2020 ರ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಜ್ಯದ ಶಿಸ್ತುಬದ್ಧ ಸಂಸ್ಥೆ ವೆಂಕಟರಮಣ ಸ್ಪೋರ್ಟ್ಸ್&ಕಲ್ಚರಲ್ ಕ್ಲಬ್(ರಿ) ಪ್ರೀಮಿಯರ್ ಲೀಗ್ ನ ಯಶಸ್ವಿ 13 ನೇ ವರ್ಷದ ಸಂಭ್ರಮದ ಪ್ರಯುಕ್ತ ಡಿಸೆಂಬರ್ 13 ರ ರವಿವಾರ ಉದ್ಯಾವರ ಗ್ರಾಮ ಪಂಚಾಯತ್ ಮೈದಾನದಲ್ಲಿ ವೆಂಕಟರಮಣ ತಂಡದ ಸದಸ್ಯರಿಗಾಗಿ ಪಿ.ಪಿ.ಎಲ್-13 ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದ್ದಾರೆ.
*ಶಿಸ್ತಿಗಾಗಿ ಕ್ರಿಕೆಟ್,ಸಮಾಜಕ್ಕಾಗಿ ತಂಡ*
ಪಿ.ಪಿ.ಎಲ್ ನ ಉದ್ಘಾಟನಾ ಸಮಾರಂಭ ಬೆಳಿಗ್ಗೆ ಸರಿಯಾಗಿ 8.30 ಗೆ ನಡೆಯಲಿದ್ದು.ಈ ಸಂದರ್ಭ ತಂಡದ ಪ್ರತಿಯೊಬ್ಬ ಸದಸ್ಯರಿಗೂ ಪ್ರಕೃತಿ ಉಳಿಸುವ ಸಲುವಾಗಿ ಗಿಡ ವಿತರಣೆ,ತಂಡದ ಎಲ್ಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ,ತಂಡದ ವತಿಯಿಂದ ನಡೆಯುವ ಆನ್ಲೈನ್ ಸ್ಪರ್ಧೆ(ಚಿತ್ರಕಲೆ,ನೃತ್ಯ, ಸಂಗೀತ) ಬಹುಮಾನ ವಿತರಣೆ,ಅಭೂತಪೂರ್ವ ಸಾಧನೆ ಮಾಡಿದ ವಿದ್ಯಾರ್ಥಿಗೆ ಸನ್ಮಾನ,ವಿಶೇಷ ಚೇತನ ಚಿತ್ರ ಕಲಾವಿದ ಶಿರ್ವದ ಗಣೇಶ್ ಪಂಜಿಮಾರು ಇವರಿಗೆ ಗೌರವಪೂರ್ಣ ಅಭಿನಂದನಾ ಕಾರ್ಯಕ್ರಮ,ವಿ.ಎಸ್.ಸಿ ಬ್ಲಡ್ ಫಾರ್ ಲೈಫ್ ನ ರಕ್ತದಾನಿ ಸದಸ್ಯರಿಗೆ ಜೀವರಕ್ಷಕ ಗೌರವ ಪ್ರಶಸ್ತಿ,ಹಿರಿಯ ಸಕ್ರಿಯ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ಮಧ್ಯಮುಕ್ತ ಸಮಾಜ,ರಕ್ತದಾನದ ಮಹತ್ವದ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಲಿದೆ.
ವೆಂಕಟರಮಣ ಪಿತ್ರೋಡಿಯ ಆಟಗಾರರನ್ನೊಳಗೊಂಡ 6 ತಂಡಗಳಾದ 1)ವಿ.ಎಸ್.ಸಿ ಪ್ರೆಸಿಡೆಂಟ್ ಇಲೆವೆನ್,2)ವಿ.ಎಸ್.ಸಿ ರಾಕ್ ಸ್ಟಾರ್ಸ್,3)ವಿ.ಎಸ್.ಸಿ ಸನ್ ರೈಸರ್ಸ್,4)ವಿ.ಎಸ್.ಸಿ ವೆಂಕಿ ಇಲೆವೆನ್,5)ವಿ.ಎಸ್.ಸಿ ಯು.ಆರ್ ಬಾಯ್ಸ್ 6)ವಿ.ಎಸ್.ಸಿ ಚಾಂಪಿಯನ್ಸ್ ತಂಡಗಳು ಪಿ.ಪಿ.ಎಲ್-13 ರ ಪ್ರಶಸ್ತಿಗಾಗಿ ಸೆಣಸಾಡಲಿದೆ.