ಕುಂಭಾಶಿ- ಕುಂದಾಪುರ ರೂರಲ್ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಕೋಟೇಶ್ವರ,ಈಗಲ್ಸ್ ಕ್ರಿಕೆಟ್ ಕ್ಲಬ್ ಕುಂಭಾಶಿ ಮತ್ತು ಕುಂಭಾಶಿ ಗ್ರಾಮ ಪಂಚಾಯತ್ ಇವರ ಸಹಯೋಗದಲ್ಲಿ ಅಂಬೇಡ್ಕರ್ ಭವನ ಕುಂಭಾಶಿ ಇಲ್ಲಿ ನಡೆದ ಅಮೃತಪ್ರಾಶನ(ಸ್ವರ್ಣ ಪ್ರಾಶನ)ಕಣ್ಣಿನ ತಪಾಸಣಾ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರು,ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾದ ಗೌತಮ್ ಶೆಟ್ಟಿ ಕುಂದಾಪುರ ಇವರು ಅಂಗನವಾಡಿಯ 45 ಮಕ್ಕಳಿಗೆ ಬೆಲೆಬಾಳುವ BAS ಕಂಪೆನಿಯ ಸ್ಪೋರ್ಟ್ಸ್ ಶೂ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ರೂರಲ್ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಕೋಟೇಶ್ವರ ಇಲ್ಲಿನ ಪ್ರಾಂಶುಪಾಲರಾದ ಡಾ.ಎಸ್.ಜಿ.ಪ್ರಸನ್ನ ಐತಾಳ್ ವಹಿಸಿದರೆ,ಕುಂಭಾಶಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ವೇತಾ ಶ್ರೀನಿಧಿ ಉಪಾಧ್ಯಾಯ ಉದ್ಘಾಟನೆ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಕುಂದಾಪುರ ಬಿ.ಜೆ.ಪಿ ಅಧ್ಯಕ್ಷರಾದ ಶಂಕರ ದೇವಾಡಿಗ ಅಂಕದಕಟ್ಟೆ,ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಶ್ರೀ ಮೂಕಾಂಬಿಕಾ ಮಹಿಳಾ ಮಂಡಳಿ(ರಿ) ಕುಂದಾಪುರ ಅಧ್ಯಕ್ಷೆ ಶ್ರೀಮತಿ ರಾಧಾ ದಾಸ್,ಕುಂಭಾಶಿ ಗ್ರಾಮ ಪಂಚಾಯತ್ ಪಿ.ಡಿ.ಓ ಜಯರಾಮ್ ಶೆಟ್ಟಿ, ಕುಂದಾಪುರ ರೂರಲ್ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಎ.ಓ ಅಭಿನಂದನ್ ಶೆಟ್ಟಿ,ಎಮ್.ಎಸ್ ಡಾ ಸವಿತಾ.ಕೆ.ಭಟ್,ಈಗಲ್ಸ್ ಕ್ರಿಕೆಟ್ ಕ್ಲಬ್ ಕುಂಭಾಶಿಯ ಅಧ್ಯಕ್ಷ ಸುನಿಲ್ ಮತ್ತು ಶಿಬಿರಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.