ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾದ ಗೌತಮ್ ಶೆಟ್ಟಿ ಸಾರಥ್ಯದಲ್ಲಿ, ಪದಾಧಿಕಾರಿಗಳು,ಸದಸ್ಯರ ಸಹಕಾರದೊಂದಿಗೆ 5 ತಾಲೂಕುಗಳಲ್ಲಿ ಯಶಸ್ವಿಯಾಗಿದ್ದು,ಇಂದಿನಿಂದ ಬ್ರಹ್ಮಾವರ,ಕುಂದಾಪುರ ತಾಲೂಕಿನ ಪಂದ್ಯಾಟ ಪ್ರಾರಂಭವಾಗಲಿದೆ.
ನಾಳೆ ಮಾರ್ಚ್ 31 ಗುರುವಾರ ಬೆಳಿಗ್ಗೆ 10.30 ಗಂಟೆಗೆ ಸರಿಯಾಗಿ ಬ್ರಹ್ಮಾವರ ತಾಲೂಕು ಮಟ್ಟದ ಪಂದ್ಯಾಟದ ಉದ್ಘಾಟನಾ ಸಮಾರಂಭ ನಡೆಯಲಿದೆ.ಮುಖ್ಯ ಅತಿಥಿಗಳಾಗಿ ಕುಂದಾಪುರ ಅಸಿಸ್ಟೆಂಟ್ ಕಮಿಷನರ್ ರಾಜು.ಕೆ.ಎಸ್,ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್,ಮಾಜಿ ಜಿಲ್ಲಾ ರೋಟರಿ ಗವರ್ನರ್ ಅಭಿನಂದನ್ ಶೆಟ್ಟಿ, ಟಿ.ಸಿ.ಎ ನಿರ್ದೇಶಕರಾದ ಸುಧೀರ್ ಶೆಟ್ಟಿ ಮಾರ್ಕೋಡು,ಟಿ.ಸಿ.ಎ ಗೌರವಾಧ್ಯಕ್ಷರಾದ ಗಿರೀಶ್ ಬೈಂದೂರು,ಶ್ರೀಧರ್ ಶೆಟ್ಟಿ ಬನ್ನಂಜೆ,ಟಿ.ಸಿ.ಎ ಕಾರ್ಯದರ್ಶಿ ಡಾ.ವಿನೋದ್ ನಾಯಕ್,ಟಿ.ಸಿ.ಎ ನಿರ್ದೇಶಕರಾದ ಸತೀಶ್ ಕೋಟ್ಯಾನ್ ಭಾಗವಹಿಸಲಿದ್ದಾರೆ.
ಏಪ್ರಿಲ್ 1 ಶುಕ್ರವಾರದಂದು ಬೆಳಿಗ್ಗೆ 10.30
ಗಂಟೆಗೆ ಸರಿಯಾಗಿ ಬಹು ನಿರೀಕ್ಷೆಯ ಕುಂದಾಪುರ ತಾಲೂಕಿನ ಪಂದ್ಯಾಟದ ಉದ್ಘಾಟನಾ ಸಮಾರಂಭ ನಡೆಯಲಿದ್ದು ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಕುಂದಾಪುರ ಡಿ.ವೈ.ಎಸ್.ಪಿ ಶ್ರೀಕಾಂತ್,ಬಿ.ಸಿ.ಸಿ ಡಿಗ್ರಿ ಕಾಲೇಜಿನ ಪ್ರಾಂಶುಪಾಲರಾದ ನಾರಾಯಣ್ ಶೆಟ್ಟಿ,ಯುವಜನ ಕ್ರೀಡಾ ಇಲಾಖೆ ಕುಂದಾಪುರದ ಕುಸುಮಾಕರ ಶೆಟ್ಟಿ, ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿಜಯ್ ಪೂಜಾರಿ,ಕುಂದಾಪುರ ನಾರಾಯಣಗುರು ಸಂಘದ ಅಧ್ಯಕ್ಷರಾದ ಅಶೋಕ್ ಪೂಜಾರಿ,ಟಿ.ಸಿ.ಎ ಉಪಾಧ್ಯಕ್ಷರಾದ ನಾರಾಯಣ್ ಶೆಟ್ಟಿ, ಅಮರ್ ನಾಥ್ ಭಟ್,ಟಿ.ಸಿ.ಎ ಕ್ರೀಡಾಸಂಯೋಜಕರಾದ ರಮೇಶ್ ಕುಂದರ್ ಕೋಟ,ಗಿರೀಶ್ ಬೈಂದೂರು ಮತ್ತು ಮನೋಜ್ ನಾಯರ್ ಭಾಗವಹಿಸಲಿದ್ದಾರೆ.
ಏಪ್ರಿಲ್ 2 ಶನಿವಾರ ಬೆಳಿಗ್ಗೆ ಮುಖ್ಯ ಅತಿಥಿಗಳಾಗಿ ಕುಂದಾಪುರ ವೃತ್ತ ನಿರೀಕ್ಷಕರಾದ ಗೋಪಾಲ ಕೃಷ್ಣ, ಬಿಸಿಸಿ ಪಿ.ಯು ಕಾಲೇಜಿನ ಪ್ರಾಂಶುಪಾಲ ಜಿ.ಎಮ್.ಗೊಂಡಾ,
ಟಿಸಿಎ ಉಪಾಧ್ಯಕ್ಷ ಪ್ರವೀಣ್ ಕಲಾಕಿರಣ,ಟಿಸಿಎ ನಿರ್ದೇಶಕರಾದ ಯಾದವ್ ನಾಯಕ್ ಕೆಮ್ಮಣ್ಣು,
ಸಿದ್ಧಿವಿನಾಯಕ ಹಾರ್ಡ್ ವೇರ್ ನ ಸಂಪತ್ ಕುಮಾರ್ ಶೆಟ್ಟಿ, ಟಿಸಿಎ ನಿರ್ದೇಶಕರಾದ ನಾಗರಾಜ್ ಶೆಟ್ಟಿ ಬೈಂದೂರು,ಸತೀಶ್ ಕುಂದರ್ ಕೋಟ,ರಂಜಿತ್ ಶೆಟ್ಟಿ,ಪಂದ್ಯಾಟದ ಆಯೋಜಕರಾದ ಕೆ.ಪಿ ಸತೀಶ್ ಭಾಗವಹಿಸಲಿದ್ದಾರೆ.
ಏಪ್ರಿಲ್ 3 ರವಿವಾರ ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಕುಂದಾಪುರ ಸಬ್ ಇನ್ಸ್ಪೆಕ್ಟರ್ ಸದಾಶಿವ ಗವರೋಜಿ,.ಟಿ.ಸಿ.ಎ ಪದಾಧಿಕಾರಿಗಳು ಹಾಗೂಜನತಾ ಫಿಶ್ ಮೀಲ್ ಕೋಟ ಪ್ರವರ್ತಕರಾದ ಪ್ರಶಾಂತ್ ಕುಂದರ್,ಟಿ.ಸಿ.ಎ ಗೌರವಾಧ್ಯಕ್ಷರಾದ ಶ್ರೀಪಾದ್ ಉಪಾಧ್ಯಾಯ, ಗೌರವಾಧ್ಯಕ್ಷರಾದ ಶರತ್ ಶೆಟ್ಟಿ ಪಡುಬಿದ್ರಿ,
ಪದಾಧಿಕಾರಿಗಳು ಡಾ.ಉರಾಳ್ ಕೋಟ,ತಾರ್ಜಾನಿ ಇನ್ಷೂರೆನ್ಸ್ ಮತ್ತು ಕ್ಲೈಮ್ಸ್ ನ ಸಿ.ಇ.ಓ ರವಿ ಉಡುಪ,ಟಿ.ಸಿ.ಎ ಉಪಾಧ್ಯಕ್ಷರಾದ ಉದಯ್ ಕುಮಾರ್ ಕಿನ್ನಿಮುಲ್ಕಿ ಮತ್ತು ಟಿ.ಸಿ.ಎ ಪದಾಧಿಕಾರಿಗಳಾದ ಸದಾನಂದ ಶಿರ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.