India vs New Zealand Updates : 2019ರ ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ಟೀಂ ಇಂಡಿಯಾವನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದ ಕಿವೀಸ್ ವಿರುದ್ದ ಸೇಡು ತೀರಿಸಿಕೊಳ್ಳಲು ಭಾರತ ತಂಡ ಕಾಯುತ್ತಿತ್ತು.ವಿಶ್ವಕಪ್ 2023ರ 21ನೇ ಪಂದ್ಯ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಿತು.
ಧರ್ಮಶಾಲಾ ಕ್ರೀಡಾಂಗಣ ಭಾರತ-ಕಿವೀಸ್ ಮುಖಾಮುಖಿಯ ರೋಚಕ ಪಂದ್ಯಕ್ಕೆ ಸಾಕ್ಷಿಯಾಯಿತು. 2019ರ ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ಟೀಂ ಇಂಡಿಯಾವನ್ನು ಸೋಲಿಸಿ ಕಿವೀಸ್ ಫೈನಲ್ ಪ್ರವೇಶಿಸಿತ್ತು. ಹೀಗಾಗಿ 20 ವರ್ಷಗಳ ಬಳಿಕ ಕಿವೀಸ್ ಪಡೆಯನ್ನ ಸೋಲಿಸಲೇಬೇಕೆಂದು ರೋಹಿತ್ ಅಂಡ್ ಟೀಂ ಪಣತೊಟ್ಟಿತ್ತು. ಈಗ ಆ ಸೋಲಿನ ಸೇಡು ತೀರಿಸಿಕೊಂಡು ಭಾರತ ತಂಡ ಬೀಗುತ್ತಿದೆ.
ಅಂಕಪಟ್ಟಿಯಲ್ಲಿ ನಂಬರ್ ವನ್
ಸ್ಥಾನ ಉಳಿಸಿಕೊಳ್ಳಲು ನ್ಯೂಜಿಲೆಂಡ್ ಪಣ ತೊಟ್ಟಿದ್ರೆ, ಭಾರತ ಕಿವೀಸ್ ಸೋಲಿಸಿ ಪಾರಮ್ಯ ಮೆರೆಯಲು ಸನ್ನದ್ದವಾಗಿತ್ತು. ಎರಡು ತಂಡಗಳ ನಡುವೆ ಹಾವು ಏಣಿ ಆಟ ಶುರುವಾಗಿ, ಗೆದ್ದು ನಂಬರ್ 1 ಸ್ಥಾನದಲ್ಲಿ ಮುಂದುವರೆದಿದೆ ರೋಹಿತ್ ಪಡೆ.
ರೋಹಿತ್ ಬಳಗ ರೋರಿಂಗ್ ಆರಂಭ ನೀಡಿತ್ತು.
ವಿರಾಟ್ ಕೊಹ್ಲಿ ಅದ್ಭುತ ಇನ್ನಿಂಗ್ಸ್ ಆಡುವ ಮೂಲಕ ಭಾರತದ ಗೆಲುವಿನಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ದಾಂಡಿಗರ ಸಾಂಘಿಕ ಪ್ರದರ್ಶನದಿಂದಾಗಿ
ಭಾರತದ ಅಜೇಯ ಓಟ ಮುಂದುವರೆದಿದೆ!
ಹೀಗೆ ಮುಂದುವರೆಯಲಿ….
ಸುರೇಶ್ ಭಟ್, ಮುಲ್ಕಿ
ಟೀಮ್ ಸ್ಪೋರ್ಟ್ಸ್ ಕನ್ನಡ