ಬಾಕ್ಸಿಂಗ್ ಡೇ ಈ ಟೆಸ್ಟ್ ಸರಣಿಯನ್ನು ಡಿ. 26ರಂದೇ ಆಯೋಜಿಸಲು ಕಾರಣ?
ಡಿಸೆಂಬರ್ 26 ರಂದು ನಡೆಯುವ ಟೆಸ್ಟ್ ಪಂದ್ಯಗಳನ್ನು ಬಾಕ್ಸಿಂಗ್ ಡೇ ಟೆಸ್ಟ್ ಎಂದು ಏಕೆ ಕರೆಯುತ್ತಾರೆ ಎಂಬ ಪ್ರಶ್ನೆಯು ಕ್ರಿಕೆಟ್ ಪ್ರೇಮಿಗಳಲ್ಲಿ ಹೆಚ್ಚು ಕೂತುಹಲವನ್ನು ಮೂಡಿಸಿದೆ ಎನ್ನಲಾಗಿತ್ತಿದೆ ಇದನ್ನು ಸಾಮಾನ್ಯವಾಗಿ ಯುನೈಟೆಡ್ ಕಿಂಗ್‌ಡಮ್ ಮತ್ತು ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಭಾರತದಂತಹ ಅನೇಕ ಕಾಮನ್‌ವೆಲ್ತ್ ದೇಶಗಳಲ್ಲಿ ಆಡಲಾಗುತ್ತದೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ವಾರ್ಷಿಕ ಕಾರ್ಯಕ್ರಮವಾಗಿದ್ದು, ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.
*ಬಾಕ್ಸಿಂಗ್ ಡೇ ಟೆಸ್ಟ್ ಎಂದು ಏಕೆ ಕರೆಯಲಾಗುವುದು?*
ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ಮುಂತಾದ ದೇಶಗಳಲ್ಲಿ ಡಿಸೆಂಬರ್ 26 ರಿಂದ ‘ಬಾಕ್ಸಿಂಗ್ ಡೇ ಟೆಸ್ಟ್’ ಆಯೋಜಿಸಲಾಗುತ್ತದೆ. ಇನ್ನು ಮೆಲ್ಬೋರ್ನ್‌ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್‌ನ ಮೊದಲ ದಿನದ ಆಟ ಡಿಸೆಂಬರ್ 26 ರಂದೆ ನಡೆಯುತ್ತದೆ. ಆಸ್ಟ್ರೇಲಿಯಾ ಇದೇ ದಿನದಂದು ಇಂಗ್ಲೆಂಡ್ ವಿರುದ್ಧ ಆಡಿದ್ರೆ, ಭಾರತ ಹಾಗೂ ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಿವೆ
*ಬಾಕ್ಸಿಂಗ್ ಡೇ ಎಂದು ಹೆಸರು ಬರಲು ಕಾರಣ?*
ಬಾಕ್ಸಿಂಗ್ ಡೇ ಎನ್ನುವುದು ಸ್ಪೋರ್ಟ್ ಬಾಕ್ಸಿಂಗ್ ಅಥವಾ ಬಾಕ್ಸಿಂಗ್‌ನ ಇನ್ಯಾವುದೇ ರೀತಿಯಲ ಕ್ರೀಡೆಗೆ ಸಂಬಂಧಿಸಿದಲ್ಲ ಎಂಬುದು ಗಮನಾರ್ಹವಾಗಿದೆ. ವಾಸ್ತವವಾಗಿ, ಇದರ ಹಿಂದೆ ಹತ್ತು ಹಲವು ಕಾರಣಗಳಿವೆ, ಅದಕ್ಕಾಗಿಯೇ ಇದನ್ನು ಬಾಕ್ಸಿಂಗ್ ಡೇ ಟೆಸ್ಟ್ ಸರಣಿ ಎಂದು ಕರೆಯಲಾಗುತ್ತದೆ. ಈ ಹೆಸರಿನ ಹಿಂದೆ ಐತಿಹಾಸಿಕ ಮತ್ತು ಸಾಂಪ್ರದಾಯಿಕ ಕಾರಣಗಳಿವೆ.
ಅದರ ಒಂದು ವಿವರಣೆಯ ಪ್ರಕಾರ, ಕ್ರಿಸ್‌ಮಸ್ ಹಬ್ಬದ ಸಮಯದಲ್ಲಿ ಸ್ವೀಕರಿಸಿದ ಉಡುಗೊರೆಗಳಿಂದಾಗಿ ಬಾಕ್ಸಿಂಗ್ ದಿನಕ್ಕೆ ಅದರ ಹೆಸರು ಪ್ರಚಲಿತಕ್ಕೆ ಬಂದಿದೆ. ಬ್ರಿಟನ್‌ನಲ್ಲಿ, ಕ್ರಿಸ್ಮಸ್ ಬಾಕ್ಸ್ ಅನ್ನು ಕ್ರಿಸ್ಮಸ್ ಉಡುಗೊರೆ ಎಂದು ಕರೆಯಲಾಗುತ್ತದೆ. ವಾಸ್ತವವಾಗಿ, ಬಾಕ್ಸಿಂಗ್ ಡೇ ಯುಕೆಯಲ್ಲಿ ಉದ್ಯೋಗದಾತರಿಂದ ಉಡುಗೊರೆಗಳನ್ನು ಪಡೆದ ಸೇವಕರಿಗೆ ಅಧಿಕೃತ ರಜಾದಿನವಾಗಿದೆ ಮತ್ತು ಡಿಸೆಂಬರ್ 25ರ ಕ್ರಿಸ್ಮಸ್ ದಿನದಂದು ಬಂದ ಉಡುಗೊರೆಗಳನ್ನು ಡಿಸೆಂಬರ್ 26 ರಂದು ಬಿಚ್ಚಲು ಕುಟುಂಬಗಳು ಮುಂದಾಗುತ್ತವೆ.
*ಬಾಕ್ಸಿಂಗ್ ಡೇ ದಿನದ ಪ್ರಾಮುಖ್ಯತೆ*
ಮತ್ತೊಂದೆಡೆ, ಎರಡನೇ ಅರ್ಥದ ಪ್ರಕಾರ, ಬಾಕ್ಸಿಂಗ್ ಡೇ ಎಂದರೆ ಬಡವರಿಗೆ ಹಣ ತುಂಬಿದ ಪೆಟ್ಟಿಗೆ ಅಥವಾ ಉಡುಗೊರೆಯನ್ನು ನೀಡುವ ದಿನ ಎಂದು ಮತ್ತು ಅವರು ಕ್ರಿಸ್‌ಮಸ್‌ನ ಮರುದಿನ ಅದನ್ನು ತೆರೆಯುತ್ತಾರೆ. ಅಮೆರಿಕನ್ನರ ಪ್ರಕಾರ, ಕ್ರಿಸ್ಮಸ್ ನಂತರದ ದಿನವನ್ನು ಗಿಫ್ಟ್ ಓಪನಿಂಗ್ ಡೇ ಎಂದು ಕರೆಯಲಾಗುವುದು, ಈ ಕಾರಣದಿಂದಾಗಿ ಉಡುಗೊರೆಯೊಂದಿಗೆ ಬಂದ ಬಾಕ್ಸ್ ಗಳನ್ನು ತೆರೆದು ನೊಡಲಾಗುತ್ತದೆ ಪೆಟ್ಟಿಗೆಗಳನ್ನು ಅನ್ಬಾಕ್ಸ್ ಮಾಡಲಾಗುತ್ತದೆ.
ಈ ಕಾರಣದಿಂದಲೇ ಈ ದಿನವನ್ನು ಬಾಕ್ಸಿಂಗ್ ಡೇ ಎಂದು ಕರೆಯಲಾಗುತ್ತದೆ ಇದನ್ನು ಕೇಲವು ದೇಶಗಳಲ್ಲಿ ಟೆಸ್ಟ್ ಕ್ರಿಕೆಟ್ ಸರಣಿಗಳಿಗೂ ಹೆಸರಿಟ್ಟು ಡಿಸೆಂಬರ್ 26 ರಂದೆ ಟೆಸ್ಟ್ ನ ದಿನಾಂಕವನ್ನು ನಿಗದಿ ಪಡಿಸಿ ಸರಣಿ ಗೆಲುವಿಗಾಗಿ ಕ್ರಿಕೆಟ್ ಅಂಕಣಕ್ಕೆ ಇಳಿದು ಹೊರಾಡುತ್ತವೆ