ಟೆನ್ನಿಸ್ ಕ್ರಿಕೆಟ್ ನಲ್ಲಿ ತೂಫಾನಿ ಮೈಲಿಗಲ್ಲನ್ನು ಸ್ಥಾಪಿಸಿದ ಕುಂದಾಪುರದ ಬಲಿಷ್ಠ ತಂಡ ಟೊರ್ಪೆಡೋಸ್ ತಂಡದಲ್ಲಿ ಕ್ರಿಕೆಟ್ ಜೀವನ ಪ್ರಾರಂಭಿಸಿ,ಕ್ರಿಕೆಟ್ ಜೊತೆಗೆ ಕ್ರೀಡೆಯ ಎಲ್ಲಾ ಪ್ರಾಕಾರಗಳಲ್ಲೂ ಸೈ ಅನ್ನಿಸಿಕೊಂಡು,ಶಾಲಾ ಕಾಲೇಜು ದಿನಗಳಲ್ಲಿ ದಿನಗಳಲ್ಲಿ ತಾನೆದುರಿಸಿದ ಅಗತ್ಯ ಪೂರೈಕೆಗಳ ಕೊರತೆಗಳನ್ನು ಯುವ ಕ್ರೀಡಾಪಟುಗಳು ಅನುಭವಿಸಬಾರದೆಂಬ ಸದುದ್ದೇಶದಿಂದ ಮಂಗಳೂರಿನ ಹಳೆಯಂಗಡಿಯಲ್ಲಿ ಸ್ಥಾಪಿಸಿದ “ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್” ಸಹಸ್ರಾರು ಕ್ರೀಡಾಪಟುಗಳ ಭವಿಷ್ಯ ರೂಪಿಸಿದೆ.ಅಶಕ್ತ, ಬಡ ವಿದ್ಯಾರ್ಥಿಗಳ ಜೀವನ ರೂಪಿಸಿದೆ.
ಈ ಎಲ್ಲಾ ಸಾಧನೆಗಳಿಗಾಗಿ ಸಂಸ್ಥಾಪಕಾಧ್ಯಕ್ಷ ಗೌತಮ್ ಶೆಟ್ಟಿಯವರಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ,ಸಮಾಜ ರತ್ನ ಗೌರವ,ಬಂಟರತ್ನ ಪ್ರಶಸ್ತಿ ಹಾಗೂ 500 ಕ್ಕೂ ಮಿಕ್ಕಿದ ಸಂಘ ಸಂಸ್ಥೆಗಳಿಂದ ಗೌರವ ಸನ್ಮಾನಕ್ಕೆ ಪಾತ್ರರಾಗಿದ್ದಾರೆ.
ಕುಂದಾಪುರದ ಕ್ರೀಡಾ ಲೋಕದ ಕಣ್ಮಣಿ ಗೌತಮ್ ಶೆಟ್ಟಿಯವರ ಈ ಎಲ್ಲಾ ಸಾಧನೆಯನ್ನು ಪರಿಗಣಿಸಿ,
ಹುಟ್ಟೂರು ಕುಂದಾಪುರದ ಪುರಸಭಾ ವ್ಯಾಪ್ತಿಯ ಶ್ರೀ ಮೈಲಾರೇಶ್ವರ ದೇವಸ್ಥಾನ ಬಳಿಯ ಬಯಲು ರಂಗ ಮಂಟಪದಲ್ಲಿ,ಶಿವರಾತ್ರಿ ಹಬ್ಬದ ಸುಸಂದರ್ಭದಲ್ಲಿ,
ಮೈಲಾರೇಶ್ವರ ಯುವಕ ಮಂಡಲದ 43 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಗೌತಮ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.
ವಿಶೇಷವಾಗಿ ಚಿಕ್ಕನ್ ಸಾಲ್ ರಸ್ತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ. ಕೆ.ಸಾವಿತ್ರಿ,ರಾಷ್ಟ್ರೀಯ ಮಟ್ಟದ ಅಭಾಕಸ್ ಸ್ಪರ್ಧೆಯ ಚಾಂಪಿಯನ್ ಕುಮಾರಿ ಸಾನ್ವಿ.ಕೆ.ಪಿ ಹಾಗೂ 5 ನೇ ಸ್ಥಾನಿ ಕುಮಾರ್ ಪ್ರಣವ್ ಕೆ.ಆರ್ ನ್ನು ಗುರುತಿಸಿ ಗೌರವಿಸಲಾಯಿತು.
ಈ ಸಂದರ್ಭ ಕುಂದೇಶ್ವರ ದೇವಸ್ಥಾನದ ಮಾಜಿ ಮೊಕ್ತೇಸರರು ಕೆ.ಆರ್.ಉಮೇಶ್ ರಾವ್,ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕರು ಡಾ|ಭರತ್ ಶೆಟ್ಟಿ.ವೈ, ಉದ್ಯಮಿ ಸಂತೋಷ್ ಬಳ್ಕೂರು,ಸಚೀತ್ ಪೈ,
ಪ್ರಮೋದ್.ಕೆ.ಆರ್,ಶ್ರೀಮತಿ ಸುಮತಿ ಪ್ರಕಾಶ್,ರಾಜೇಶ್ ನಾಯ್ಕ್ ಹಾಗೂ ಕೋ.ಶಿವಾನಂದ ಕಾರಂತ್ ಉಪಸ್ಥಿತರಿದ್ದರು…