Categories
ಬ್ಯಾಡ್ಮಿಂಟನ್

ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ನ 5ನೇ ಆವೃತ್ತಿ, ಹಿಂದೆ ಸರಿದ ಸೈನಾ

ನವದೆಹಲಿ (ಪಿಟಿಐ): ಭಾರತದ ಪ್ರಮುಖ ಸಿಂಗಲ್ಸ್‌ ಆಟಗಾರ್ತಿ ಸೈನಾ ನೆಹ್ವಾಲ್‌ ಅವರು ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ (ಪಿಬಿಎಲ್‌) ಐದನೇ ಆವೃತ್ತಿಯಿಂದ ಹಿಂದೆ ಸರಿದಿದ್ದಾರೆ.

ಮುಂದಿನ ಋತುವಿನಲ್ಲಿ ನಡೆಯುವ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಅವರು ಇದಕ್ಕಾಗಿ ಸೂಕ್ತ ಸಿದ್ಧತೆ ಕೈಗೊಳ್ಳುವ ಉದ್ದೇಶದಿಂದ ಈ ತೀರ್ಮಾನ ಕೈಗೊಂಡಿದ್ದಾರೆ.

ಐದನೇ ಆವೃತ್ತಿಯ ಪಿಬಿಎಲ್‌, ಮುಂದಿನ ವರ್ಷದ ಜನವರಿ 20ರಿಂದ ಫೆಬ್ರುವರಿ 9ರವರೆಗೆ ನಡೆಯಲಿದೆ. 29 ವರ್ಷ ವಯಸ್ಸಿನ ಸೈನಾ, ಹಿಂದಿನ ಆವೃತ್ತಿಯಲ್ಲಿ ನಾರ್ತ್‌ ಈಸ್ಟರ್ನ್‌ ವಾರಿಯರ್ಸ್‌ ತಂಡದ ಪರ ಆಡಿದ್ದರು.

‘ಗಾಯ ಹಾಗೂ ಇತರ ಕಾರಣಗಳಿಂದಾಗಿ ಈ ವರ್ಷ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ನನ್ನಿಂದ ಉತ್ತಮ ಸಾಮರ್ಥ್ಯ ಮೂಡಿಬರಲಿಲ್ಲ. ಮುಂದಿನ ಋತುವಿನಲ್ಲಾದರೂ ಚೆನ್ನಾಗಿ ಆಡಿ ಪ್ರಶಸ್ತಿ ಗೆಲ್ಲಬೇಕು ಎಂದು ತೀರ್ಮಾನಿಸಿದ್ದೇನೆ. ಇದಕ್ಕಾಗಿ ಕಠಿಣ ಅಭ್ಯಾಸ ನಡೆಸಬೇಕಿದೆ. ಹೀಗಾಗಿ ಮುಂದಿನ ಆವೃತ್ತಿಯ ಪಿಬಿಎಲ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ. ಇದಕ್ಕಾಗಿ ಅಭಿಮಾನಿಗಳ ಕ್ಷಮೆ ಕೇಳುತ್ತೇನೆ’ ಎಂದು ಸೈನಾ ಟ್ವೀಟ್‌ ಮಾಡಿದ್ದಾರೆ.

2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿರುವ ಸೈನಾ, ಸದ್ಯ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನ
ದಲ್ಲಿದ್ದಾರೆ. ಈ ವರ್ಷ ಅವರು ಒಟ್ಟು ಆರು ಟೂರ್ನಿಗಳಲ್ಲಿ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದರು.

29 ವರ್ಷ ವಯಸ್ಸಿನ ಸೈನಾ, ಹಿಂದಿನ ಆವೃತ್ತಿಯಲ್ಲಿ ನಾರ್ತ್‌ ಈಸ್ಟರ್ನ್‌ ವಾರಿಯರ್ಸ್‌ ತಂಡದ ಪರ ಆಡಿದ್ದರು.