀಡಾಕೂಟಗಳನ್ನು‌ ಸಂಘಟಿಸಿ,ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಾ,ಬಡ ಅಶಕ್ತ ಕುಟುಂಬದ ವಿದ್ಯಾರ್ಥಿಗಳಿಗೆ ನೆರವಿನ ಹಸ್ತವನ್ನು ನೀಡುತ್ತಾ ಬಂದಿರುತ್ತಾರೆ.ಈ ಎಲ್ಲಾ ಸಾಧನೆಗಳಿಗಾಗಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ,ಸಮಾಜರತ್ನ ಗೌರವ,ಬಂಟರತ್ನ ಪ್ರಶಸ್ತಿ ಹೀಗೆ ನೂರಾರು ಗೌರವ ಸನ್ಮಾನಗಳು ಗೌತಮ್ ಶೆಟ್ಟಿಯನ್ನು ಅರಸಿಕೊಂಡು ಬಂದಿರುತ್ತದೆ.ಕ್ರೀಡಾಕ್ಷೇತ್ರದಲ್ಲಿ ಹೊಸತನವನ್ನು ತರುವ ನಿಟ್ಟಿನಲ್ಲಿ ಹಲವಾರು ವಿನೂತನ ಪ್ರಯೋಗಗಳ ಬಗ್ಗೆ ಚಿಂತನೆ ನಡೆಸುವ ಇವರು ಟೊರ್ಪೆಡೋಸ್ ಸ್ಪೋರ್ಟ್ಸ್ ಕಾರ್ನಿವಲ್-2021 ಸಂಘಟಿಸಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಿ ದಾಖಲೆ ನಿರ್ಮಿಸಿದ್ದಾರೆ.
 
ಕ್ರೀಡೆಯ ನಾನಾ ಪ್ರಾಕಾರಗಳಲ್ಲೂ ಸೈ ಎನಿಸಿಕೊಂಡ ಗೌತಮ್ ಶೆಟ್ಟಿಯವರು ಸುರತ್ಕಲ್ ಡೆಲ್ಲಿ ಪಬ್ಲಿಕ್ ಸ್ಕೂಲ್(M.R.P.L)ನ ದೈಹಿಕ ನಿರ್ದೇಶಕರಾಗಿ ಹಲವಾರು ವರ್ಷಗಳ ಸೇವೆ ಸಲ್ಲಿಸಿ,ಕಳೆದ ವರ್ಷದಿಂದ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಟೊರ್ಪೆಡೋಸ್ ಗೌತಮ್ ಶೆಟ್ಟಿಯವರಿಗೆ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ವತಿಯಿಂದ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

seventeen − 13 =