ಶಿವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಬೆಳ್ಳಿ ಹಬ್ಬದ ಪ್ರಯುಕ್ತ “ಮಕ್ಕಳ ಹಬ್ಬ ಹಾಗೂ ಸ್ವರಾಂಜಲಿ” ಸಾಲಿಗ್ರಾಮದಲ್ಲಿ ಇಂದು.
ಕ್ರೀಡೆಯ ಜೊತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿ,ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಕಳೆದ ಎರಡೂವರೆ ದಶಕಗಳ ಹಿಂದೆ ಮೂರು ದಶಕಗಳಿಂದ ರಾಜ್ಯ ಟೆನ್ನಿಸ್ ಕ್ರಿಕೆಟ್ ನ ಅನುಭವಿ ವೀಕ್ಷಕ ವಿವರಣೆಕಾರ ಹಾಗೂ ಅಂಪಾಯರ್ ಕೋಟ ಶಿವನಾರಾಯಣ ಐತಾಳ್ ರವರು ಸ್ಥಾಪಿಸಿದ್ದ ಶಿವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘವನ್ನು ಸ್ಥಾಪಿಸಿದ್ದರು.
ಜಿಲ್ಲಾ ಮಟ್ಟದ ಡಬಲ್ ವಿಕೆಟ್ ಪಂದ್ಯಾವಳಿ ಮೊತ್ತ ಮೊದಲ ಬಾರಿಗೆ ಸಂಘಟಿಸಿದ್ದು,
ಟೊರ್ಪೆಡೋಸ್ ಕ್ಲಬ್ ನ ಅಧ್ಯಕ್ಷ ಗೌತಮ್ ಶೆಟ್ಟಿ ಹಾಗೂ ಟೆನ್ನಿಸ್ ಬಾಲ್ ನ ತೆಂಡುಲ್ಕರ್ ಹರಿಪ್ರಸನ್ನ(ಪುಟ್ಟ)ಪ್ರಥಮ ಸ್ಥಾನಗಳಿಸಿದ್ದು,ಇಲೆವೆನ್ ಅಪ್ ಕೋಟ ತಂಡದ ಪದ್ಮನಾಭ ಆಚಾರ್ ಹಾಗೂ ಮಿಥುನ್ ಹಂದೆ ದ್ವಿತೀಯ ಬಹುಮಾನ ಗಳಿಸಿರುವುದು
ನೆನಪಿನ ಪುಟಗಳಲ್ಲಿ ಅಚ್ಚಳಿಯದೆ ಉಳಿದಿದೆ.ಅಂತೆಯೇ ಒಂದು ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿ,2 ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟ ಹಾಗೂ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿದ ಸಂಸ್ಥೆ ಇಂದು ಬೆಳ್ಳಿ ಹಬ್ಬವನ್ನು ಆಚರಿಸುತ್ತಿದೆ.
ಈ ಪ್ರಯುಕ್ತ ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದ ಬಯಲು ರಂಗ ಮಂದಿರದಲ್ಲಿ ಇಂದು ಸಂಜೆ 6.30 ಕ್ಕೆ ಮಕ್ಕಳ ಹಬ್ಬ ಹಾಗೂ ಸ್ವರಾಂಜಲಿ-2 ಕಾರ್ಯಕ್ರಮ ನಡೆಯಲಿದೆ.
ಸರಿಗಮಪ ಖ್ಯಾತಿಯ ಡಾ|ಅಭಿಷೇಕ್ ರಾವ್,ಉದಯ ಸಿಂಗರ್ ಖ್ಯಾತಿಯ ವೈಷ್ಣವಿ ರವಿ,ಮಜಾ ಭಾರತ ಖ್ಯಾತಿಯ
ಜ್ಯೂನಿಯರ್ ಗುರುಕಿರಣ್,ಬಾಲನಟಿ
ಪ್ರಣತಿ ಸಾಲಿಗ್ರಾಮ ಬೆಂಗಳೂರು,
ರಾಷ್ಟ್ರೀಯ ಯೋಗಪಟು
ತನ್ವಿತಾ.ವಿ.ಕುಂದಾಪುರ,
ಶಿವನಾರಾಯಣ ಐತಾಳ್ ರ ಸುಪುತ್ರ ಶ್ರೀರಾಮ್ ಇವರಿಂದ ಮನೋರಂಜನಾ ಕಾರ್ಯಕ್ರಮ ನಡೆಯಲಿದ್ದು ಅವಿನಾಶ್ ಕಾಮತ್ ನಿರೂಪಣೆ ನಡೆಸಲಿದ್ದಾರೆ.
ಉದ್ಘಾಟನಾ ಕಾರ್ಯಕ್ರಮಕ್ಕೆ ಸಮಾಜ ಸೇವಕರು ಶ್ರೀ ಗುರ್ಮೆ ಸುರೇಶ್ ಶೆಟ್ಟಿ ಕಾಪು,ಶ್ರೀ ಅನಂತ ಪದ್ಮನಾಭ ಐತಾಳ್ ಆಡಳಿತ ಧರ್ಮದರ್ಶಿಗಳು ಶ್ರೀ ಗುರುನರಸಿಂಹ ದೇವಸ್ಥಾನ ಹಾಗೂ
ಮುಖ್ಯ ಅತಿಥಿಗಳಾಗಿ ಶ್ರೀ ಯಶ್ ಪಾಲ್ ಸುವರ್ಣ ಸಹಕಾರಿ ಧುರೀಣರು ಉಡುಪಿ ಹಾಗೂ ಗೀತಾನಂದ ಫೌಂಡೇಶನ್ ಮಣೂರಿನ ಪ್ರವರ್ತಕರಾದ ಶ್ರೀ ಆನಂದ್.ಸಿ.ಕುಂದರ್ ಭಾಗವಹಿಸಲಿದ್ದಾರೆ.
ಆರ್.ಕೆ.ಆಚಾರ್ಯ ಕೋಟ.