Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ ಸ್ಪೋರ್ಟ್ಸ್

ಮಹಾದೇವಿ ಸ್ಪೋರ್ಟ್ಸ್ ಮತ್ತು ಟ್ರೋಫಿಸ್ ಮಳಿಗೆ ಉದ್ಘಾಟನೆ ಮತ್ತು ಕ್ರೀಡಾ ಸಾಧಕರಿಗೆ ಸನ್ಮಾನ

ಕುಂದಾಪುರ-ಭಾಸ್ಕರ್ ಶೆಟ್ಟಿ ಮಲ್ಯಾಡಿ ಇವರ ಮಾಲೀಕತ್ವದ ಮಹಾದೇವಿ ಸ್ಪೋರ್ಟ್ಸ್ ಮತ್ತು ಟ್ರೋಫಿಗಳ ಮಳಿಗೆ ತೆಕ್ಕಟ್ಟೆ ಬಸ್ ನಿಲ್ದಾಣದ ಸಮೀಪದ ಶ್ಯಾನುಭೋಗ್ ಬಿಲ್ಡಿಂಗ್ ನಲ್ಲಿ ಜುಲೈ 23 ರವಿವಾರ ಬೆಳಿಗ್ಗೆ ಶುಭಾರಂಭಗೊಂಡಿತು.
ಹಿರಿಯ ಕಾಂಗ್ರೆಸ್ ಮುಖಂಡರಾದ ಶಿವರಾಮ ಶೆಟ್ಟಿ ಮಲ್ಯಾಡಿ ಇವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.ಉದ್ಘಾಟನಾ ಕಾರ್ಯಕ್ರಮದ ಬಳಿಕ ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಉಡುಪಿ ಜಿಲ್ಲಾ
ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಗೌತಮ್ ಶೆಟ್ಟಿ,ಅಂತರಾಷ್ಟ್ರೀಯ ಟೆನಿಸ್ಬಾಲ್ ಕ್ರಿಕೆಟಿಗ ರಾಜಾ ಸಾಲಿಗ್ರಾಮ,ಸ್ಪೋರ್ಟ್ಸ್ ಕನ್ನಡ ಸಂಪಾದಕ ಕೋಟ ರಾಮಕೃಷ್ಣ ಆಚಾರ್ ಇವರನ್ನು ಗೌರವಿಸಲಾಯಿತು.
ಈ ಸಂದರ್ಭ ಉಡುಪಿ ಜಿಲ್ಲಾ ಯುವಜನ ಕ್ರೀಡಾಇಲಾಖೆಯ ನಿರ್ದೇಶಕರಾದ ರೋಶನ್ ಶೆಟ್ಟಿ,
ತುಕಾರಾಮ್ ಶೆಣೈ ತೆಕ್ಕಟ್ಟೆ,ಕೊರ್ಗಿ ವಿಠಲ್ ಶೆಟ್ಟಿ,ದೈಹಿಕ ಶಿಕ್ಷಕರಾದ ಗಣೇಶ್ ಶೆಟ್ಟಿ ಕಟ್ಕೆರೆ,ಸುಧೀರ್ ಶೆಟ್ಟಿ ಮಲ್ಯಾಡಿ,ಅಂತರಾಷ್ಟ್ರೀಯ ವಾಲಿಬಾಲ್ ಆಟಗಾರ ಸುದೀಪ್ ಶೆಟ್ಟಿ ತೆಕ್ಕಟ್ಟೆ,ಇನ್ನಿಂಗ್ಸ್ ಸ್ಟಾರ್ ಕೆದೂರು,
ಯುವಕ ಮಂಡಲ ಉಳ್ತೂರು,ತೆಕ್ಕಟ್ಟೆ ಫ್ರೆಂಡ್ಸ್ ನ ಸರ್ವ ಸದಸ್ಯರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.
ವಿವಿಧ ಕ್ರೀಡೆಗಳಿಗೆ ಸಂಬಂಧಿಸಿದ ಅತ್ಯುತ್ತಮ ಗುಣಮಟ್ಟದ ಕ್ರೀಡಾ ಪರಿಕರಗಳು ಅತ್ಯಾಕರ್ಷಕ
ದರದಲ್ಲಿ ಲಭ್ಯವಿದ್ದು, ಗ್ರಾಹಕರು ಮಲ್ಯಾಡಿ ಸ್ಪೋರ್ಟ್ಸ್ ಮತ್ತು ಟ್ರೋಫಿಸ್ ಮಳಿಗೆಗೆ ಭೇಟಿ ನೀಡಿ ಪ್ರೋತ್ಸಾಹಿಸಬೇಕಾಗಿ ವಿನಂತಿ.
ಸಂಪರ್ಕ ನಂಬರ್-9731578110