ಟೋಕಿಯೋ: ವಿಶ್ವ ಬ್ಯಾಡ್ಮಿಂಟನ್ ಅಂಕಣದಲ್ಲಿ ಇಬ್ಬರೂ ಮದಗಜಗಳ ಹೋರಾಟವೆಂದೆ ಖ್ಯಾತಿ ಪಡೆದ ಪಿ.ವಿ. ಸಿಂಧು ಮತ್ತು ಯಮಗುಚಿ ನಡುವಿನ ಪಂದ್ಯದಲ್ಲಿ ಪಿ ವಿ ಸಿಂಧು ಗೆಲುವಿನ ನಗೆಬಿರಿವುದರ ಜೋತೆಗೆ ಪದಕದ ಖಚಿತದೊಂದಿಗೆ ಸೆಮಿ ಪೈನಲ್ ಹಂತಕ್ಕೆ ತಲುಪಿದ್ದಾರೆ
ಮೊದಲಿನ ಸೆಟ್ ನಲ್ಲಿ ಇಬ್ಬರೂ ಅಂಕ ಪಡೆಯಲು ಹೋರಾಟ ನಡೆಸಿದರೂ ಸಿಂಧು ತಮ್ಮ ಆಕ್ರಮಣಕಾರಿ ಆಟದಿಂದ ಮೇಲುಗೈ ಸಾಧಿಸಿದರು. ಆದರೆ ಎರಡನೇ ಸೆಟ್ ಅಷ್ಟು ಸುಲಭದ್ದಾಗಿರಲಿಲ್ಲ ಅದರಲ್ಲೂ ಸ್ಕೋರ್ 10 ರ ಮೇಲೆ ತಲುಪಿದ ಮೇಲೆ ಇಬ್ಬರೂ ಜಿದ್ದಿಗೆ ಬಿದ್ದವರಂತೆ ಹೋರಾಡಿದರು

ಆದರೆ ಸಿಂಧು ಹೊಡೆತವನ್ನು ನಿಭಾಯಿಸಲು ಯಮಗುಚಿ ತಪ್ಪು ಮಾಡಿದ್ದರಿಂದ ಒತ್ತಡ ಬಿದ್ದು ಸೋತಿದ್ದು ಸ್ಪಷ್ಟವಾಗಿ ಕಾಣುತ್ತಿತ್ತು. ಯಮಗುಚಿ ಒತ್ತಡಕ್ಕೆ ಸಿಲುಕಿ ನಿಭಾಯಿಸಲಾಗದೇ ಕೆಲವೊಂದು ತಪ್ಪು ಆಟವಾಡಿದರೆ ಸಿಂಧು ಒತ್ತಡವನ್ನು ಕೂಲ್ ಆಗಿ ತೆಗೆದುಕೊಂಡು ಕೊನೆಯವರೆಗೂ ತಾಳ್ಮೆ ಕಳೆದುಕೊಳ್ಳದೆ ಆಟವಾಡಿ ಗೆಲುವಿಗೆ ದಡ ಸೇರಿದರು.

ಈ ಬಾರಿ ಒಲಿಂಪಿಕ್ಸ್ ಗಾಗಿ ಸಿಂಧು ಭರ್ಜರಿ ತಯಾರಿಯನ್ನೇ ಮಾಡಿಕೊಂಡಿದ್ದರು ಲಂಡನ್ ಗೆ ತೆರಳಿ ವಿಶೇಷವಾಗಿ ಮಾನಸಿಕವಾಗಿ ಫಿಟ್ ಆಗಿರಲು ತರಬೇತಿ ಪಡೆದಿದ್ದರು. ಅದೆಲ್ಲದರ ಫಲ ಅವರಿಗೆ ಇಂದಿನ ಪಂದ್ಯದಲ್ಲಿ ಕೈ ಹಿಡಿಯಿತು. ಸಿಂಧು ಇಂದು ಆಡಿದ ರೀತಿ ಆಕೆ 2019 ರಲ್ಲಿ ವಿಶ್ವ ಚಾಂಪಿಯನ್ ಶಿಪ್ ಚಿನ್ನದ ಪದಕ ಗೆಲ್ಲುವಾಗ ಇದ್ದಂತಹ ಹುರುಪು ಕಂಡುಬಂತು. ಇದೇ ಫಾರ್ಮ್ ಮುಂದುವರಿಸಿದರೆ ಆಕೆ ಸತತ ಎರಡನೇ ಬಾರಿಗೆ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಅಥವಾ ಚಿನ್ನದ ಪದಕ ಗೆಲ್ಲುವುದನ್ನು ಯಾರಿಂದಲೂ ತಪ್ಪಿಸಲಾಗದು.