ಪ್ರತಿಷ್ಟಿತ ವಿಜಯ್ ಹಜಾರೆ ಟ್ರೋಫಿಗಾಗಿ ಶುಕ್ರವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ಕುತೂಹಲಕಾರಿ ಫೈನಲ್ ನಡೆಯಲಿದೆ.
ನಿನ್ನೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಸೆಮಿಫೈನಲ್ ಪಂದ್ಯಾಟದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಛತ್ತೀಸ್ ಗಡ ತಂಡ 49.4 ಓವರ್ ಗಳಲ್ಲಿ 223 ರನ್ ಗಳಿಗೆ ಆಲೌಟ್ ಆಗಿತ್ತು.ಬಿಗು ದಾಳಿ ಸಂಘಟಿಸಿದ ಕೌಶಿಕ್ 46 ರನ್ ಗಳಿಗೆ 4 ವಿಕೆಟ್ ಉರುಳಿಸಿದರು.
ಚೇಸಿಂಗ್ ವೇಳೆ ಉದಯೋನ್ಮುಖ ಪ್ರತಿಭೆ ದೇವದತ್ತ್ ಪಡಿಕಲ್ ರವರ 92 ,ಕೆ.ಎಲ್.ರಾಹುಲ್ ಅಜೇಯ 88 ಹಾಗೂ ಮಾಯಾಂಕ್ ಅಜೇಯ 47 ರನ್ ಗಳ ನೆರವಿನಿಂದ ಕೇವಲ 40 ಓವರ್ ಗಳಲ್ಲಿ ಗುರಿ ತಲುಪಿ ಫೈನಲ್ ಪ್ರವೇಶಿದ್ದರು.
ಯಲಹಂಕದ ಜಸ್ಟ್ ಕ್ರಿಕೆಟ್ ಅಂಗಣದಲ್ಲಿ ನಡೆದ ದ್ವಿತೀಯ ಸೆಮಿಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಗುಜರಾತ್ ತಂಡ 40 ಓವರ್ ಗಳಲ್ಲಿ 177 ರನ್ ಗಳಿಸಿತ್ತು. ಗುರಿಯನ್ನು ಬೆನ್ನತ್ತಿದ ತಮಿಳುನಾಡು ತಂಡ ದಿನೇಶ್ ಕಾರ್ತಿಕ್ 47 ರನ್ ನೆರವಿನಿಂದ 39 ಓವರ್ ಗಳಲ್ಲಿ ಗುರಿಯನ್ನು ತಲುಪಿ ಫೈನಲ್ ಪ್ರವೇಶಿಸಿತ್ತು.
ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ಕರ್ನಾಟಕ ತಂಡ ಪ್ರಶಸ್ತಿ ಗೆಲ್ಲುವ ಹಾಟ್ ಫೇವರಿಟ್ ತಂಡವೆನಿಸಿಕೊಂಡಿದೆ.ಅದೃಷ್ಟ ಯಾರ ಪಾಲಿಗೋ ಕಾದು ನೋಡೋಣ.
ಆರ್.ಕೆ.ಆಚಾರ್ಯ ಕೋಟ