Categories
ಕ್ರಿಕೆಟ್

ಇಂದು ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಮೊದಲ ಟಿ20

ಭಾರತ ಹಾಗೂ ವೆಸ್ಟ್‌ಇಂಡೀಸ್ ನಡವಿನ ಮೊದಲ ಟ್ವೆಂಟಿ-20 ಪಂದ್ಯವು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ನಡೆಯಲಿದೆ.
ಭಾರತದ ವಿರುದ್ಧ ತವರಲ್ಲೇ 3-0 ವೈಟ್‌ವಾಶ್‌ ಅನು ಭವಿಸಿದ ವೆಸ್ಟ್‌ ಇಂಡೀಸ್ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ.

ಕೀರನ್‌ ಪೊಲಾರ್ಡ್‌ ನೇತೃತ್ವದ ವೆಸ್ಟ್‌ ಇಂಡೀಸ್‌ ತಂಡ ಇದಕ್ಕೂ ಮೊದಲು ಅಫಘಾನಿಸ್ತಾನ ವಿರುದ್ಧದ ಸರಣಿಯಲ್ಲೂ1-2 ಅಂತರದಿಂದ ಸೋತಿದೆ. ವಿಂಡೀಸ್‌ ನ ಕೆಲವು ಬ್ಯಾಟ್ಸ್‌ಮನ್‌ಗಳು ಸಂಪೂರ್ಣವಾಗಿ ವೈಫಲ್ಯ ಅನುಭವಿಸಿದ್ದರು.

ಮರಳಿದ ಭುವಿ: ಭುವನೇಶ್ವರ್ ಕುಮಾರ್ ಹಾಗೂ ಮೊಹಮ್ಮದ್ ಶಮಿ ತಂಡಕ್ಕೆ ಮರಳಿರುವುದು ಬೌಲಿಂಗ್ ವಿಭಾಗಕ್ಕೆ ಚೈತನ್ಯ ತಂದಿದೆ. ದೀಪಕ್ ಚಹರ್ ಹಾಗೂ ಶಿವಂ ದುಬೆ ಕೂಡಾ ಉತ್ತಮ ಲಯದಲ್ಲಿದ್ದರೆ. ಯುಜುವೇಂದ್ರ ಚಹಲ್, ರವೀಂದ್ರ ಜಡೇಜಾ ಹಾಗೂ ಕುಲ್‌ದೀಪ್ ಯಾದವ್ ಸ್ಪಿನ್ ವಿಭಾಗದ ಬಲಿಷ್ಠ ಅಸ್ತ್ರವಾಗಿದ್ದರೆ.
ಕೊಹ್ಲಿ ಕಮ್ ಬ್ಯಾಕ್ ,ರಾಹುಲ್ ಪಂತ್ ಗೆ ಫಾರ್ಮ್ ಚಿಂತೆ:

ಬಾಂಗ್ಲಾದೇಶ ವಿರುದ್ಧ ವಿಶ್ರಾಂತಿಯಲ್ಲಿದ್ದ ವಿರಾಟ್‌ ಕೊಹ್ಲಿ ಮರಳಿ ತಂಡಕ್ಕೆ ಆಗಮಿಸಿದ್ದು ನಾಯಕನಾಗಿ ಮುಂದುವರಿಯಲಿದ್ದಾರೆ. ಹಾಗೆ ಕನ್ನಡಿಗ ಕೆಎಲ್ ರಾಹುಲ್ ಮತ್ತು ವಿಕೆಟ್ ಕೀಪರ್-ಬ್ಯಾಟ್ಸ್​ಮನ್ ರಿಷಭ್ ಪಂತ್​ಗೆ ತಂಡದಲ್ಲಿ ಸ್ಥಾನ ಕಾಯಂ ಪಡಿಸಿಕೊಳ್ಳಲು ಈ ಸರಣಿ ಮಹತ್ವದ್ದಾಗಿದೆ. ಎಡಗೈ ಆರಂಭಿಕ ಶಿಖರ್ ಧವನ್ ಗಾಯದಿಂದಾಗಿ ಸರಣಿಯಿಂದ ಹೊರಬಿದ್ದಿರುವ ಕಾರಣ, ರೋಹಿತ್ ಶರ್ಮ ಜತೆಗೆ ರಾಹುಲ್ ಇನಿಂಗ್ಸ್ ಆರಂಭಿಸಲಿದ್ದಾರೆ.

ಹಾಗೆ ವಿಂಡೀಸ್ ಪರ
ಹಿಟ್ಟರ್‌ ನಿಕೋಲಸ್‌ ಪೂರನ್ ನಿಷೇಧದಲ್ಲಿರುವ ಕಾರಣ ಮೊದಲ ಪಂದ್ಯಕ್ಕೆ ಲಭಿಸುತ್ತಿಲ್ಲ. ಆದರೆ ಶೈ ಹೋಪ್‌, ಹೆಟ್‌ಮೈರ್‌, ಚೇಸ್‌ ಉತ್ತಮ ಫಾರ್ಮನಲ್ಲಿದ್ದಾರೆ.

ತಂಡಗಳು ಇಂತಿದೆ:
ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಕೆಎಲ್ ರಾಹುಲ್, ಸಂಜು ಸ್ಯಾಮ್ಸನ್, ರಿಷಬ್ ಪಂತ್, ಮನೀಶ್ ಪಾಂಡೆ, ಶ್ರೇಯಸ್ ಅಯ್ಯರ್, ಶಿವಂ ದುಬೆ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಹಲ್, ಕುಲ್‌ದೀಪ್ ಯಾದವ್, ದೀಪಕ್ ಚಹರ್, ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ಶಮಿ

ವೆಸ್ಟ್ ಇಂಡೀಸ್: ಕೀರಾನ್ ಪೊಲಾರ್ಡ್, ಫ್ಯಾಬಿಯಾನ್ ಅಲೆನ್, ಶೆಲ್ಡನ್ ಕಾಟ್ರೆಲ್, ಶಿಮ್ರಾನ್ ಹೆಟ್ಮಾಯರ್, ಜೇಸನ್ ಹೋಲ್ಡರ್, ಬ್ರೆಂಡನ್ ಕಿಂಗ್, ಎವಿನ್ ಲೂಯಿಸ್, ಕೀಮೊ ಪಾಲ್, ನಿಕೋಲಸ್ ಪೂರನ್, ಖ್ಯಾರಿ ಪಿಯೆರ್, ದಿನೇಶ್ ರಾಮ್‌ದಿನ್, ಶೆರ್ಫಾನ್ ರುಥರ್‌ಫೋರ್ಡ್, ಲೆಂಡ್ಲ್‌ ಸಿಮನ್ಸ್, ಹೇಡನ್ ವಾಲ್ಶ್, ಜೂ. ಕೆಸ್ರಿಕ್ ವಿಲಿಯಮ್ಸ್

ಹವಾಮಾನ: ಬಿಸಿಲು ಇದ್ದು ಮಳೆಬರುವ ಸಾಧ್ಯತೆ ಇಲ್ಲ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್.
ಪಿಚ್ ರಿಪೋರ್ಟ್: ಹೈದರಾಬಾದ್ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ಸಹಕಾರಿಯಾಗಲಿದೆ.
ಪಂದ್ಯ ಆರಂಭ: ಸಂಜೆ 7ಕ್ಕೆ

ಮುಖಾಮುಖಿ:
ಒಟ್ಟು ಪಂದ್ಯಗಳು: 14
ಭಾರತ ಗೆಲುವು: 08
ವಿಂಡೀಸ್ ಗೆಲುವು: 05
ಫಲಿತಾಂಶ ರಹಿತ: 01

– ಪ್ರೀತಮ್ ಹೆಬ್ಬಾರ್.

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

19 + 3 =