ಉಡುಪಿ ಜಿಲ್ಲೆಯ ಟೆನಿಸ್ಬಾಲ್ ಕ್ರಿಕೆಟ್ ಶ್ರೇಯೋಭಿವೃದ್ಧಿಗಾಗಿ ಸಮಾನ ಮನಸ್ಕ ಹಿರಿಯ ಆಟಗಾರರ ಒಗ್ಗೂಡುವಿಕೆಯಲ್ಲಿ ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ಅಸೋಸಿಯೇಷನ್ ಇವರ ಮೊದಲ ಯೋಜನೆಯಂತೆ ತಾಲೂಕು ಮಟ್ಟದ ಪ್ರತಿಭೆಗಳನ್ನು ಗುರುತಿಸುವ ಸದುದ್ದೇಶ ಡಿಸೆಂಬರ್ ತಿಂಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ.
ಉಡುಪಿ ಜಿಲ್ಲೆಯಾದ್ಯಂತ 7 ತಾಲೂಕುಗಳಲ್ಲಿ ಆಟಗಾರರ ನೋಂದಣಿ ಪ್ರಕ್ರಿಯೆಗೆ ಅಭೂತಪೂರ್ವ ಪ್ರತಿಕ್ರಿಯೆ ದೊರೆತಿದ್ದು,1000 ಕ್ಕೂ ಹೆಚ್ಚಿನ ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು.
2 ನೇ ಅತಿ ಹೆಚ್ಚು ಆಟಗಾರರ ನೋದಣಿ(223)ಯಲ್ಲಿ ಭಾಗವಹಿಸಿದ ಕುಂದಾಪುರ ತಾಲೂಕಿನಲ್ಲಿ ಮೊದಲ ಕ್ರಿಕೆಟ್ ಪಂದ್ಯಾಟ,ಡಿಸೆಂಬರ್ 18 ಮತ್ತು 19 ರಂದು ಕುಂದಾಪುರದ ಗಾಂಧಿ ಮೈದಾನದಲ್ಲಿ ನಡೆಯಲಿದೆ.
90 ರ ದಶಕದಲ್ಲಿ ಇತಿಹಾಸ ಬರೆದ ಕುಂದಾಪುರದ ಪ್ರಸಿದ್ಧ ತಂಡಗಳಾದ ಚಕ್ರವರ್ತಿ,ಟೊರ್ಪೆಡೋಸ್, ಮದೀನಾ,
ಜಾನ್ಸನ್,ಚಾಲೆಂಜ್,ಮಯೂರ,ಗೋಲ್ಡನ್ ಮಿಲ್ಲರ್,ಕೀಳೇಶ್ವರಿ,ಸ್ವಾಮಿ ಗಂಗೊಳ್ಳಿ,ರಾಯಲ್ ಗಂಗೊಳ್ಳಿ,ಅಂಶು ಕೋಟೇಶ್ವರ,ಮಿತೃವೃಂದ,ಲಕ್ಕಿಸ್ಟಾರ್ ಕೋಡಿ,ಮಲ್ಯಾಡಿ ಫ್ರೆಂಡ್ಸ್, ಜ್ವಾಲಿ ಅಂಕದಕಟ್ಟೆ,
ಸಮುದಾಯ ತಲ್ಲೂರು ಈ 16 ತಂಡಗಳು ಮತ್ತೆ ಅಖಾಡಕ್ಕಿಳಿಯಲಿದ್ದು,ಟೆನಿಸ್ಬಾಲ್ ಕ್ರಿಕೆಟ್ ನ ಗತಕಾಲದ ವೈಭವ ಮತ್ತೆ ಮರುಕಳಿಸಲಿದೆ ಎಂದು ಉಡುಪಿ ಜಿಲ್ಲೆ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾದ ಗೌತಮ್ ಶೆಟ್ಟಿ ಟೊರ್ಪೆಡೋಸ್ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ತಿಳಿಸಿದ್ದಾರೆ.
ಪಂದ್ಯಾವಳಿಯ ನೇರ ಪ್ರಸಾರ M9 ಸ್ಪೋರ್ಟ್ಸ್ ಬಿತ್ತರಿಸಲಿದೆ.