ಸೃಷ್ಟಿ ಲೋಕೇಶ್ ಇವರ ಸಾರಥ್ಯದಲ್ಲಿ ಐತಿಹಾಸಿಕ K.T.P.L ಪಂದ್ಯಾವಳಿಗೆ ಕ್ಷಣಗಣನೆ ಪ್ರಾರಂಭವಾಗಿದೆ.12 ಫ್ರಾಂಚೈಸಿಗಳು ತಮ್ಮ ನಂಬಿಕೆಯಂತೆ ಮಠ ಮಾನ್ಯ, ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರೆ,ಪುನೀತ್ ರಾಜ್ ಕುಮಾರ್ ಅಪ್ಪಟ ಅಭಿಮಾನಿಯಾದ ಅರುಣ್ ಕುಮಾರ್.ಹೆಚ್.ಎಸ್ ಮಾಲೀಕತ್ವದ ಪವರ್ ಸ್ಟಾರ್ ಪುನೀತ್ ಬ್ಲಾಸ್ಟರ್ಸ್ ಮಂಡ್ಯ ತನ್ನ ತಂಡದ ಎಲ್ಲಾ ಆಟಗಾರರ ಸಹಿತ ಅಪ್ಪು ಸಮಾಧಿ ಬಳಿ ತೆರಳಿ ಪ್ರಾರ್ಥನೆ ಸಲ್ಲಿಸಿ, ತಮ್ಮ ತಂಡದ ಸಮವಸ್ತ್ರ ಅನಾವರಣಗೊಳಿಸಿ ಅಭಿಮಾನದ ಸಾರ್ಥಕತೆ ಮೆರೆದರು.
ಇಂದು ಸಂಜೆ 6 ಗಂಟೆಗೆ ವರ್ಣರಂಜಿತ ಉದ್ಘಾಟನೆ ಸಮಾರಂಭದೊಂದಿಗೆ ಪಂದ್ಯ ಉದ್ಘಾಟನೆಗೊಳ್ಳಲಿದ್ದು,
ಪವರ್ ಸ್ಟಾರ್ ಪುನೀತ್ ಬ್ಲಾಸ್ಟರ್ಸ್ ತಂಡ ಇಂದು ರಾತ್ರಿ 10 ಗಂಟೆಗೆ ತನ್ನ ಮೊದಲನೇ ಪಂದ್ಯದಲ್ಲಿ ರಾಕರ್ಸ್ ರಾಗಿಗುಡ್ಡ ಶಿವಮೊಗ್ಗ ತಂಡವನ್ನು ಎದುರಿಸಲಿದೆ.