12.9 C
London
Saturday, November 30, 2024
Homeಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್"ಯುವಕರಿಗೆ ಟಿ‌.ಸಿ.ಎ ಮೂಲಕ ಪ್ರತಿಭಾ ಪ್ರದರ್ಶನಕ್ಕೆ ಅತ್ಯುತ್ತಮ ವೇದಿಕೆ ಸೃಷ್ಟಿಯಾಗಿದೆ"-ಗೌತಮ್ ಶೆಟ್ಟಿ

“ಯುವಕರಿಗೆ ಟಿ‌.ಸಿ.ಎ ಮೂಲಕ ಪ್ರತಿಭಾ ಪ್ರದರ್ಶನಕ್ಕೆ ಅತ್ಯುತ್ತಮ ವೇದಿಕೆ ಸೃಷ್ಟಿಯಾಗಿದೆ”-ಗೌತಮ್ ಶೆಟ್ಟಿ

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img
*ಸ್ಪೋರ್ಟ್ಸ್ ಕನ್ನಡ ವರದಿ-ಕೆ.ಆರ್.ಕೆ ಆಚಾರ್ಯ*
ಕುಂದಾಪುರ-ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ ಕುಂದಾಪುರದ ಗಾಂಧಿ ಮೈದಾನದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪಂದ್ಯಾಟದ ಸಮಾರೋಪ ಸಮಾರಂಭ
ದಲ್ಲಿ ಮಾತನಾಡಿದ ಟಿ.ಸಿ.ಎ ಅಧ್ಯಕ್ಷ ಗೌತಮ್ ಶೆಟ್ಟಿ “ಜಿಲ್ಲಾಮಟ್ಟದ ಪಂದ್ಯಾಟಕ್ಕೆ ಆಟಗಾರರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು,ಅತ್ಯುತ್ತಮ ಫಲಿತಾಂಶ ಹೊರಬಿದ್ದಿದೆ.
2,3 ಓವರ್ ಗಳ ಕ್ರಿಕೆಟ್ ಪಂದ್ಯದಿಂದ ಆಟಗಾರರ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಸಿಗುತ್ತಿಲ್ಲ.ಇದೀಗ ಟಿ.ಸಿ.ಎ ಮೂಲಕ ಯುವಕರಿಗೆ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಸಿಕ್ಕಿದೆ.ಮುಂದಿನ ದಿನಗಳಲ್ಲಿ ಟಿ.ಸಿ.ಎ ಮಕ್ಕಳಿಗಾಗಿ ಅಂಡರ್ 16 ಕ್ರಿಕೆಟ್ ಪಂದ್ಯಾಟ  ಮತ್ತು ಜಿಲ್ಲಾ
ಮಟ್ಟದ ವಿಜೇತ ತಂಡಗಳ ನಡುವೆ ರಾಜ್ಯಗಳ ಮಟ್ಟದ ಪಂದ್ಯಾಟ ನಡೆಸಲಾಗುವುದು” ಎಂದರು.
ಕ್ರಿಕೆಟ್ ಪಂದ್ಯಾಟದ ಫೈನಲ್ ನಲ್ಲಿ ಚೇತನಾ ಉಡುಪಿ,ಕಲಾಕಿರಣ ಕೊರಂಗ್ರಪಾಡಿ ತಂಡವನ್ನು ಸೋಲಿಸಿ ಉಡುಪಿ ಜಿಲ್ಲಾಮಟ್ಟದ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ತಾಲೂಕು ಮಟ್ಟದಲ್ಲಿ ಜಯಗಳಿಸಿದ ಎರಡು ತಂಡಗಳ ಸಹಿತ ಒಟ್ಟು 14 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದು ಸುಮಾರು 200 ಕ್ಕೂ ಹೆಚ್ಚಿನ ಆಟಗಾರರು ಭಾಗವಹಿಸಿದರು.ಲೀಗ್ ಹಂತದ ರೋಚಕ ಹೋರಾಟದ ಬಳಿಕ ಸೆಮಿಫೈನಲ್ ನಲ್ಲಿ ಚೇತನಾ ಉಡುಪಿ ಟೊರ್ಪೆಡೋಸ್ ಕುಂದಾಪುರ ತಂಡವನ್ನು ಹಾಗೂ ಕಲಾಕಿರಣ ಕೊರಂಗ್ರಪಾಡಿ ತಂಡ ಇಲೆವೆನ್ಸ್ ಬೆಳ್ಮಣ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶ ಪಡೆದರು.
ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕಲಾಕಿರಣ ತಂಡ ನಿಗದಿತ 10 ಓವರ್ ಗಳಲ್ಲಿ 66 ರನ್ ಕಲೆಹಾಕಿತ್ತು.ಇದಕ್ಕುತ್ತರವಾಗಿ ಚೇತನಾ ಉಡುಪಿ ತಂಡದ ಸ್ಯಾಂಡಿ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಕೇವಲ 6 ಓವರ್ ಗಳಲ್ಲಿ ಗುರಿಯನ್ನು ತಲುಪಿತ್ತು.
ಫೈನಲ್ ನ ಪಂದ್ಯಶ್ರೇಷ್ಟ ಮತ್ತು ಸರಣಿ ಶ್ರೇಷ್ಠ ಗೌರವಕ್ಕೆ ಸ್ಯಾಂಡಿ ಪಾತ್ರರಾದರೆ,ಬೆಸ್ಟ್ ಬ್ಯಾಟ್ಸ್‌ಮನ್‌ ಕಲಾಕಿರಣದ ಗ್ಲ್ಯಾಡ್ಸನ್ ಮತ್ತು ದಾವೂದ್ ಶಿರ್ವ ತಂಡದ ಕಾರ್ತಿಕ್ ಬೆಸ್ಟ್ ಬೌಲರ್ ಪ್ರಶಸ್ತಿಗೆ ಪಾತ್ರರಾದರು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಕುಂದಾಪುರ ಪುರಸಭೆ ಕೌನ್ಸಿಲರ್ ಪ್ರಭಾಕರ್ ,
ಬಾಳಿಗ ಫಿಶ್ ನೆಟ್ ನ ಪ್ರವರ್ತಕರಾದ ಪ್ರಶಾಂತ್ ಬಾಳಿಗ,ಕ್ರೀಡಾಪಟು ಮಂಜುನಾಥ ವಿಠಲವಾಡಿ,
ಕೆ.ಪಿ‌.ಸಿ‌.ಸಿ ಸಂಯೋಜಕಿ ಶ್ರೀಮತಿ ಪ್ರತಿಭಾ ಕುಳಾಯಿ,ಟಿ‌.ಸಿ.ಎ ಗೌರವಾಧ್ಯಕ್ಷರಾದ ಶ್ರೀಧರ್ ಶೆಟ್ಟಿ ಪ್ಯಾರಡೈಸ್ ಬನ್ನಂಜೆ,ಯಾದವ್ ನಾಯ್ಕ್,ರಮೇಶ್ ಶೇರಿಗಾರ್,ನಾರಾಯಣ ಶೆಟ್ಟಿ ಮಾರ್ಕೋಡು,ಶರತ್ ಶೆಟ್ಟಿ ಪಡುಬಿದ್ರಿ,ರಮೇಶ್ ಶೇರಿಗಾರ್,ಪ್ರವೀಣ್ ಕುಮಾರ್ ಬೈಲೂರು,ವಸಂತರಾವ್ ದಾನಾ ಜ್ಯುವೆಲ್ಲರ್ಸ್,ಡಾ.ಜಗದೀಶ್ ಶೆಟ್ಟಿ ಮಾರ್ಕೋಡು,
ಅಬು ಮೊಹಮ್ಮದ್,ಪ್ರವೀಣ್ ಪಿತ್ರೋಡಿ,ಕೋಟ ರಾಮಕೃಷ್ಣ ಆಚಾರ್, ಭಾಸ್ಕರ್ ಆಚಾರ್,ಪ್ರಶಾಂತ್ ಅಂಬಲಪಾಡಿ,ವಿಷ್ಣು ಮೂರ್ತಿ ಉರಾಳ ಮತ್ತಿತರರು ಉಪಸ್ಥಿತರಿದ್ದರು.
ಪ್ರಶಾಂತ್ ಅಂಬಲಪಾಡಿ,ಅಜಯ್ ರಾಜ್ ಮಂಗಳೂರು, ಅರವಿಂದ ಮಣಿಪಾಲ್,
ಶಿವರಾಜ್ ವೀಕ್ಷಕ ವಿವರಣೆಯಲ್ಲಿ‌ ಸಹಕರಿಸಿದರು….
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

thirteen − twelve =