ಕುಂದಾಪುರ-ಇಲ್ಲಿನ ತೆಕ್ಕಟ್ಟೆ ಕನ್ನುಕೆರೆ ಪರಿಸರದ ಹಿರಿಯ ತಂಡ ಫಾಲ್ಕನ್ ತೆಕ್ಕಟ್ಟೆ.
ಸುಮಾರು ಮೂರು ದಶಕಗಳ ಇತಿಹಾಸವಿರುವ ಈ ಸಂಸ್ಥೆ ಕರ್ನಾಟಕ ಮಾತ್ರವಲ್ಲದೇ ಕೊಲ್ಲಿ ರಾಷ್ಟ್ರಗಳಲ್ಲಿ ಕೂಡ ಊರಿನ ಆಟಗಾರರ ಫಾಲ್ಕನ್ ತಂಡ ಹೊಂದಿದ್ದು ಅನೇಕ ಕ್ರಿಕೆಟ್ ಪಂದ್ಯಾಟಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ ಹಾಗೂ ಕ್ರಿಕೆಟ್,ವಾಲಿಬಾಲ್ ಹೀಗೆ ಅನೇಕ ಕ್ರೀಡಾಕೂಟಗಳನ್ನು ಆಯೋಜಿಸಿದ ಸಂಸ್ಥೆ ಕೂಡ ಹೌದು.ಕ್ರೀಡೆ ಮಾತ್ರವಲ್ಲದೇ ಸದ್ದಿಲ್ಲದೇ ಸಮಾಜಸೇವೆಯಲ್ಲಿ ತೊಡಗಿಸಿಕೊಂಡ ಫಾಲ್ಕನ್ ತಂಡ ಬಡವರ ವೈದ್ಯಕೀಯ ನೆರವಿಗಾಗಿ ಆ್ಯಾಂಬುಲೆನ್ಸ್ ವ್ಯವಸ್ಥೆಯನ್ನು ಮಾಡಿದ್ದು,ಕೊರೋನಾ ಸಂದರ್ಭ ಕೋವಿಡ್ ಸಂತ್ರಸ್ತರ ಮನೆ ಮನೆಗೆ ಕಿಟ್ ತಲುಪಿಸುವ ಮೂಲಕ ಮಾನವೀಯತೆ ಮೆರೆದಿದೆ.ಬಡ ಕುಟುಂಬದ ವಿದ್ಯಾಭ್ಯಾಸಕ್ಕೂ ಕೂಡ ಈ ಸಂಸ್ಥೆ ಸಹಾಯಹಸ್ತ ನೀಡಿದೆ.
ಫಾಲ್ಕನ್ ಕ್ರಿಕೆಟ್ ಕ್ಲಬ್ ಇದೀಗ ತನ್ನ ಸೇವಾ ಪರಿಧಿಯನ್ನು ವಿಸ್ತರಿಸುವ ಸದುದ್ದೇಶದಿಂದ ಫೆಬ್ರವರಿ 3,4 ಮತ್ತು 5 ರಂದು ಕುಂದಾಪುರದ ಗಾಂಧಿಮೈದಾನದಲ್ಲಿ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾಟ “ಫಾಲ್ಕನ್ ಟ್ರೋಫಿ-2023”
ಆಯೋಜಿಸಿದ್ದಾರೆ.
ಪಂದ್ಯಾಟದ ಪ್ರಥಮ ಪ್ರಶಸ್ತಿ ವಿಜೇತ ತಂಡ 3,03,333 ರೂ ನಗದು,ದ್ವಿತೀಯ ಸ್ಥಾನಿ 2,02,222 ರೂ ನಗದು ಸಹಿತ ಆಕರ್ಷಕ ಪಾರಿತೋಷಕಗಳನ್ನು ಪಡೆಯಲಿದ್ದಾರೆ.ವೈಯಕ್ತಿಕ ಶ್ರೇಷ್ಠ ನಿರ್ವಹಣೆ ನೀಡಿದ ಆಟಗಾರರಿಗೆ ವಿಶೇಷ ಉಡುಗೊರೆ ಹಾಗೂ ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾಗುವ ಆಟಗಾರ 55,055 ರೂ ನಗದು ಬಹುಮಾನ ಪಡೆಯಲಿದ್ದಾರೆ.
25,000 ಪ್ರವೇಶ ಶುಲ್ಕವಾಗಿರುತ್ತದೆ.
M9 ಸ್ಪೋರ್ಟ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಪಂದ್ಯಾಟದ ನೇರ ಪ್ರಸಾರ ಬಿತ್ತರಗೊಳ್ಳಲಿದ್ದು,ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಕಾರ್ಯನಿರ್ವಹಿಸಲಿದೆ.
ಹೆಚ್ಚಿನ ಮಾಹಿತಿಗಾಗಿ 8296541141,9845774734, 9902681673,7019658900 ಈ ನಂಬರ್ ಗಳನ್ನು ಸಂಪರ್ಕಿಸಬಹುದು.