16.6 C
London
Friday, April 12, 2024
Homeಕ್ರಿಕೆಟ್ದಿ ಕಮ್ಯೂನಿಟಿ ಸೆಂಟರ್ ಸಮೂಹ ಸಂಸ್ಥೆ ಗಳ ವಜ್ರಮಹೋತ್ಸವ ಆಚರಣೆಯ ಪ್ರಯುಕ್ತ ಅಂತರ್ ಶಾಲಾ-ಕಾಲೇಜು ಪಂದ್ಯಾವಳಿ

ದಿ ಕಮ್ಯೂನಿಟಿ ಸೆಂಟರ್ ಸಮೂಹ ಸಂಸ್ಥೆ ಗಳ ವಜ್ರಮಹೋತ್ಸವ ಆಚರಣೆಯ ಪ್ರಯುಕ್ತ ಅಂತರ್ ಶಾಲಾ-ಕಾಲೇಜು ಪಂದ್ಯಾವಳಿ

Date:

Related stories

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...

RCB ಯನ್ನು ಸುಟ್ಟು ಹಾಕಿದ ಮಯಾಂಕ್ ಯಾದವ್ ಅವರ ವೇಗ

RCB ವಿರುದ್ಧ 3/14 ರ ಅದ್ಭುತ ಬೌಲಿಂಗ್ ಅಂಕಿಅಂಶಗಳಿಗಾಗಿ  ಮಯಾಂಕ್ ಯಾದವ್...

ಕ್ರೀಡೆಯಿಂದ ಸೌಹಾರ್ದಯುತ ಸಮಾಜ ನಿರ್ಮಾಣ-ಜನಾಬ್ ಅಬ್ದುಲ್ ಮದನಿ

ಕಾರ್ಕಳ-ಇಲ್ಲಿನ ಗಾಂಧಿ ಮೈದಾನದಲ್ಲಿ ಏಪ್ರಿಲ್ 29 ಶುಕ್ರವಾರದಂದು ಆರ್.ಸಿ.ಸಿ ಗುತ್ತಿಗೆದಾರರ ಸಂಘ(ರಿ)ಕಾರ್ಕಳ...
spot_imgspot_img

ದಿ ಕಮ್ಯೂನಿಟಿ ಸೆಂಟರ್ ಸಮೂಹ ಸಂಸ್ಥೆ ಗಳ ವಜ್ರಮಹೋತ್ಸವ ಆಚರಣೆಯ ಪ್ರಯುಕ್ತ ಅಂತರ್ ಶಾಲಾ-ಕಾಲೇಜು ಪಂದ್ಯಾವಳಿಯಲ್ಲಿ, ಶಾಲಾ ವಿಭಾಗದ ಪಂದ್ಯಾಟ ಕಳೆದ ವಾರ 17 ರಂದು ನಡೆದಿದ್ದು, ಡಿಸೆಂಬರ್ 25, 26 ರಂದು ಕಾಲೇಜು ವಿಭಾಗದ ಕ್ರಿಕೆಟ್ ಪಂದ್ಯಾಟ ನಡೆಯಲಿದೆ. ಪಂದ್ಯಾವಳಿಯ ವಿಜೇತರನ್ನು ಅದ್ಧೂರಿಯ ವಜ್ರಮಹೋತ್ಸವ ಆಚರಣೆಯ ವೇದಿಕೆಯಲ್ಲಿ ನೀಡಲಾಗುತ್ತಿದೆ.

ವಜ್ರಮಹೋತ್ಸವ ಆಚರಣೆಯ ವಿವರ : ಕಮ್ಯುನಿಟಿ ಸೆಂಟರ್ ಸಮೂಹ ಸಂಸ್ಥೆಯು ನಾಡಿನ ಶ್ರೇಷ್ಠ ಶಿಕ್ಷಣ ಸಂಸ್ಥೆಗಳಲ್ಲೊಂದಾಗಿ ಅನೇಕ ಕಾರಣಗಳಿಂದ ವಿದ್ಯಾವಂಚಿತರಾಗಿ ಅನಕ್ಷರಸ್ತರಂತೆ ಬದುಕು ಸವೆಸುವ ಕೆಳ, ಮಧ್ಯಮ ವರ್ಗದ ಜನರನ್ನು ಗಮನದಲ್ಲಿರಿಸಿಕೊಂಡು ಶಿಕ್ಷಣ ನೀಡುವುದರಲ್ಲಿ ಮೇಲ್ಪಂಕ್ತಿಯಲ್ಲಿದೆ. ತನ್ನ ಮೂಲ ಆಶಯವನ್ನು ನೆರವೇರಿಸುತ್ತಾ 60 ವಸಂತಗಳನ್ನು ಪೂರೈಸಿ ವಜ್ರಮಹೋತ್ಸವದ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದೆ. ತತ್ಸಂಬಂಧವಾಗಿ ದಿನಾಂಕ 27-12-2019, ಶುಕ್ರವಾರ ಮತ್ತು 28-12-2019ರ ಶನಿವಾರ. ಈ ಎರಡು ದಿನಗಳು ನಾಡಿನ ವಿವಿಧ ಕ್ಷೇತ್ರಗಳಲ್ಲಿ ಮಾನ್ಯತೆಗಳಿಸಿರುವ ಗಣ್ಯಮಾನ್ಯರನ್ನು ಆಹ್ವಾನಿಸಿ ಅವರ ಸಮ್ಮುಖದಲ್ಲಿ, ನಮ್ಮ ಸಂಸ್ಥೆಯಲ್ಲಿ ದುಡಿದು ನಿವೃತ್ತರಾದವರನ್ನು ಗೌರವಿಸುವ ಮತ್ತು ವಜ್ರಶ್ರೀ ಸ್ಮರಣ ಸಂಚಿಕೆಯನ್ನು ಲೋಕಾರ್ಪಣಗೊಳಿಸುವ ಕಾರ್ಯಕ್ರಮವನ್ನು ವಜ್ರಮಹೋತ್ಸವದ ಶುಭ ಸಂದರ್ಭದಲ್ಲಿ ಆಯೋಜಿಸಲಾಗಿದೆ.

ಶ್ರೀ ಶ್ರೀ ಸುಬುದೇಂದ್ರ ತೀರ್ಥ ಶ್ರೀಪಾದಂಗಳ ದಿವ್ಯ ಸಾನಿಧ್ಯದಲ್ಲಿ ನಡೆಯುವ ಸಮಾರಂಭವನ್ನು ಉದ್ಘಾಟಿಸಲು ಭಾರತ ಸರ್ಕಾರದ ಸರ್ವೊಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಗೌರವಾನ್ವಿತ   ಎಂ.ಎನ್ ವೆಂಕಟಾಚಲಯ್ಯ ಅವರು ಹಾಗು ಸ್ಮರಣ ಸಂಚಿಕೆಯನ್ನು ಲೋಕಾರ್ಪಣ ಮಾಡಲು ಕರ್ನಾಟಕ ಸರ್ಕಾರದ ಮಾಜಿ ಮುಖ್ಯಮಂತ್ರಿ   ಎಂ ವೀರಪ್ಪ ಮೊಯ್ಲಿ ಅವರು ಆಗಮಿಸುತ್ತಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ನಾಡಿನ ಗಣ್ಯರು, ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಹಿರಿಮೆಯನ್ನು ಗಳಿಸಿರುವ ರಾಜಕೀಯ ಮುಖಂಡರು, ಸಮಾಜ ಸೇವಕರು, ಶಿಕ್ಷಣ ತಜ್ಞರು, ಕಲಾವಿದರು, ಆಧ್ಯಾತ್ಮಿಕ ಚಿಂತಕರು, ಕ್ರೀಡಾಪಟುಗಳು ಹಾಗೂ ಇನ್ನಿತರ ಕ್ಷೇತ್ರಗಳ ಗಣ್ಯಮಾನ್ಯರು ಆಗಮಿಸಲಿದ್ದಾರೆ.

ದಿ ಕಮ್ಯೂನಿಟಿ ಸೆಂಟರ್ ಸಮೂಹ ಸಂಸ್ಥೆಗಳ ಯಶೋಗಾಥೆ. : ಸ್ವಾತಂತ್ರೋತ್ತರ ಭಾರತದ ಆಶಯಗಳಲ್ಲೊಂದಾದ ಶಿಕ್ಷಣದ ಅಗತ್ಯಗಳನ್ನು ಅರ್ಥೈಸಿಕೊಂಡು,1986 ರಲ್ಲಿ ಕಮ್ಯುನಿಟಿ ಸೆಂಟರ್ ಸಂಸ್ಥೆಯ ಬೀಜಾಂಕುರವಾಯಿತು. ಕಮ್ಯುನಿಟಿ ಸೆಂಟರ್ ನರ್ಸರಿ ಆಂಗ್ಲ ಶಾಲೆ, ಕಮ್ಯುನಿಟಿ ಸೆಂಟರ್ ಹಿರಿಯ ಆಂಗ್ಲ ಪ್ರಾಥಮಿಕ ಶಾಲೆ, ಕಮ್ಯುನಿಟಿ ಸೆಂಟರ್ ಪ್ರೌಢ ಶಾಲೆಗಳು ಸರ್ಕಾರಿ ಅನುದಾನವನ್ನು ಪಡೆದು ಜಯನಗರದ ಒಂದನೇ ಬಡಾವಣೆಯಲ್ಲಿ ಸರ್ವರಿಗೂ ಸಮಾನ ಶಿಕ್ಷಣ ಎನ್ನುವ ತತ್ವದೊಡನೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುತ್ತಾ, ಅವರ ಭವಿಷ್ಯ ಉಜ್ವಲವಾಗಲೆಂದು ಸರ್ವತೋಮುಖ ಬೆಳವಣಿಗೆಗಾಗಿ ಶ್ರಮಿಸುತ್ತಾ ಬಂದಿದೆ. ಕಡಿಮೆ ಶಿಕ್ಷಣ ಶುಲ್ಕವನ್ನು ಸ್ವೀಕರಿಸುವುದರ ಮೂಲಕ ಅತ್ಯುತ್ತಮ ಶಿಕ್ಷಣವನ್ನು ನೀಡುತ್ತಾ ಕಳೆದ ಆರು ದಶಕಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ನಗರದಾದ್ಯಂತ ಜನಪ್ರಿಯತೆಯನ್ನು ಪಡೆದು ಕೊಂಡಿದೆ.

ಸಮಾಜ ಸೇವೆ ಮತ್ತು ಪರಸ್ಪರ ಸಹಕಾರ ಎಂಬ ಉತ್ಸಾಹದೊಡನೆ 1956ರಲ್ಲಿ ಮೈಸೂರು ಸ್ಟೇಟ್ ಸೊಸೈಟೀಸ್ ರಿಜಿಸ್ಟ್ರೇಷನ್ ಆಕ್ಟ್ ಅಡಿಯಲ್ಲಿ ನೋಂದಣಿಯಾಗಿರುವ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿ ವಿಶ್ರಾಂತ ಐಸಿಎಸ್ ಆಧಿಕಾರಿ, ಮೈಸೂರು ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ರಾಜಕಾರ್ಯಪ್ರಸಕ್ತ ಶ್ರೀ ಬಿ.ಎಸ್.ರಾಘವೇಂದ್ರರಾವ್ ಅವರು ಮತ್ತು ಶಿಕ್ಷಣ ತಜ್ಞ  ಕೆ.ವಿ ಅಶ್ವಥನಾರಾಯಣ ಅವರು ಸಂಸ್ಥಾಪಕ ಕಾರ್ಯದರ್ಶಿಗಳಾಗಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಗುಡಿಬಂಡೆ ಎಸ್.ರಾಮರಾವ್, ಹೆಚ್.ಕೆ ಕುಮಾರಸ್ವಾಮಿ ಮತ್ತು ಶ್ರೀ ಕೆ.ವಿ.ವಸಂತ್ ಹಾಗೂ ಪ್ರಸಿದ್ಧ ವಕೀಲರಾದ ಶ್ರೀ ಎನ್.ಟಿ.ರಾಜುರವರು ಮತ್ತು ಅನೇಕರ ಸಹಕಾರದೊಡನೆ ಸಂಸ್ಥೆ ಆರಂಭವಾಯಿತು.

ಸಂಸ್ಥೆಯ ಪ್ರಥಮ ಅಧಕ್ಷ  ಬಿ.ಎಸ್.ರಾಘವೇಂದ್ರರಾವ್ ಅವರು ದೈವಾಧೀನರಾದ ಮೇಲೆ ಶ್ರೀ.ಎನ್.ಟಿ.ರಾಜು ಅವರನ್ನು ಅಧ್ಯಕ್ಷ 1985 ರಲ್ಲಿ ನೇಮಿಸಲಾಯಿತು. ನಂತರ 1986 ರಲ್ಲಿ ಗುಡಿಬಂಡೆ  ಎಸ್.ರಾಮಾರಾವ್‌ರವರು ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದರು, 1993ರಿಂದ  ಕೆ.ಎಂ.ನಾಗರಾಜ್ ಅವರು ಅಧ್ಯಕ್ಷ ಸಂಸ್ಥೆಯನ್ನು ಮುನ್ನೆಡೆಸುತ್ತಿದ್ದಾರೆ. ಅಂತೆಯೇ ಸಂಸ್ಥಾಪಕ ಕಾರ್ಯದರ್ಶಿ ಕೆ.ವಿ.ಅಶ್ವಥನಾರಾಯಣ ನಂತರ1987ರಲ್ಲಿ ಶ್ರೀ.ಕೆ.ವಿ.ವಸಂತ್ ಅವರನ್ನು ಕಾರ್ಯದರ್ಶಿಗಳಾಗಿ ನೇಮಿಸಲಾಯಿತು. ಅನಂತರ 1987ರಿಂದ ಹೆಚ್.ಕೆ ಕುಮಾರಸ್ವಾಮಿ ಅವರು ಕಾರ್ಯದರ್ಶಿಗಳಾಗಿ ಕರ್ತವ್ಯ ನಿರ್ವಹಿಸಿದರು. ನಂತರ 2002 ರಿಂದ  ಚಿಕ್ಕಯ್ಯ ಅವರು ಕಾರ್ಯದರ್ಶಿಗಳಾಗಿ ಮುನ್ನೆಡೆಸಿಕೊಂಡು ಬರುತ್ತಿದ್ದಾರೆ. ಈ ಸಂಸ್ಥೆಯ ಏಳಿಗೆಗಾಗಿ ಅಹರ್ನಿಶಿ ದುಡಿಯುತ್ತಿರುವ  ಕೆ.ಎಂ.ನಾಗರಾಜ್ ಮತ್ಮು ಚಿಕ್ಕಯ್ಯ ಅವರ ಸೇವೆ ಶ್ಲಾಘನೀಯ. ಕಮ್ಯುನಿಟಿ ಸೆಂಟರ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ವಿಶೇಷವಾದ ಸಾಧನೆಗಳನ್ನು ಮಾಡಿ ತಮ್ಮ ಹೆಜ್ಜೆ ಗುರುತನ್ನು ಮೂಡಿಸಿರುವ ಇವರು 2007ರಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತೆ, ಇತಿಹಾಸ ಪುಟಗಳಲ್ಲಿ ದಾಖಲಾಗುವಂತೆ ಭವ್ಯವಾದ, ವಿನೂತನವಾದ, ಸುಂದರವಾದ, ಆಕರ್ಷಣೆಯುಳ್ಳ, ಸಂಸ್ಥೆಯ ಕಟ್ಟಡವೊಂದು ನಿರ್ಮಾಣ ಮಾಡಿ ಪದವಿ ಪೂರ್ವ, ಪದವಿ ಹಾಗೂ ಸ್ನಾತಕೋತ್ತರ ತರಗತಿಯವರೆಗೆ ಶಿಕ್ಷಣ ನೀಡುವುದರ ಮೂಲಕ ನಾಡಿನಾದ್ಯಂತ ಸಾವಿರಾರು ವಿದ್ಯಾರ್ಥಿಗಳ ಜ್ಞಾನ ದಾಹವನ್ನು ನೀಗಿಸುತ್ತಿದ್ದಾರೆ.

ಸ್ವಾತಂತ್ರ್ಯ ನಂತರದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರವು ಜಯನಗರ ಬಡಾವಣೆಯನ್ನು ನಿರ್ಮಿಸಿತು. ಆಗ ಆ ಪ್ರದೇಶದ ಪ್ರಧಾನ ಹಳ್ಳಿಗಳೆನಿಸಿದ್ದ ಕನಕನಪಾಳ್ಯ, ಬೈರಸಂದ್ರ ಯಡಿಯೂರು, ನಾಗಸಂದ್ರ, ಸಿದ್ದಾಪುರ ಮುಂತಾದ ಪ್ರದೇಶಗಳಲ್ಲಿ ವ್ಯವಸಾಯವನ್ನು ಮಾಡಿಕೊಂಡು ಬದುಕು ಸಾಗಿಸುತ್ತಿದ್ದ ಜನರ ಮೇಲೆ ಅತ್ಯಂತ ವ್ಯತಿರಿಕ್ತ ಪರಿಣಾಮ ಉಂಟಾಯಿತು. ಬಡಾವಣೆ ನಿರ್ಮಾಣಕ್ಕಾಗಿ ನಗರಾಭಿವೃದ್ಧಿ ಪ್ರಾಧಿಕಾರವು ರೈತರ ವ್ಯವಸಾಯದ ಭೂಮಿಯನ್ನು ವಶಪಡಿಸಿಕೊಂಡು, ಅನಿವಾರ್‍ಯವಾಗಿ ರೈತರು ಪಾರಂಪರಿಕ ಕೃಷಿಯನ್ನು ಬಿಟ್ಟು ವ್ಯಾಪಾರವೇ ಮುಂತಾದ ಚಟುವಟಿಕೆಗಳಲ್ಲಿ ತೊಡಗಿದರು. ತಮಗರಿವಿಲ್ಲದ ಚಟುವಟಿಕೆಗಳಲ್ಲಿ ಸಫಲರಾಗದೆ ಕೈಯಲ್ಲಿದ್ದಷ್ಟು ಹಣವನ್ನು ಖರ್ಚು ಮಾಡಿಕೊಂಡು ಬಡತನಕ್ಕೆ ಸಿಲುಕಿ ಕಂಗಾಲಾದರು. ಆರ್ಥಿಕ ಸಂಕಷ್ಟಗಳಿಂದ ತಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡಲಾಗದೆ ಅನಕ್ಷರಸ್ಥರಾಗಿಯೇ ಹಿಂದುಳಿದು ಜೀವನ ಸಾಗಿಸುವಂತಾಯಿತು. ಅಷ್ಟೇ ಅಲ್ಲದೆ ಈ ಪ್ರದೇಶದಲ್ಲಿ ವಾಸಿಸುವ ಜನರನ್ನು ಅನಾಗರೀಕರು, ಅಸಂಸ್ಕೃತರು, ಕೊಳಚೆ ನಿವಾಸಿಗಳು ಎಂದು ಗುರುತಿಸಿ ಜನಮನದಲ್ಲಿ ಈ ಭಾವನೆಗಳು ಶಾಶ್ವತವಾಗಿ ಉಳಿಯುವಂತೆ ಬಿಂಬಿಸಲಾಯಿತು. ಇಂತಹ ಅಮಾನವೀಯ ಪರಿಸ್ಥಿತಿಯಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ನೊಂದ ಜನತೆಗೆ ಆಶಾದಾಯಕವಾಗಿ ಕಮ್ಯುನಿಟಿ ಸೆಂಟರ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಕೆ.ಎಂ. ನಾಗರಾಜ್ ಮತ್ತು ಕಾರ್ಯದರ್ಶಿ ಚಿಕ್ಕಯ್ಯ ಅವರು ಸಂಸ್ಥೆಯ ಚುಕ್ಕಾಣಿ ಹಿಡಿದ ಮೇಲೆ ತಾವೂ ಸಹ ಆ ನೆಲದಲ್ಲಿಯೇ ಹುಟ್ಟಿ ಬೆಳೆದದ್ದರ ಅನುಭವದ ಹಿನ್ನೆಲೆಯಲ್ಲಿ ಆ ಜನಗಳ ಅಂತರಾಳವನ್ನು ಅರ್ಥಮಾಡಿಕೊಂಡು ಇಂತಹ ಜನಾಂಗವನ್ನು ಅಭಿವೃದ್ದಿ ಪಡಿಸುವ ದೃಷ್ಟಿಯಿಂದ ವಿಶೇಷವಾದ ಯೋಜನೆಗಳನ್ನು ರೂಪಿಸಿದರು. ಇಂತಹ ಪರಿಸರದಿಂದ ಬಂದ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡಿ ಶಾಲಾ ಶುಲ್ಕದಲ್ಲಿ ರಿಯಾಯಿತಿ ನೀಡುವುದಷ್ಟೇ ಅಲ್ಲದೆ ಅರ್ಹರಿಗೆ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ. ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ, ಗುರುತರವಾದ ಸೇವೆ ಸಲ್ಲಿಸಿ ನಗರದಾದ್ಯಂತ ಜನಪ್ರಿಯತೆಯನ್ನು ಪಡೆದು ಜನಮನದಲ್ಲಿ ಉಳಿದಿದೆ.

ಈ ನಿಟ್ಟಿನಲ್ಲಿ ಕಮ್ಯುನಿಟಿ ಸೆಂಟರ್ ಸಮೂಹ ಶಿಕ್ಷಣ ಸಂಸ್ಥೆಗಳು ಸ್ಥಳೀಯ ನಿವಾಸಿಗರಿಗೆ, ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಆದ್ಯತೆ ನೀಡಿ ಆ ವಿದ್ಯಾರ್ಥಿಗಳು ಕನಿಷ್ಟ ಉತ್ತೀರ್ಣಾಂಕಗಳನ್ನು ಪಡೆದಿದ್ದರು ಸಹ, ಅವರಿಗೆ ಪ್ರವೇಶ ನೀಡಿ ವಿದ್ಯಾಭ್ಯಾಸ ಮುಂದುವರೆಸಲು ಅವಕಾಶವನ್ನು ಕಲ್ಪಿಸಿ ಅವರ ಅಂತರಂಗದಲ್ಲಿ ಸುಪ್ತವಾಗಿ ಅಡಗಿದ್ದ ಪ್ರತಿಭೆಯನ್ನು ಹೊರತರುವಲ್ಲಿ ಯಶಸ್ವಿಯಾಗಿದೆ.

ಇವರು ನೀಡುವ ಗುಣಮಟ್ಟದ ಶಿಕ್ಷಣದ ಫಲವಾಗಿ ಬೆಂಗಳೂರು ವಿಶ್ವವಿದ್ಯಾಲಯ ನಡೆಸುತ್ತಿರುವ ಪದವಿ ಪರೀಕ್ಷೆಗಳಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಅತ್ಯುನ್ನತ ಅಂಕಗಳನ್ನು ಪಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಸಂಸ್ಥೆಯು ನಡೆಸುತ್ತಿರುವ ನಿರ್ವಹಣಾ ಶಾಸ್ತ್ರದ ಸ್ನಾತಕೋತ್ತರ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಶೇಕಡಾ 100 ರಷ್ಟು ಫಲಿತಾಂಶ ಪಡೆದ ಸಂದರ್ಭದಲ್ಲಿ, ಬೆಂಗಳೂರು ವಿಶ್ವವಿದ್ಯಾಲಯ ಇತ್ತೀಚಿಗೆ ಆಯೋಜಿಸಿದ ಅಂತರಾಷ್ಟ್ರೀಯ ಸಮಾವೇಶದಲ್ಲಿ ನಮ್ಮ ಸಂಸ್ಥೆಗೆ ಬೆಸ್ಟ್ ಎಜುಕೇಷನಲ್ ಎಕ್ಸಲೆನ್ಸ್ ಎಂಬ ಗೌರವವನ್ನು ನೀಡಿ, ಆಡಳಿತ ಮಂಡಳಿಯ ಅಧ್ಯಕ್ಷ  ಕೆ.ಎಂ.ನಾಗರಾಜ್ ಮತ್ತು ಕಾರ್ಯದರ್ಶಿ ಶ್ರೀ ಚಿಕ್ಕಯ್ಯ ಅವರನ್ನು ಬೆಂಗಳೂರು ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳು ಸನ್ಮಾನಿಸಿ ಗೌರವಿಸಿದ್ದಾರೆ.

ಆರ್.ಕೆ.ಆಚಾರ್ಯ ಕೋಟ

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

14 − ten =