ಕ್ರೀಡಾಲೋಕದಲ್ಲಿ (ಮಾಧ್ಯಮ) ಕನ್ನಡ ಭಾಷೆ ಬಳಕೆ ಹಾಗೂ ಕರ್ನಾಟಕ ರಾಜ್ಯ ಟೆನ್ನಿಸ್ಬಾಲ್ ಕ್ರಿಕೆಟ್ ಗೆ ಮೊತ್ತಮೊದಲ ಮಾಧ್ಯಮವನ್ನು ಸೃಷ್ಟಿಸಿ,ಗತಕಾಲದ ಹಿರಿಯ ಕ್ರಿಕೆಟಿಗರಿಗೆ ಮರುವೇದಿಕೆ ಸೃಷ್ಟಿಸಿ ಟೆನ್ನಿಸ್ಬಾಲ್ ಕ್ರಿಕೆಟ್ ಶ್ರೇಯೋಭಿವೃಧ್ಧಿಯಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತಿರುವ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ನ ಪ್ರವರ್ತಕರಾದ ಕೋಟ ರಾಮಕೃಷ್ಣ ಆಚಾರ್(ಕೆ.ಆರ್.ಕೆ.ಆಚಾರ್ಯ) “ಕನ್ನಡ ಸೇವಾರತ್ನ” ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ದಿನಾಂಕ 12 ಮತ್ತು13 ರಂದು ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್ ವಿಧಾನಸಭಾ ಕ್ಷೇತ್ರ ಬೆಂಗಳೂರಿನ
ಆನೇಕಲ್ ತಾಲ್ಲೂಕು ದೊಮ್ಮಸಂದ್ರ ಸಮೀಪದ ಧರ್ಮಸಾಗರ ವಿದ್ಯಾಸಂಸ್ಥೆ ಆವರಣದಲ್ಲಿ ನಡೆಯಲಿರುವ ಆನೇಕಲ್ ತಾಲ್ಲೂಕು ೩ ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ನೂರಾರು ಸಾಧಕರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದ್ದು,ಸಮ್ಮೇಳನಾಧ್ಯಕ್ಷರು,ಹಿ ರಿಯ ಸಾಹಿತಿಗಳು ಪತ್ರಕರ್ತರಾದ ಶ್ರೀ.ತಾ.ನಂ.ಕುಮಾರಸ್ವಾಮಿ,
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ನಾಡೋಜ ಡಾ.ಮನು ಬಳಿಗಾರ್,ಬೆಂಗಳೂರು ನಗರ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಾಯಣ್ಣ,ಆನೇಕಲ್ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಸ್ವಾಗತ ಸಮಿತಿ ಅಧ್ಯಕ್ಷರಾದ ಶ್ರೀ.ಬಿ.ಶಿವಣ್ಣ ಹಾಗೂ ಆನೇಕಲ್ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರಾ.ನವೀನ್ ಕುಮಾರ್ ಬಾಬು ಇನ್ನೂ ಅನೇಕ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ.